Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಎಗ್ ಪಪ್ಸ್ ಒಳಗೆ ಸಿಗರೇಟ್ ತುಂಡು ಪತ್ತೆ !

ಮಂಜೇಶ್ವರ: ಹೊಸಂಗಡಿಯ ಬೇಕರಿಯೊಂದರಲ್ಲಿ ಗ್ರಾಹಕನಿಗೆ ವಿತರಿಸಲಾದ ಎಗ್ ಪಪ್ಸ್ ಒಳಗಡೆ ಸಿಗರೇಟು ತುಂಡು ಪತ್ತೆಯಾಗಿದೆ.

ಹೊಸಂಗಡಿ ಪರಿಸರದಲ್ಲಿರುವ ಬೇಕರಿಯೊಂದರಿಂದ ಉದ್ಯಾವರ ನಿವಾಸಿ ನಿಯಾಝ್ ಎಂಬವರು ಖರೀದಿಸಿದ ಪಪ್ಸ್ ಒಳಗಡೆ ಸಿಗರೇಟ್ ತುಂಡು ಲಭಿಸಿದೆ.

ನಿಯಾಝ್ ಅವರು ಫೆಬ್ರವರಿ 22ರಂದು ಕುಟುಂಬ ಸಹಿತ ಬೇಕರಿಗೆ ತೆರಳಿದ್ದರು. ಬೇಕರಿಯಿಂದ 3 ಎಗ್ ಪಪ್ಸ್ ಗಳನ್ನು ಖರೀದಿಸಿದ್ದರು. ಹೀಗೆ ಖರೀದಿಸಿದ ಪಪ್ಸ್ ಗಳ ಪೈಕಿ ಒಂದು ಪಪ್ಸ್ ನ್ನು ನಿಯಾಝ್ ಅರ್ಧ ತಿನ್ನುತ್ತಿರುವಂತೆಯೇ ಅದರೊಳಗಿಂದ ಸಿಗರೇಟ್ ವಾಸನೆ ಬಂತು ಮತ್ತು ನೋಡಿದಾಗ ಸಿಗರೇಟಿನ ಅರ್ಧ ತುಂಡು ಬಾಯೊಳಗಿಂದ ಪತ್ತೆಯಾಯಿತು ಎಂದು ದೂರಲಾಗಿದೆ.

ಪಪ್ಸ್ ಒಳಗಡೆ ಸಿಗರೇಟ್ ತುಂಡು ಪತ್ತೆಯಾದ ಕೂಡಲೇ ನಿಯಾಝ್ ರವರು ವಿಷಯವನ್ನು ಬೇಕರಿಯವರ ಗಮನಕ್ಕೆ ತಂದರು. ಆದರೆ, ಬೇಕರಿಯವರು ಇದನ್ನು ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದರು ಎಂದು ಆರೋಪಿಸಲಾಗಿದೆ. ಪಪ್ಸ್ ನಲ್ಲಿ ಸಿಗರೇಟ್ ತುಂಡು ಪತ್ತೆಯಾದ ಬಗ್ಗೆ ಆರೋಗ್ಯ ಇಲಾಖೆಗೆ ದೂರು ನೀಡುವುದಾಗಿ ನಿಯಾಝ್ ತಿಳಿಸಿದ್ದಾರೆ.

Leave a Reply

Your email address will not be published. Required fields are marked *