Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೆಳ್ಳಂಪಳ್ಳಿಯಲ್ಲಿ ಅಕ್ರಮ ಮರಳು ದಾಸ್ತಾನು: ದೂರು ನೀಡಿದರೂ ಅಧಿಕಾರಿಗಳ ಜಾಣ ಮೌನ !

ಉಡುಪಿ: ಉಡುಪಿ ತಾಲೂಕು ಕುಕ್ಕೆ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳಂಪಳ್ಳಿ ಗ್ರಾಮದ ಕೊಹಿನೂರು ಫಿಶ್ ಮಿಲ್ ಸಮೀಪದ ಬಬ್ಬರ್ಯ ದೈವಸ್ಥಾನದ ಬಳಿ ಅಕ್ರಮ ಮರಳನ್ನು ಲೋಡ್ ಗಟ್ಟಲೆ ದಾಸ್ತಾನು ಇರಿಸಲಾಗಿದೆ ಎಂದು ತಿಳಿದುಬಂದಿದೆ. ಈ ಬಗ್ಗೆ ಸ್ಥಳೀಯರು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಬ್ರಹ್ಮಾವರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರೂ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳದೆ ರಾಜಕೀಯ ಒತ್ತಡಕ್ಕೆ ಒಳಗಾಗಿ ಅಕ್ರಮ ಮರಳು ದಂಧೆ ನಡೆಸುತ್ತಿರುವವರನ್ನು ರಕ್ಷಣೆ ಮಾಡಲಾಗುತ್ತಿದೆ ಎಂದೂ ಗಂಭೀರ ದೂರು ಕೇಳಿ ಬಂದಿದೆ.

ಬ್ರಹ್ಮಾವರ ಹೋಬಳಿಯ ಬೆಳ್ಳಂಪಳ್ಳಿ ಗ್ರಾಮದಲ್ಲಿ ಮಡಿಸಾಲು ನದಿ ಹರಿದು ಹೋಗುತ್ತಿದ್ದು, ಇಲ್ಲಿಂದ ಕಳೆದ ಅನೇಕ ದಿನಗಳಿಂದ ನಿರಂತರವಾಗಿ ಇಬ್ಬರು ಪ್ರಭಾವೀ ರಾಜಕಾರಣಿಗಳು ಯಂತ್ರಗಳನ್ನು ಉಪಯೋಗಿಸಿ ಹಗಲಿರುಳು ಅಕ್ರಮವಾಗಿ ಮರಳು ತೆಗೆದು ಸಮೀಪದಲ್ಲೇ ಇರುವ ಬಬ್ಬರ್ಯ ದೈವಸ್ಥಾನದ ಬಳಿ ಸಂಗ್ರಹಿಸಿಟ್ಟಿದದ್ದರು ಎನ್ನಲಾಗಿದೆ.

ಇಲ್ಲಿ ಅಕ್ರಮ ಮರಳುಗಾರಿಕೆ ದಂಧೆ ನಡೆಸುತ್ತಿರುವ ಇಬ್ಬರು ಪ್ರಭಾವಶಾಲಿ ರಾಜಕಾರಣಿಗಳಿಗೆ ಆಡಳಿತ ಪಕ್ಷದ ಜಿಲ್ಲೆಯ ಅತ್ಯಂತ ಪ್ರಭಾವಶಾಲೀ ಜನಪ್ರತಿನಿಧಿಯಬ್ಬರ ಅಭಯಹಸ್ತ ಇದ್ದು, ಇದೇ ಕಾರಣಕ್ಕೆ ಉಡುಪಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ಹಾಗೂ ಬ್ರಹ್ಮಾವರ ಠಾಣೆಯ ಪೊಲೀಸರ ಸಹಿತ ಯಾವುದೇ ಇಲಾಖೆಗಳ ಅಧಿಕಾರಿಗಳೂ ಯಾವುದೇ ರೀತಿಯ ಕಾರ್ಯಾಚರಣೆಯನ್ನೂ ನಡೆಸದೆ ಮರಳು ದಂಧೆಯನ್ನು ಪೋಷಿಸುತ್ತಿದ್ದಾರೆ ಎಂಬ ಆರೋಪಗಳು ವ್ಯಕ್ತವಾಗಿವೆ.

ಒಂದೆರಡು ದಿನಗಳ ಹಿಂದೆಯಷ್ಟೇ ಸ್ಥಳೀಯ ನಾಗರಿಕರು ಈ ಅಕ್ರಮ ಮರಳು ಸಂಗ್ರಹದ ಬಗ್ಗೆ ಗಣಿ ಇಲಾಖಾಧಿಕಾರಿಗಳಿಗೆ ಮೌಖಿಕ ದೂರು ನೀಡಿದ್ದಾರೆ. ಆದರೆ ಅಧಿಕಾರಿಗಳು ಬಳಿಕ ಇಲ್ಲಿಗೊಮ್ಮೆ ಭೇಟಿ ನಿಡಿದಂತೆ ಮಾಡಿದ್ದಾರೆಯೇ ಹೊರತು ಬೇರೇನೂ ಮಾಡಿಲ್ಲ. ಆದರೆ ಅದಕ್ಕೆ ಬದಲಾಗಿ,  ”ಸ್ಥಳೀಯರ ದೂರು ಮತ್ತೆ ಬರುವ ಮೊದಲೇ ಸಂಗ್ರಹಿಸಲಾದ ಮರಳನ್ನು ಬೇರೆಲ್ಲಿಗಾದರೂ ಸಾಗಿಸಿಬಿಡಿ, ನಾವು ಮತ್ತೆ ದಾಳಿ ನಡೆಸಬೇಕಾದ ಅನಿವಾರ್ಯತೆ ಬಂದರೆ ಹಾಗೆ ಬರುವಾಗ ಇಲ್ಲಿ ಮರಳು ಇಲ್ಲದಂತೆ ನೋಡಿಕೊಳ್ಳಿ, ಇದ್ದರೆ ನಮ್ಮಕಣ್ಣಿಗೆ ಬಿದ್ದರೆ ಆಗ  ವಶಪಡಿಸಕೊಳ್ಳಬೇಕಾಗುತ್ತದೆ” ಎಂದು ತಿಳಿಸಿದ್ದಾರೆ ಎನ್ನಲಾಗಿದೆ.

ಅಧಿಕಾರಿಗಳ ಸಲಹೆ, ಸೂಚನೆ, ಮಾರ್ಗದರ್ಶನದ ಪ್ರಕಾರ, ಅಕ್ರಮ ಮರಳು ದಂಧೆಕೋರರು ಕಳೆದೆರಡು ದಿನಗಳಿಂದ ಸಾರ್ವಜನಿಕರ ಕಣ್ಣಿಗೆ ದೊಡ್ಡ ಪ್ರಮಾಣದಲ್ಲಿ ಬೀಳದಂತೆ ಟಿಪ್ಪರ್ ಗಳಲ್ಲಿ ಸ್ವಲ್ಪ ಸ್ವಲ್ಪವೇ ಅಕ್ರಮ ಮರಳನ್ನು ಬೇರೆ ಯಾವುದೋ ನಿಗೂಢ ಸ್ಥಳಕ್ಕೆ ಸಾಗಿಸುತ್ತಿದ್ದಾರೆ. ಇವರಿಗೆ ಇಲ್ಲಿಂದ ಎಲ್ಲಾ ಮರಳನ್ನು ಸಾಗಿಸುವವ ವರೆಗೆ ಗಣಿ ಅಧಿಕಾರಿಗಳು ಇಲ್ಲಿಗೆ ಬರಲಾರರು, ಬಳಿಕ ದಾಳಿ ನಡೆಸುವ ನಾಟಕ ಆಡುವ ಸಾಧ್ಯತೆ ಇದೆ ಎಂದು ಅಧಿಕಾರಿಗಳ ಭ್ರಷ್ಟ ಪರ ಹುನ್ನಾರವನ್ನು ಬಯಲುಪಡಿಸಿದ್ದಾರೆ.

ಬ್ರಹ್ಮಾವರ ಹೋಬಳಿಯ ವಿವಿಧೆಡೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅಕ್ರಮ ಮರಳುದಂಧೆ ರಾತ್ರಿ ಹಗಲೆನ್ನದೆ ನಿತ್ಯ ನಿರಂತರವಾಗಿ ನಡೆಯುತ್ತಿದೆಯಾದರೂ, ದಕ್ಷ ಮತ್ತು ದಿಟ್ಟ ಅಧಿಕಾರಿ ಅಣ್ಣಾಮಲೈ ಎಸ್ಪಿ ಯಾಗಿರುವ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆಯಲ್ಲಿ ತೊಡಗಿಕೊಂಡಿರುವ ಟಿಪ್ಪರ್ ಗಳನ್ನು ತಪಾಸಣೆಗೆ ಒಳಪಡಿಸುವ ಕಾರ್ಯಾಚರಣೆ ಯಾಕೆ ಪ್ರಾಮಾಣಿಕವಾಗಿ ನಡೆಯುತ್ತಿಲ್ಲ ಎಂಬ ಸಂಶಯ ಸಹಜವಾಗಿಯೇ ವ್ಯಕ್ತವಾಗಿದೆ. ಮಾತ್ರವಲ್ಲ, ಜಿಲ್ಲೆಯ ಜಿಲ್ಲಾಧಿಕಾರಿಗಳಾದ ಡಾ.ಆರ್.ವಿಶಾಲ್ ಅವರು ದಕ್ಷರೆಂದು ಹೇಳಲಾಗುತ್ತಿದೆಯಾದರೂ, ಜಿಲ್ಲಾಡಳಿತ ಸಹ ಯಾಕೆ ಅಕ್ರಮ ಮರಳುಗಾರಿಕೆ ವಿರುದ್ಧ ಬಲವಾದ ಕಾರ್ಯಾಚರಣೆಗೇಕೆ ಮುಂದಾಗುತ್ತಿಲ್ಲ ಎಂಬ ಪ್ರಶ್ನೆಗಳನ್ನು ಜನ ಕೇಳುತ್ತಿದ್ದು, ಈ ಪ್ರಶ್ನೆಗಳಿಗೆ ಸೂಕ್ತ ಉತ್ತರ ಮಾತ್ರ ಲಭಿಸುತ್ತಿಲ್ಲ.

* ಸಾಂದರ್ಭಿಕ ಚಿತ್ರ

Leave a Reply

Your email address will not be published. Required fields are marked *