Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಪೊಲೀಸ್ ಮೇಲೆ ಆಕ್ರಮಣ ಯತ್ನ: ಆರೋಪಿಯ ಬಂಧನ

ಕುಂಬಳೆ: ಅಕ್ರಮ ಮರಳು ಸಾಗಾಟ ತಡೆಯಲು ಬಂದ ಎಸ್ ಐ ಹಾಗೂ ಪೊಲೀಸರ ಮೇಲೆ ಆಕ್ರಮಣ ನಡೆಸಲು ಯತ್ನಿಸಿದ ಪ್ರಕರಣದ ಆರೋಪಿಯನ್ನು ಕುಂಬಳೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮೊಗ್ರಾಲ್ ಕಡಪ್ಪುರ ನಿವಾಸಿ ಮೊಹಮ್ಮದ್ ಕುಂಞಿ (38) ಬಂಧಿತ ಆರೋಪಿ. 2015ರ ನವಂಬರ್ 8ರಂದು ಕುಂಬಳೆ ಎಸ್ ಐ ಆಗಿದ್ದ ಅನೂಪ್ ಹಾಗೂ ಪೋಲೀಸ್ ಕಾನ್ಸ್ ಸ್ಟೇಬಲ್ ಮಧು ಎಂಬವರು ಬೈಕ್ ನಲ್ಲಿ ಲೀಗ್ ಕಚೇರಿ ಪರಿಸರದಲ್ಲಿ ಬಂದು, ಅಲ್ಲಿ ನಡೆಯುತ್ತಿದ್ದ ಅಕ್ರಮ ಮರಳು ಸಾಗಾಟ ದಂಧೆಗೆ ತಡೆಯೊಡ್ಡಿದಾಗ, ಅವರ ಮೇಲೆ ಆಕ್ರಮಣ ಎಸಗಿದ ಆರೋಪದಂತೆ ಕುಂಬಳೆ ಪೊಲೀಸರು ಮೊಹಮ್ಮದ್ ಕುಞಿ ವಿರುದ್ದ ದೂರು ದಾಖಲಿಸಿಕೊಂಡಿದ್ದರು. ಈತ ಟಿಪ್ಪರ್ ಲಾರಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು.

Leave a Reply

Your email address will not be published. Required fields are marked *