Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಸರಣಿ ಹಗರಣ ಸಾಬೀತು: ಅಂಬಲಪಾಡಿ ದೇವಾಲಯಕ್ಕೆ ಕಾರ್ಯನಿರ್ವಹಣಾಧಿಕಾರಿ ನೇಮಕಕ್ಕೆ, ಆಡಳಿತ ಮೊಕ್ತೇಸರ ಡಾ.ವಿಜಯ ಬಲ್ಲಾಳರ ವಿರುದ್ಧ ಶಿಸ್ತು ಕ್ರಮಕ್ಕೆ, ಸಮಗ್ರ ಲೆಕ್ಕಪತ್ರಗಳ ತಪಾಸಣೆಗೆ ಆದೇಶ

ಉಡುಪಿ: ಭಾರತೀಯ ಜನತಾ ಪಾರ್ಟಿ ಆಯೋಜಿಸಿದ ರೈತ ಚೈತನ್ಯ ಯಾತ್ರೆ ಉಡುಪಿಗೆ ಆಗಮಿಸಿದಾಗ ಆರು ಸಾವಿರಕ್ಕೂ ಅಧಿಕ ಬಿಜೆಪಿ ಕಾರ್ಯಕರ್ತರಿಗೆ ಧಾರ್ಮಿಕ ದತ್ತಿ ಇಲಾಖೆಗೊಳಪಟ್ಟ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಿಂದ ಊಟ ಸರಬರಾಜು ಮಾಡಿರುವುದು ಇಲಾಖಾ ತನಿಖೆಯಲ್ಲಿ ದೃಢಪಟ್ಟಿದ್ದು, ತನಿಖೆಯಲ್ಲಿ ಇದಲ್ಲದೆಯೂ ಇತರ ಹತ್ತು ಹಲವಾರು ಭಾರೀ ಹಗರಣಗಳು ದೇವಸ್ಥಾನದಲ್ಲಿ ನಡೆದಿರುವುದು ಕಂಡುಬಂದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಕಾರ್ಯನಿರ್ವಹಣಾಧಿಕಾರಿಯನ್ನು ನೇಮಕ ಮಾಡಲು ಇಲಾಖೆ ನಿರ್ಧರಿಸಿದೆ ಎಂದು ತಿಳಿದುಬಂದಿದೆ.

ತನಿಖೆಯ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ನೀ.ವಿಜಯ ಬಲ್ಲಾಳ ಅವರು ತನಿಖಾಧಿಕಾರಿಗಳ ತನಿಖೆಗೆ ಸಹಕರಿಸದೇ ಇರುವುದು ಮತ್ತು ಅನೇಕ ಸತ್ಯಗಳನ್ನು, ಕಡತಗಳನ್ನು ಮುಚ್ಚಿಟ್ಟಿರುವುದು, ಹಸಿ ಹಸಿ ಸುಳ್ಳು ಹೇಳಿಕೆಗಳನ್ನು ನೀಡಿರುವುದು, ಅಧಿಕಾರ ದುರುಪಯೋಗವೇ ಮೊದಲಾದ ವಿವಿಧ ವಿಷಯಗಳ ಕಾರಣಕ್ಕೆ 2003-04ರಿಂದ ಇಂದಿನವರೆಗಿನ ದೇವಸ್ಥಾನದ ಲೆಕ್ಕ ಪತ್ರಗಳ ಸಮಗ್ರ ತಪಾಸಣೆಗೆ ಆದೇಶಿಸಲಾಗಿದೆಯಲ್ಲದೆ, ಡಾ.ವಿಜಯ ಬಲ್ಲಾಳರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆ ನಿರ್ಣಯ ತೆಗೆದುಕೊಂಡಿದೆ.

dr.vijay ballal

ಪ್ರಕರಣದ ವಿವರ

2015ರ ಸೆಪ್ಟೆಂಬರ್ 11ರಂದು ಬಿಜೆಪಿ ಹಮ್ಮಿಕೊಂಡ ರೈತ ಚೈತನ್ಯ ಯಾತ್ರೆಯು ಉಡುಪಿಗೆ ಆಗಮಿಸಿದಾಗ 6 ಸಾವಿರಕ್ಕೂ ಅಧಿಕ ಮಂದಿ ಕಾರ್ಯಕರ್ತರ ಮಧ್ಯಾಹ್ನದೂಟಕ್ಕೆ ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದಿಂದ ಆಡಳಿತ ಮೊಕ್ತೇಸರ ಡಾ.ನಿ.ವಿಜಯ ಬಲ್ಲಾಳರ ಸೂಚನೆಯಂತೆ ಊಟ ಸರಬರಾಜು ಮಾಡಲಾಗಿತ್ತು. ಅಂಬಲಪಾಡಿ ದೇವಸ್ಥಾನವು ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ‘ಎ’ ಪ್ರವರ್ಗಕ್ಕೆ ಸೇರಿದ ದೇವಸ್ಥಾನವಾಗಿದ್ದು, ಇಲ್ಲಿಂದ ರಾಜಕೀಯ ಪಕ್ಷವೊಂದರ ಕಾರ್ಯಕ್ರಮಕ್ಕೆ ಊಟ ಸರಬರಾಜು ಮಾಡಲು ಕಾನೂನಿನಲ್ಲಿ ಅವಕಾಶವಿರಲಿಲ್ಲ ಮತ್ತು ಹೀಗೆ ಮಾಡುವುದು ಅಕ್ರಮವಾಗಿತ್ತು.

ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ವಿಜಯ ಬಲ್ಲಾಳರು ಧಾರ್ಮಿಕ ದತ್ತಿ ನಿಯಮಾವಳಿಗಳನ್ನು ಸಾರಾಸಗಟು ಉಲ್ಲಂಘಿಸಿ ಬಿಜೆಪಿ ರಥ ಚೈತನ್ಯ ಯಾತ್ರೆಗೆ ಉಟ ಸರಬರಾಜು ಮಾಡಿದುದರ ವಿರುದ್ಧ ಸೆಪ್ಟೆಂಬರ್ 16ರಂದು ಯುವ ಕಾಂಗ್ರೆಸ್ ಉಡುಪಿ ವಿಧಾನಸಭಾ ಕ್ಷೇತ್ರ ಸಮಿತಿ ಹಾಗೂ ಸೆಪ್ಟೆಂಬರ್ 20ರಂದು ರಮೇಶ್ ಸುವರ್ಣ ಎಂಬವರು ಉಡುಪಿ ಜಿಲ್ಲಾಡಳಿತ ಮತ್ತು ಧಾರ್ಮಿಕ ದತ್ತಿ ಇಲಾಖೆಗೆ ದೂರು ಸಲ್ಲಿಸಿದ್ದರು.

ambalpadi duru

ಈ ಎರಡು ದೂರುಗಳ ಹಿನ್ನೆಲೆಯಲ್ಲಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ವಿನಯ ಕುಮಾರ್ ಸೊರಕೆಯವರ ಅಕ್ಟೋಬರ್ 5ರ ಪತ್ರದಂತೆ ಮತ್ತು ಪತ್ರಿಕಾ ವರದಿಗಳ ಆಧಾರದಲ್ಲಿ ಇಲಾಖೆಯ ಪ್ರಭಾರ ಸಹಾಯಕ ಆಯುಕ್ತರಾದ ಯೋಗೇಶ್ವರ್ ಅವರು ತನಿಖೆಯನ್ನು ಕೈಗೆತ್ತಿಕೊಂಡಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಆಡಳಿತ ಮೊಕ್ತೇಸರ ಡಾ.ನಿ.ವಿಜಯ ಬಲ್ಲಾಳ ಹಾಗೂ ಮ್ಯಾನೇಜರ್ ರಾಘವೇಂದ್ರ ಪುರಾಣಿಕ ಅವರು ಸುಳ್ಳು ಹೇಳಿಕೆಗಳನ್ನು ನೀಡಿ, ಜನಾರ್ದನ ಮತ್ತು ಮಹಾಕಾಳಿ ದೇವರುಗಳಿಗೆ ವಂಚಿಸಿದ್ದರೆ, ದೇವಸ್ಥಾನದ ಬಳಸುವ ಸಹಾಯಕರಾದ ನಾಗರಾಜ ಕಬ್ಬಿನಾಲೆ, ಅಡುಗೆ ತಯಾರಕರಾದ ಗೋವಿಂದದಾಸ ಭಟ್ಟ ಹಾಗೂ ಸ್ಟೋರ್ ಕೀಪರ್ ದಾಮೋದರ ತಂತ್ರಿ ಎಂಬವರು ತಮಗೆ ಗೊತ್ತಿಲ್ಲ, ತಾವು ನೋಡಿಲ್ಲ ಎಂಬಿತ್ಯಾದಿ ಹೇಳಿಕೆಗಳ ಜೊತೆಗೆ ಆಡಳಿತ ಮೊಕ್ತೇಸರರ ಹೇಳಿಕೆಗೆ ಪೂರಕವಾಗುವಂತ ಹೇಳಿಕೆಗನ್ನು ನಿಡಿದ್ದರು. ಆದರೆ, ಸೇವಾ ಗುಮಾಸ್ತರಾದ ಗೋಪಾಲಕೃಷ್ಣ ಭಟ್, ಮನಿಯಾರ್ಡರ್ ಗುಮಾಸ್ತರಾದ ನಟರಾಜ ಪುರಾಣಿಕ ಹಾಗೂ ಸ್ವೀಪರ್ ಭೋಜ ಅವರು, ದೇವಸ್ಥಾನದಲ್ಲಿ ತಯಾರಿಸಲಾದ ಊಟವನ್ನು ಬಿಜೆಪಿ ರೈತ ಚೈನತ್ಯ ಯಾತ್ರೆಯ ಕಾರ್ಯಕರ್ತರಿಗೆ ಬಡಿಸಲು ಹೊರಗಡೆಗೆ ಸರಬರಾಜು ಮಡಲಾಗಿದೆ ಎಂಬ ಸತ್ಯದಿಂದ ಕೂಡಿದ ಹೇಳಿಕೆಯನ್ನು ನೀಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವರುಗಳ ಕೃಪೆಗೆ ಪಾತ್ರರಾಗಿದ್ದರು.

ಆಡಳಿತ ಮೊಕ್ತೇಸರ ಡಾ.ವಿಜಯ ಬಲ್ಲಾಳರ ಸುಳ್ಳು, ದ್ವಂದ್ವ, ತದ್ವಿರುದ್ದ, ಅಸಮರ್ಪಕ ಹೇಳಿಕೆಗಳನ್ನು ಗಮನಿಸಿದ ತನಿಖಾಧಿಕಾರಿಗಳು, ಬಲ್ಲಾಳರು ದೇವಸ್ಥಾನದ ಲೆಕ್ಕಪತ್ರಗಳನ್ನು ಕೇಳಿದಾಗ ಕೆಲವನ್ನು ಕೊಟ್ಟು, ಇನ್ನು ಕೆಲವನ್ನು ಅರ್ಧಂಬರ್ಧ ಕೊಟ್ಟು, ಮತ್ತೆ ಹಲವನ್ನು ನೀಡದೆ ಬಚ್ಚಿಡಲು ಯತ್ನಿಸಿದ್ದನ್ನು ಗಂಭೀರವಾಗಿ ಪರಿಗಣಿಸಿಕೊಂಡು ವಿವಿಧ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಜಯ ಬಲ್ಲಾಳರು ಧಾರ್ಮಿಕ ದತ್ತಿ ಕಾಯ್ದೆಯ ನಿಯಮಾವಳಿಗಳನ್ನು ಉಲ್ಲಂಘಿಸಿರುವುದು, ಅಧಿಕಾರ ದುರುಪಯೋಗಪಡಿಸಿಕೊಂಡಿರುವುದು ಇತ್ಯಾದಿಗಳನ್ನು ದೃಢಪಡಿಸಿಕೊಂಡವರೇ ದೇವಸ್ಥಾನಕ್ಕೆ ಕಾರ್ಯನಿರ್ವಹಣಾಧಿಕಾರಿಯವರನ್ನು ನೇಮಕ ಮಾಡಲು ಮತ್ತು ಸಮಗ್ರ ಲೆಕ್ಕಪತ್ರಗಳ ತಪಾಸಣೆ ಮಾಡುವಂತೆ ಶಿಫಾರಸು ಮಾಡಿ ಧಾರ್ಮಿಕ ದತ್ತಿಯ ಉಪ ಆಯುಕ್ತರೂ ಆದ ಜಿಲ್ಲಾಧಿಕಾರಿಗಳಾದ ಡಾ.ಆರ್.ವಿಶಾಲ್ ರವರ ಮೂಖಾಂತರ ಇಲಾಖಾ ಆಯುಕ್ತರಿಗೆ ತನಿಖಾ ವರದಿಯನ್ನು ಸಲ್ಲಿಸಿ ದಕ್ಷತೆ, ಪ್ರಾಮಾಣಿಕತೆ ಮತ್ತು ದಿಟ್ಟತನ ಮೆರೆದಿದ್ದರು.

ಉಪ ಆಯುಕ್ತರಾದ ಜಿಲ್ಲಾಧಿಕಾರಿ ಡಾ.ವಿಶಾಲ್ ರವರ ವರದಿ ಮತ್ತು ಪ್ರಭಾರ ಸಹಾಯಕ ಆಯುಕ್ತರಾದ ಯೋಗೇಶ್ವರ್ ರವರ ತನಿಖಾ ವರದಿಯನ್ನು ಗಂಭೀರವಾಗಿ ಪರಿಗಣಿಸಿದ ಇಲಾಖಾ ಆಯುಕ್ತರು ಆಡಳಿತ ಮೊಕ್ತೇಸರರಾದ ಡಾ.ನಿ.ವಿಜಯ ಬಲ್ಲಾಳರ ಮೇಲಿನ ಆರೋಪಗಳು ಸಾಬೀತಾಗಿರುವುದರಿಂದ ಮತ್ತು ದೇವಸ್ಥಾನದ ಸಮಗ್ರ ಲೆಕ್ಕಪತ್ರ ತಪಾಸಣೆ ನಡೆಸುವಂತೆಯೂ, ನಿಯಮಾನುಸಾರ ಆಡಳಿತ ಮೊಕ್ತೇಸರ ಡಾ.ವಿಜಯ ಬಲ್ಲಾಳರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆಯೂ ಆದೇಶ ಹೊರಡಿಸಿದ್ದಾರೆ.

Leave a Reply

Your email address will not be published. Required fields are marked *