Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲಾ ಸರಕಾರಿ ಆಸ್ಪತ್ರೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯಿಂದ ಅರ್ಜಿದಾರನಿಗೆ ಅಪೂರ್ಣ ಮಾಹಿತಿ ನೀಡಿ ಕಾಯಿದೆ ಉಲ್ಲಂಘನೆ !

ಅಪಘಾತ: ಬೈಕ್ ಸವಾರ ಮೃತ್ಯು

ಉಡುಪಿ: ಕಾಪು ಕಡೆಯಿಂದ ಶಿರ್ವ ಕಡೆಗೆ ಸಂಚರಿಸುತ್ತಿದ್ದ ರಿಕ್ಷಾ, ಯಾವುದೇ ಮುನ್ಸೂಚನೆ ನೀಡದೆ ದಿಢೀರನೇ ಬಲಕ್ಕೆ ತಿರುಗಿಸಿದ ಪರಿಣಾಮಗಾಗಿ ಹಿಂಬದಿಯಿಂದ ಬರುತ್ತಿದ್ದ ಬೈಕ್ ರಿಕ್ಷಾಕ್ಕೆ ಡಿಕ್ಕಿ ಹೊಡೆದು ಬೈಕಲ್ ಸವಾರ ಗಂಭೀರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಇಂದು ಮಧ್ಯಾಹ್ನ ಕಳತ್ತೂರು ಕುಶಲ ಶೆಟ್ಟಿ ಅಡಿಟೋರಿಯಂ ಬಳಿ ಸಂಭವಿಸಿದೆ.
ಕಾಪು ಕಡೆಯಿಂದ ಶಿರ್ವ ಕಡೆಗೆ ಸಂಚರಿಸುತ್ತಿದ್ದ ಕೆಎ 19 ಎಸ್ 7642 ನಂಬ್ರದ ಬೈಕ್ ಸವಾರ, ಬೆಳ್ಮಣ್ ಗ್ರಾಮದ ಜಂತ್ರ ಆಶ್ರಯ ಕಾಲನಿ ನಿವಾಸಿ ಶಶಿಧರ ಆಚಾರ್ಯ ಮೃತ ದುರ್ದೈವಿ.
ಅಪಘಾತಕ್ಕೆ ಕಾರಣನಾದ ಕೆಎ 20 ಡಿ 1960 ನಂಬ್ರದ ರಿಕ್ಷಾ ಚಾಲಕನ ವಿರುದ್ಧ ಶಿರ್ವ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *