Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಯುವತಿಯ ಶವ ಕಲ್ಲುಕೋರೆಯಲ್ಲಿ ಪತ್ತೆ

ಉಡುಪಿ:  ಉಡುಪಿ ತಾಲೂಕು ಶಿರ್ವ ಗ್ರಾಮದ ಪದವು ಎಂ.ಎಸ್.ಆರ್.ಎಸ್. ಕಾಲೇಜು ಬಳಿಯ ನಿವಾಸಿ ಕು.ಮೋಹಿನಿ ಎಂಬವರ ಮೃತದೇಹವು ಸಾಂತೂರುಕೊಪ್ಲದಲ್ಲಿರುವ ಹಳೆಯ ಕಲ್ಲು ಕೋರೆಯ ನೀರಿನಲ್ಲಿ ಪತ್ತೆಯಾಗಿದೆ.
ಮಾರ್ಚ್ 29ರಂದು ಮಧ್ಯಾಹ್ನ ಗಂಟೆ 2.30ಕ್ಕೆ ಅಡ್ವೆ ಸಮೀಪದ ಸಣ್ಣೋಣಿಯಲ್ಲಿ ನಡೆಯಲಿದ್ದ ಕೋಲ ನೋಡಲೆಂದು ಮನೆಯಿಂದ ಹೊರಟಿದ್ದರು. ಕೋಲ ಮುಗಿದ ಬಳಿಕ ಮನೆಗೆ ಮರಳದ ಕಾರಣ ಹುಡುಕಾಡಿದಾಗ ಮೋಹಿನಿಯ ಮೃತದೇಹ ಕಲ್ಲುಕೋರೆಯ ನೀರಿನಲ್ಲಿ ಪತ್ತೆಯಾಯಿತೆನ್ನಲಾಗಿದೆ.
ಮೋಹಿನಿಯು ಮದ್ಯಪಾನಿಯಾಗಿದ್ದಳೆನ್ನಲಾಗಿದೆ. ಘಟನೆ ಬಗ್ಗೆ, ಮೃತಳ ಅಕ್ಕ ಶ್ರೀಮತಿ ರಮಣಿ ಸಂತೋಷ್ ನೀಡಿದ ಹೇಳಿಕೆಯಂತೆ ಪಡುಬಿದ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *