Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೊಳೆಗೆ ಹಾರಿ ವೃದ್ಧನಿಂದ ದೇಹಹತ್ಯೆ

ಉಡುಪಿ: ಉಡುಪಿ ತಾಲೂಕು ಹೊಸಾಳ ಗ್ರಾಮದ ಬಾರ್ಕೂರು ಸಮೀಪದ ನಾಗರಮಠ ನಿವಾಸಿ ರಾಮ ಪೂಜಾರಿ (75) ಎಂಬವರು ಗ್ರಾಮದಲ್ಲಿ ಹರಿಯುವ ಸೀತಾನದಿ ಕವಲು ಹೊಳೆಗೆ ಹಾರಿ ದೇಹಹತ್ಯೆ ಮಾಡಿಕೊಂಡಿದ್ದಾರೆ.
ರಾಮ ಪೂಜಾರಿಯವರು ಕಳೆದ 5 ತಿಂಗಳುಗಳಿಂದ ಗಂಟಲು ಕ್ಯಾನ್ಸರ್ ನಿಂದ ಬಳಲುತ್ತಿದ್ದು, ಇದರಿಂದಾಗಿ ಆಹಾರ ಸೇವನೆ ಮಾಡಲಾಗದ ಸ್ಥಿತಿ ತಲುಪಿದ್ದು, ಇದೇ ಕಾರಣಕ್ಕೆ ಮನನೊಂದು ಹೊಳೆಗೆ ಹಾರಿರಬಹುದೆಂದು ಹೇಳಲಾಗಿದೆ.
ಈ ಬಗ್ಗೆ, ಮೃತರ ಪುತ್ರ ಅರುಣ ಪೂಜಾರಿ ನೀಡಿದ ಹೇಳಿಕೆಯಂತೆ ಬ್ರಹ್ಮಾವರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *