Realtime blog statisticsweb statistics
udupibits.in
Breaking News
ಉಡುಪಿ: ಅಂಚೆ ಕಚೇರಿಗಳಲ್ಲಿ ಇಂಡಿಯನ್ ಪೋಸ್ಟಲ್ ಆರ್ಡರ್ ಅಲಭ್ಯತೆ- ಸಮಸ್ಯೆ ಪರಿಹರಿಸಲು ಮಾಹಿತಿ ಹಕ್ಕು ಕಾರ್ಯಕರ್ತರಿಂದ ಪ್ರಧಾನಿಗೆ ಪತ್ರ

ಸರಣಿ ಅಪಘಾತ: ಬೈಕ್ ಸವಾರ ಮೃತ್ಯು

ಉಡುಪಿ: ನಂದಿಕೂರು ಕಾರ್ಪೋರೇಶನ್ ಬ್ಯಾಂಕ್ ಬಳಿ, ಪಡುಬಿದ್ರಿ-ಕಾರ್ಕಳ ರಾಜ್ಯ ಹೆದ್ದಾರಿ-1ರಲ್ಲಿ ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ವಿದ್ಯಾರ್ಥಿ ಕೃಷ್ಣ ಮಯ್ಯ (19) ಎಂಬವರು ಮೃತಪಟ್ಟಿದ್ದಾರೆ.
ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ಸಂಚರಿಸುತ್ತಿದ್ದ ಕ್ಲೇಟನ್ ಶರೋನ್ ಮೆಸ್ಕಿತ್ತ್ ಎಂಬವರು ಚಲಾಯಿಸುತ್ತಿದ್ದ ಕೆಎ 19 ಇಪಿ 45690 ನಂಬ್ರದ ಬೈಕ್, ಕೃಷ್ಣ ಮಯ್ಯರವರು ಚಲಾಯಿಸುತ್ತಿದ್ದ ಕೆಎ 19 ಇಎಲ್ 5689 ನಂಬ್ರದ ಬೈಕ್ ಗೆ ಡಿಕ್ಕಿ ಹೊಡೆದಿದೆ. ಇದರಿಂದಾಗಿ ಕೃಷ್ಣ ಮಯ್ಯರವರು ಚಲಾಯಿಸುತ್ತಿದ್ದ ಬೈಕ್, ಮಂಗಳೂರಿನಿಂದ ಹೆಬ್ರಿಗೆ ಸಂಚರಿಸುತ್ತಿದ್ದ ಅಕ್ಕಿ ಸಾಗಾಟ ಮಾಡುವ ಕೆಎ 19 ಎಎ 177 ನಂಬ್ರದ ಲಾರಿಕೆ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ ಕೃಷ್ಣ ಮಯ್ಯರವರು ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
ಅಪಘಾತದಲ್ಲಿ, ಬೈಕ್ ಸವಾರರಾದ ಕ್ಲೇಟನ್ ಶರೋನ್ ಮೆಸ್ಕಿತ್ತ್ ಹಾಗೂ ಸಹ ಸವಾರ ಮಂಗಳೂರು ಪಂಪ್ ವೆಲ್ ನಿವಾಸಿ ಪ್ರತೀಶ್ ಎಂಬವರಿಗೆ ಗಾಯವಾಗಿವೆ. ಅಪಘಾತದ ಬಗ್ಗೆ, ಲಾರಿ ನಿರ್ವಾಹಕ ಕಾಸರಗೋಡು ಜಿಲ್ಲೆ ಬದಿಯಡ್ಕ ಉಕ್ಕಿನಡ್ಕ ನಿವಾಸಿ ಕೃಷ್ಣ ನಾಯ್ಕ ನೀಡಿದ ದೂರಿನಂತೆ, ಬೈಕ್ ಸವಾರ ಕ್ಲೇಟನ್ ಶರೋನ್ ಮೆಸ್ಕಿತ್ತ್ ವಿರುದ್ಧ ಪಡುಬಿದ್ರಿ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *