Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಬಾವಿಯಲ್ಲಿ ಶವ ಪತ್ತೆ

ಉಡುಪಿ: ಉಡುಪಿ ತಾಲೂಕು ಶಿರ್ವ ಗ್ರಾಮದ ಮಟ್ಟಾರ್ ಬಂಗ್ಲೆಗುಡ್ಡೆ ನಿವಾಸಿ ದಿ.ಬೊಗ್ಗು ಪೂಜಾರಿಯವರ ಪುತ್ರ ಗಂಗಾಧರ ಪೂಜಾರಿ (40) ಎಂಬವರ ಮೃತದೇಹ, ಮಟ್ಟಾರ್ ಮಲ್ಲಮಾರ್ ನ ತಾಯಿ ಮನೆ ಪಕ್ಕದಲ್ಲಿರುವ ನಾರಾಯಣ ಕರ್ಕೇರರವರಿಗೆ ಸೇರಿದ ಹಾಡಿಯ ಆವರಣವಿಲ್ಲದ ಬಾವಿಯಲ್ಲಿ ಪತ್ತೆಯಾಗಿದೆ.
ಗಂಗಾಧರ ಪೂಜಾರಿಯವರು ಪಿತ್ತ ಕಾಮಾಲೆ ಖಾಯಿಲೆಯಿಂದ ಬಳಲುತ್ತಿದ್ದು, ಇದೇ ಕಾರಣದಿಂದ ಬಾವಿಗೆ ಹಾರಿ ದೇಹಹತ್ಯೆ ಮಾಡಿಕೊಂಡಿದ್ದಾರೆಂದು ಮೃತರ ತಮ್ಮ ಕಿಶೋರ್ ಪೂಜಾರಿ ಪೊಲೀಸರಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ, ಕಿಶೋರ್ ನೀಡಿದ ಹೇಳಿಕೆಯಂತೆ ಶಿರ್ವ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *