Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ದಲಿತ ನಾಯಕರು ಸೋನಿಯಾರನ್ನು ಮಾಲ್ತಿದೇವಿಗೆ ಹೋ ಲಿಸುವರೇ ?: ಜಯನ್ ಮಲ್ಪೆ

ಉಡುಪಿ: ಕಚ್ಚೂರು ಮಾಲ್ತಿದೇವಿ ಮತ್ತು ಬಬ್ಬುಸ್ವಾಮಿ ದೈವಸ್ಥಾನಕ್ಕೆ ಒಂದು ಕೋಟಿ ರು. ನೀಡಿದ್ದಕ್ಕೆ ದೈವಸ್ಥಾನದ ಆಡಳಿತ ಮಂಡಳಿಯ ದಲಿತ ಪ್ರಮುಖರು, ಭಾರೀ ಭ್ರಷ್ಟಾಚಾರದ ಆರೋಪದಲ್ಲಿ ಜೈಲಿಗೆ ಹೋದ ಯಡಿಯೂರಪ್ಪರನ್ನು ಬಬ್ಬುಸ್ವಾಮಿಗೆ ಹೋಲಿಸುತ್ತಾರೆ. ಸ್ವಾಭಿಮಾನ ಇಲ್ಲದಿರುವುದೇ ಈ ರೀತಿ ಹೇಳಲು ಕಾರಣವಾಗಿದೆ. ಇವರು, ಸೋನಿಯಾ ಗಾಂಧಿ ಕ್ಷೇತ್ರಕ್ಕೆ ಕೋಟಿ ರು. ನೀಡಿದರೆ ಸೋನಿಯಾರನ್ನು ಮಾಲ್ತಿದೇವಿಗೆ ಹೋಲಿಸುವರೇ ?, ಕುಮಾರಸ್ವಾಮಿಯನ್ನು ಗುಳಿಗನ ಜೊತೆ ಹೋಲಿಸುವರೇ ?, ಕಮ್ಯುನಿಸ್ಟರನ್ನು ಪಂಜುರ್ಲಿಗೆ ಹೋಲಿಸುವರೇ ? ಎಂದು ದಲಿತ ಮುಖಂಡ, ಚಿಂತಕ, ಲೇಖಕ ಜಯನ್ ಮಲ್ಪೆ ಅವರು ತೀಕ್ಷ್ಣವಾಗಿ ಪವಿಮರ್ಶಿಸಿದರು.
ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಎಸ್ಸಿ/ಎಸ್ಟಿ ಸಂಘದ ವತಿಯಿಂದ ಹಮ್ಮಿಕೊಂಡ ಎರಡು ದಿನಗಳ ಅಂತರ್ಕಾಲೇಜು ಎಸ್ಸಿ/ಎಸ್ಟಿ ವಿದ್ಯಾರ್ಥಿಗಳ ವಸತಿ ಕಾರ್ಯಾಗಾರವನ್ನು ಜ.4 ರಂದು ಬೆಳಗ್ಗೆ ಹಿಂಗಾರವನ್ನು ಅರಳಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಇಂದಿನ ಶಿಕ್ಷಣ ವ್ಯವಸ್ಥೆ ಅಸಮಾನತೆಯಿಂದ ಕೂಡಿದೆ, ಕೇವಲ ಭ್ರಮೆಗಳನ್ನು ಹುಟ್ಟಿಸಲಷ್ಟೇ ಶಿಕ್ಷಣದಿಂದ ಸಾಧ್ಯವಾಗಿದೆ. ದುಡ್ಡಿದ್ದವರು ಖಾಸಗಿ ಶಾಲೆಗೂ, ದುಡ್ಡಿಲ್ಲದವರು ಸರಕಾರಿ ಶಾಲೆಗೂ ಹೋಗುವ ವ್ಯವಸ್ಥೆಯಿಂದ ಸಮಾನತೆಯನ್ನು ನಿರೀಕ್ಷಿಸಲು ಸಾಧ್ಯವೇ ಎಂದು
ಪ್ರಶ್ನಿಸಿದ ಜಯನ್, ಸಮಾನ ಅವಕಾಶ ಎಂಬುದು ಸರಕಾರ ಬಿಡುತ್ತಿರುವ ಬುರುಡೆ ಎಂದು ಟೀಕಿಸಿದರು.
ಮೀಸಲಾತಿಯ ಲಾಭ ಪಡೆದುಕೊಂಡು ಸರಕಾರಿ ಉದ್ಓಗ ಗಿಟ್ಟಿಸಿಕೊಂಡ ದಲಿತರು ಉದ್ಓಗ ಸಿಕ್ಕಿದ ಬಳಿಕ ತಮ್ಮ ಸಮುದಾಯವನ್ನು ಮರೆಯುವ ಮೂಲಕ ಅಂಬೇಡ್ಕರ್ ಗೆ ದ್ರೋಹ ಬಗೆಯುತ್ತಿದ್ದಾರೆ ಎಂದು ದೂರಿದ ಜಯನ್ ಮಲ್ಪೆ ಅವರು, ಜಾಗತೀಕರಣದಿಂದ ಜಾತಿ ನಾಶವಾಗುತ್ತೆ ಎಂದು ಹೇಳಲಾಗಿತ್ತು, ಆದರೆ ಇದೀಗ ದಿನದಿಂದ ದಿನಕ್ಕೆ ಜಾತಿ ಗಟ್ಟಿಯಾಗುತ್ತಿದೆ, ದಲಿತ ದೌರ್ಜನ್ಯ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾಲೇಜು ಪ್ರಾಂಶುಪಾಲರಾದ ಡಾ.ನೇರಿ ಕರ್ನೇಲಿಯೋ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಎಸ್ ಸಿ/ಎಸ್ ಟಿ ಸಂಘದ ನಿರ್ದೇಶಕರಾದ ಪ್ರೊ.ಸಿರಿಲ್ ಮಥಾಯಸ್ ಪ್ರಸ್ತಾವನೆ ಮಾಡಿದರು. ಇನ್ನೋರ್ವ ನಿರ್ದೇಶಕರಾದ ಸತೀಶ್ ನಾಯಕ್ ಹಾಗೂ ವಿದ್ಯಾರ್ಥಿ ನಾಯಕ ಕಿಶೋರ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *