Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ರಾಘವೇಶ್ವರ ಸ್ವಾಮೀಜಿಯಿಂದ ಸರಣಿ ಅತ್ಯಾಚಾರ: ಮೇಲ್ಮನವಿ ಅಂಗೀಕರಿಸಿದ ಹೈಕೋರ್ಟ್, ಪೀಠದಿಂದ ಕೆಳಗಿಳಿಸುವಂತೆ ಕೋರಿ PIL: ಸ್ವಾಮೀಜಿಗೆ ನೋಟೀಸ್

ಬೆಂಗಳೂರು: ಪ್ರತಿಷ್ಟಿತ ರಾಮಚಂದ್ರಾಪುರ ಮಠದ ರಾಮಕಥಾ ಗಾಯಕಿ ಶ್ರೀಮತಿ ಪ್ರೇಮಲತಾ ದಿವಾಕರ ಶಾಸ್ತ್ರೀ ಅವರ ಮೇಲೆ ರಾಘವೇಶ್ವರ ಭಾರತೀ ಸ್ವಾಮೀಜಿ ಸರಣಿ ಅತ್ಯಾಚಾರವೆಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಪರವಾಗಿ ಸಿಐಡಿ ತನಿಖಾಧಿಕಾರಿಗಳು ಸಲ್ಲಿಸಿದ್ದ ಮೇಲ್ಮನವಿಯನ್ನು ರಾಜ್ಯ ಹೈಕೋರ್ಟ್ ವಿಚಾರಣೆಗೆ ಅಂಗೀಕರಿಸಿದ್ದು, ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿ ಸಹಿತ ಸಂಬಂಧಿಸಿದ ಎಲ್ಲರಿಗೂ ತುರ್ತು ನೋಟೀಸ್ ಜ್ಯಾರಿಗೊಳಿಸಿದೆ.
ಬೆಂಗಳೂರು ನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಅವರು, ರಾಘವೇಶ್ವರ ಸ್ವಾಮೀಜಿಯು ಪ್ರೇಮಲತಾರವರ ಮೇಲೆ ಸರಣಿ ಅತ್ಯಾಚಾರ ಎಸಗಿದ ಹೀನಾತಿಹೀನ ಕೃತ್ಯದ ಮೊಕದ್ದಮೆಯನ್ನು ವಿಚಾರಣೆಗೇ ಒಳಪಡಿಸದೆ, ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವಷ್ಟು ಸಾಕ್ಷ್ಯಾಧಾರಗಳು ಇಲ್ಲ ಎಂಬ ನೆಪ ಮುಂದಿಟ್ಟು ಪ್ರಕರಣವನ್ನು ವಜಾಗೊಳಿಸುವ ಮುಖಾಂತರ ಅತ್ಯಾಚಾರ ಪ್ರಕರಣದ ಆರೋಪಿ ರಾಘವೇಶ್ವರ ಸ್ವಾಮೀಜಿಯನ್ನು ಮಾರ್ಚ್ 31ರಂದು ಆರೋಪಮುಕ್ತಗೊಳಿಸಿದ್ದರು.
ರಾಘವೇಶ್ವರ ಸ್ವಾಮೀಜಿಯು ಪ್ರೇಮಲತಾ ದಿವಾಕರ್ ಮೇಲೆ ”ಸರಣಿ ಅತ್ಯಾಚಾರ ಎಸಗಿರುವುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಅವುಗಳನ್ನು ದೋಷಾರೋಪಣಾ ಪಟ್ಟಿಯ ಜೊತೆಗೆ ಸಲ್ಲಿಸಲಾಗಿದೆ. ಆದರೆ ಅವುಗಳನ್ನು ಬೆಂಗಳೂರು ನಗರ ಜಿಲ್ಲಾ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಬಿ.ಮುದಿಗೌಡರ್ ಅವರು ಮಾನ್ಯ ಮಾಡಿಲ್ಲ. ಪ್ರಕರಣದ ಮುಖ್ಯ ವಿಚಾರಣೆ ನಡೆಯುವ ಮುನ್ನವೇ ಸ್ವಾಮೀಜಿಯವರನ್ನು ಆರೋಪ ಮುಕ್ತಗೊಳಿಸಿರುವುದು ಕಾನೂನು ಬಾಹಿರ. ಹೀಗಾಗಿ, ಸೆಷನ್ಸ್ ನ್ಯಾಯಾಧೀಶರ ತೀರ್ಪನ್ನು ರದ್ದುಪಡಿಸಬೇಕು” ಎಂದು ಸಿಐಡಿ ತನಿಖಾಧಿಕಾರಿಗಳು ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ರಾಘವೇಶ್ವರ ಸ್ವಾಮೀಜಿಯನ್ನು ಮಠದ ಪೀಠದಿಂದ ಕೆಳಗಿಳಿಸುವಂತೆ ಕೋರಿ PIL
ಈ ನಡುವೆ, ಸರಣಿ ಅತ್ಯಾಚಾರ ಪ್ರಕರಣದ ಆರೋಪಿ ರಾಘವೇಶ್ವರ ಭಾರತೀ ಸ್ವಾಮೀಜಿ ವಿರುದ್ಧ ರಾಜ್ಯ ಹೈಕೋರ್ಟ್ ಗೆ ಎದುರ್ಕಳ ಈಶ್ವರ ಭಟ್ ಸಹಿತ ಆರು ಮಂದಿ ಭಕ್ತಾಧಿಗಳು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL)ಯನ್ನು ಹೈಕೋರ್ಟ್ ವಿಚಾರಣೆಗೆ ಸ್ವೀಕರಿಸಿದೆ.
ಪಿಐಎಲ್ ನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಾದ ಎಸ್.ಕೆ. ಮುಖರ್ಜಿ ಹಾಗೂ ನ್ಯಾಯಮೂರ್ತಿಗಳಾದ ರವಿ ಮಳೀಮಠ ಅವರಿದ್ದ ವಿಭಾಗೀಯ ಪೀಠ; ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಹೊಸನಗರದ ರಾಮಚಂದ್ರಾಪುರ ಮಠ, ರಾಮಂಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ, ರಾಜ್ಯದ ಆದಾಯ ತೆರಿಗೆ ಇಲಾಖೆಯ ಆಯುಕ್ತರಿಗೆ ನೋಟೀಸ್ ಜ್ಯಾರಿಗೊಳಿಸಿದರು.
”ರಾಘವೇಶ್ವರ ಭಾರತೀ ಸ್ವಾಮೀಜಿ ಧಾರ್ಮಿಕ ಕಟ್ಟುಪಾಡುಗಳಿಗೆ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದ್ದಾರೆ, ಬೃಹತ್ ಪ್ರಮಾಣದ ಅವ್ಯವಹಾರಗಳನ್ನೂ ನಡೆಸಿದ್ದಾರೆ, ಅದುದರಿಂದ ಅವರನ್ನು ಪೀಠದಿಂದ ಕೆಳಗಿಳಿಸಿ ಮಠಕ್ಕೆ ಆಡಳಿತಾಧಿಕಾರಿಗಳನ್ನು ನೇಮಿಸಬೇಕು” ಎಂದು ಪಿಐಎಲ್ ನಲ್ಲಿ ಕೋರಲಾಗಿದೆ. ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮನವಿ ಪತ್ರ ಸಲ್ಲಿಸುವಂತೆ ನ್ಯಾಯಪೀಠವು  ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ ಸೂಚನೆ ನೀಡಿ, ವಿಚಾರಣೆಯನ್ನು ಮುಂದೂಡಿತು.

Leave a Reply

Your email address will not be published. Required fields are marked *