Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಅಪಘಾತ: ಇಬ್ಬರಿಗೆ ಗಾಯ, ಕಾಡಾನೆ ದಾಳಿಯಿಂದ ಬೆಳೆ ನಾಶ: ಕೃಷಿಕನಿಗೆ ಆಘಾತ, ಮದ್ಯ & ತಂಬಾಕು ಸಹಿತ ವ್ಯಾಪಾರಿಯ ಬಂಧನ, ಕಳವು, ಸಿಸಿ ಕ್ಯಾಮರಾದಿಂದ ಕಳ್ಳನ ಗುರುತು ಪತ್ತೆ

ಓಮ್ನಿ ವ್ಯಾನ್ – ಕಾರು ಡಿಕ್ಕಿ: ಇಬ್ಬರಿಗೆ ಗಂಭೀರ ಗಾಯ

ಉಪ್ಪಳ: ಓಮ್ನಿ ವ್ಯಾನ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡ ಘಟನೆ ಉಪ್ಪಳ ಬಳಿಯ ಕುಕ್ಕಾರ್ ಶಾಲಾ ಪರಿಸರದಲ್ಲಿ ಇಂದು ಸಂಭವಿಸಿದೆ.

ಉಪ್ಪಳದಿಂದ ಕುಂಬಳೆ ಕಡೆಗೆ ಸಂಚರಸುತ್ತಿದ್ದ ಓಮ್ನಿ ವ್ಯಾನ್ ಮತ್ತು ಕಾಸರಗೋಡು ಕಡೆಯಿಂದ ಬಜಪೆ ವಿಮಾನ ನಿಲ್ದಾಣಕ್ಕೆ ಸಂಚರಿಸುತ್ತಿದ್ದ ಕಾರು ಪರಸ್ಪರ ಡಿಕ್ಕಿ ಹೊಡೆಯಿತು. ಅಪಘಾತದಲ್ಲಿ ಗಾಯಗೊಂಡವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ. ಅಪಘಾತದಿಂದ ಎರಡೂ ವಾಹನಗಳು ಹಾನಿಗೊಂಡಿವೆ.

car axident

ಮದ್ಯ ಮತ್ತು ನಿಷೇಧಿತ ತಂಬಾಕು ಸಹಿತ ವ್ಯಾಪಾರಿಯ ಬಂಧನ

ಉಪ್ಪಳ: ಅಂಗಡಿಯೊಂದಕ್ಕೆ ದಾಳಿ ನಡೆಸಿದ ಪೊಲೀಸರು, 13 ಬಾಟಲಿ ಅಕ್ರಮ ಮದ್ಯ ಮತ್ತು ನಿಷೇಧಿತ ತಂಬಾಕು ಉತ್ಪನ್ನಗಳ 420 ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ, ಅಂಗಡಿ ಮಾಲಕರಾದ ಬಂದ್ಯೋಡು ಸಮೀಪದ ಅಡ್ಕ ನಿವಾಸಿ ಪುಷ್ಪನಾಥ್ (45) ಎಂಬವರನ್ನು ಬಂಧಿಸಿದ್ದಾರೆ.

ಕಾಡಾನೆಗಳ ದಾಂಧಲೆ: ಆಘಾತದಿಂದ ಕುಸಿದು ಬಿದ್ದು ಕೃಷಿಕನಿಗೆ ಗಂಭೀರ ಗಾಯ

ಮುಳ್ಳೇರಿಯಾ: ಕೊಟ್ಟಂಗುಳಿಯಲ್ಲಿ ಹಾಡುಹಗಲೇ ಕಾಡಾನೆಗಳ ಹಿಂಡು ತೋಟಕ್ಕಿಳಿದು ವ್ಯಾಪಕ ಕೃಷಿ ನಾಶ ಮಾಡಿದ್ದು, ಇದನ್ನು ಕಂಡ ಕೃಷಿಕರೋರ್ವರು ಆಘಾತಕ್ಕೆ ಒಳಗಾಗಿ ಕುಸಿದು ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಕೊಟ್ಟಂಗುಳಿಯ ಚಾತುಕುಟ್ಟಿ ಮಣಿಯಾಣಿ ಗಾಯಾಳು. ಇವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿ ದಾಖಲಿಸಲಾಗಿದೆ. ಎಪ್ರಿಲ್ ಒಂದರ ಮಧ್ಯಾಹ್ನ 12 ಗಂಟೆಗೆ, ಎರಡು ಕಾಡಾನೆಗಳು ಏಕಾಏಕಿ ಚಾತುಕುಟ್ಟಿ ಮಣಿಯಾಣಿಯವರ ತೋಟಗೆ ನುಗ್ಗಿ ಕೃಷಿ ನಾಶಗೈದಿದೆ. ಬಳಿಕ ಸಮೀಪದ ಕೇಳು ಮಣಿಯಾಣಿಯವರ ತೋಟಕ್ಕೂ ದಾಳಿ ನಡೆಸಿ ಕರಷಿ ನಾಶಗೈದಿದೆ. 400 ಕಂಗು, 75 ತೆಂಗು ಸಹಿತ ಬಾಳೆ ಬೆಳೆಗಳನ್ನು ನಾಶಗೊಳಿಸಿದೆ. ಬಳಿಕ ಆನೆಗಳು ಕಾಡಿಗೆ ತೆರಳದೆ ತೋಟಗಳ ಪಕ್ಕಕ್ಕಿರುವ ಗುಡ್ಡ ಪ್ರದೇಶದಲ್ಲಿ ಬೀಡು ಬಿಟ್ಟಿದೆಯೆಂದು ಸ್ಥಳೀಯರು ಆತಂಕಿತರಾಗಿದ್ದಾರೆ.

ಬಾಡಿಗೆ ಮನೆಯಿಂದ ಹಣ ಕಳವು

ಬದಿಯಡ್ಕ: ನೀರ್ಚಾಲು ಸಮೀಪದ ಕನ್ಯಪ್ಪಾಡಿಯಲ್ಲಿ ತಿಮೋತಿ ಡಿ’ಸೋಜಾ ಎಂಬವರು ವಾಸವಾಗಿರುವ ಬಾಡಿಗೆ ಮನೆಯ ಹಿಂಬದಿಯ ಬಾಗಿಲು ಮುರಿದು ಒಳ ನುಗ್ಗಿದ ಕಳ್ಳರು,  50 ಸಾವಿರ ರೂ. ನಗದು ಹಣವನ್ನು ಕಳವು ಮಾಡಿದ್ದಾರೆ ಎಂದು ದೂರಲಾಗಿದೆ. ಬದಿಯಡ್ಕ ಠಾಣೆಯ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ನಗ-ನಗದು ಇದ್ದ ಬ್ಯಾಗ್ ಅಪಹರಣ: ಸಿಸಿ ಕ್ಯಾಮರಾದಿಂದ ಕಳ್ಳನು ಗುರುತು ಪತ್ತೆ

ಕಾಸರಗೋಡು: ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ತಪಾಸಣೆಗಾಗಿ ಬಂದ ಮಹಿಳೆಯ ನಗ-ನಗದು ಒಳಗೊಂಡ ಬ್ಯಾಗ್ ಅಪಹರಣಕ್ಕೆ ಒಳಗಾದ ಘಟನೆ ನಡೆದಿದೆ.

ಬ್ಯಾಗ್ ಕಳ್ಳತನ ಮಾಡುವ ದೃಶ್ಯ, ಆಸ್ಪತ್ರೆಯ ಸಿ.ಸಿ. ಟಿ.ವಿ. ಕ್ಯಾಮರಾದಲ್ಲಿ ದಾಖಲಾಗಿದ್ದು, ಇದರ ಆಧಾರದಿಂದ ಪೊಲೀಸರು ಕಳ್ಳನನ್ನು ಗುರುತು ಹಿಡಿದಿದ್ದಾರೆನ್ನಲಾಗಿದೆ. ಇದೀಗ ಈತನ ಭಾವಚಿತ್ರ ಸಹ ಪೊಲೀಸರಿಗೆ ಲಭಿಸಿದ್ದು, ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.

2015 ಅಕ್ಟೋಬರ್ 20ರಂದು ನಗರದ ನುಳ್ಳಿಪ್ಪಾಡಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ತಪಾಸಣೆಗಾಗಿ ಬಂದಿದ್ದ ಸೂರಂಬೈಲ್ ನ ಫಾತಿಮತ್ ಸುಹರಾಬಾನು ಅವರ ಆರೂವರೆ ಪವನಿನ ಚಿನ್ನದ ಒಡವೆ, 5000 ರೂ. ನಗದು ಮತ್ತು ಮೊಬೈಲ್ ಫೋನ್ ಒಳಗೊಂಡ ಬ್ಯಾಗನ್ನು ಕಳ್ಳರು ಕಳವು ಮಾಡಿದ್ದರು.

Leave a Reply

Your email address will not be published. Required fields are marked *