Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಸದ್ಗುರು ಭಗವಾನ್ ನಿತ್ಯಾನಂದ ಸ್ವಾಮೀ ಚಿದಾಕಾಶ ಗೀತಾ – 2

# ಸೂರ್ಯ ಸಮಾನ ಜ್ಞಾನ ಪ್ರಕಾಶ ಉಳ್ಳದ್ದು ಸುಷುಮ್ನೆ ಎಂಬ ಜ್ಞಾನಶಕ್ತಿಯ ನಾಡಿಯಾಗಿದೆ. ನಕ್ಷತ್ರ ಸಮಾನ ಜ್ಞಾನ ಪ್ರಕಾಶ ಉಳ್ಳದ್ದು ಪಿಂಗಳೆ ಎಂಬ ಜ್ಞಾನಶಕ್ತಿಯ ನಾಡಿಯಾಗಿದೆ. ಈ ನಾಡಿಗಳಲ್ಲಿ ಸುಷುಮ್ನೆಯು ಕೆಂಪು ಬಣ್ಣದ್ದಾಗಿದೆ. ಇಡೆಯು ನೀಲ ಬಣ್ಣದ್ದಾಗಿದೆ. ಪಿಂಗಳೆಯು ಪಚ್ಚೆ ಬಣ್ಣದ್ದಾಗಿದೆ.

ಈ 3 ನಾಡಿಗಳು ಕೂಡಿದ ಸ್ಥಾನವೇ ಹೃದಯಾಕಾಶ ಮಂಡಲ. ರಾಜಯೋಗದ ಸಾಧನೆ ಮಾಡುವ ಸಾಧಕನಿಗೆ ದಿವಸಗಳು ಹೋಗುತ್ತಾ ಅಂತರ್ ದೃಷ್ಟಿಗೆ ಬಿಂದು ದರ್ಶನವಾಗುವುದು ಮತ್ತು ಆಂತರ್ಯದಲ್ಲಿ ಹಾರ್ಮೋನಿಯಂ, ತಬ್ಲಾ, ಪಿಟ್ಲು, ಘಂಟಾ, ಕೊಳಲು, ಶಂಖ, ಮೃದಂಗ, ವೀಣಾ, ವಾದ್ಯಧ್ವನಿ, ಓಂಕಾರ ಧ್ವನಿ (ಇವೆಲ್ಲಾ ನಾದಗಳು) ತಲೆಯೊಳಗೆ ಸಹಜವಾಗಿ ಕೇಳುತ್ತವೆ. ಈ ಶಬ್ದಕ್ಕೆ ನಶ್ವರತ್ವದ ಚಂಚಲತ್ವವು ಇಲ್ಲ. ಅದು ಶಾಶ್ವತವಾಗಿಯೇ ಇರುವುದು.

ಹೇಗೆ ಕರ್ಪೂರವು ಅಗ್ನಿಯಲ್ಲಿ ಲಯವಾಗುವುದೋ, ಹಾಗೆಯೇ ಮನಸ್ಸು ಆತ್ಮ ಸ್ವರೂಪದಲ್ಲಿ ಲಯವಾಗಿ ಲೀನವಾಗಬೇಕು. ಹೇಗೆ ಒಣಗಿದ ತೆಂಗಿನಕಾಯಿಯು ಸಿಪ್ಪೆ ಬಿಟ್ಟು ಗಡಗಡ ಎಂದು ಆಡುತ್ತದೆಯೋ, ಹಾಗೆಯೇ ಶರೀರ ಸ್ವಭಾವ ಬೇರೆ, ಸೂಕ್ಷ್ಮ ಜ್ಞಾನದ ವಿಚಾರ ಬೇರೆಯಾಗಿ ಇರಬೇಕು. ರಾಜಯೋಗದ ಸಾಧಕನಿಗೆ ಒಂದನೇ ಆಂತರ್ಯದಲ್ಲಿ ಸೂಕ್ಷ್ಮಜ್ಞಾನದ ಪ್ರಕಾಶವಾಗುವುದು. ಆ ಜ್ಞಾನ ಪ್ರಕಾಶದ ಪ್ರಭಾವದಿಂದಲೇ ಅವನ ದುರಭ್ಯಾಸವೆಲ್ಲವೂ ಸುಟ್ಟು ಹೋಗುತ್ತದೆ.

Leave a Reply

Your email address will not be published. Required fields are marked *