Realtime blog statisticsweb statistics
udupibits.in
Breaking News
ಉಡುಪಿ: ನೌಕರರಿಗೆ ಕಿರುಕುಳ ಆರೋಪ- ಬ್ರಹ್ಮಾವರ ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಮಹೇಶ್ ಐತಾಳ್ ಅಮಾನತಿಗೆ ಶ್ರೀರಾಮ ದಿವಾಣ ಒತ್ತಾಯ

ಸರಣಿ ಅಪಘಾತದಲ್ಲಿ ಬೈಕ್ ಸವಾರ ಯುವಕ ಮೃತ್ಯು, ಕಳವಿಗೆ ಯತ್ನಿಸುವಾಗ ಬಾವಿಗೆ ಬಿದ್ದ ಶಿವಮೊಗ್ಗ ವಾಸಿಯ ರಕ್ಷಣೆ- ಬಂಧನ, ಕಳ್ಳನ ಬಂಧನ

ಸರಣಿ ಅಪಘಾತ: ಬೈಕ್ ಸವಾರ ಯುವಕ ಮೃತ್ಯು

ಬದಿಯಡ್ಕ: ಎರಡು ಬೈಕ್ ಮತ್ತು ಕಾರು ಪರಸ್ಪರ ಡಿಕ್ಕಿ ಹೊಡೆದು ಸಂಭವಿಸಿದ ಸರಣಿ ಅಪಘಾತದಲ್ಲಿ ಬೈಕ್ ಸವಾರ ಯುವಕ ಗಂಭಿರವಾಗಿ ಗಾಯಗೊಂಡು ಮೃತಪಟ್ಟ ಘಟನೆ ಬದಿಯಡ್ಕ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

kartik

ಪೆರ್ಲದ ಬೇಕರಿಯೊಂದರಲ್ಲಿ ನೌಕರನಾಗಿರುವ ಪೆರ್ಲ ಬಳಿಯ ಶೇಣಿ ನಿವಾಸಿ ಕಾರ್ತಿಕ್ (19) ಮೃತ ದುರ್ದೈವಿ. ಎಪ್ರಿಲ್ 29ರಂದು ನಡೆದ ಅಪಘಾತದಲ್ಲಿ ಕಾರ್ತಿಕ್ ಗಾಯಗೊಂಡಿದ್ದ. ಕಾರ್ತಿಕ್ ಚಲಾಯಿಸುತ್ತಿದ್ದ ಬೈಕಿಗೆ, ಸ್ಕೂಟರ್ ಮತ್ತು ಕಾರು ಡಿಕ್ಕಿ ಹೊಡೆದಿತ್ತು. ಮೃತರು ತಾಯಿ, ಸಹೋದರಿಯರನ್ನು ಅಗಲಿದ್ದಾರೆ. ಅಪಘಾತದಲ್ಲಿ ಇನ್ನೊಂದು ಬೈಕ್ ಸವಾರ ಯುವಕನಿಗೂ ಗಾಯವಾಗಿದೆ.

ಪರಾರಿಯಾಗಲೆತ್ನಿಸಿ ಬಾವಿಗೆ ಬಿದ್ದ ಕಳ್ಳನ ರಕ್ಷಣೆ !

ಕುಂಬಳೆ: ಕಳವುಗೈಯುವ ತಯಾರಿ ಮಧ್ಯೆ ಮನೆಯವರು ಎಚ್ಚರಗೊಂಡ ಹಿನ್ನೆಲೆಯಲ್ಲಿ ಪರಾರಿಯಾಗಲು ಯತ್ನಿಸಿದ ಇಬ್ಬರು ಕಳ್ಳರ ಪೈಕಿ ಓರ್ವ ಕಳ್ಳ ಮನೆಯ ಪರಿಸರದಲ್ಲಿದ್ದ ಬಾವಿಗೆ ಬಿದ್ದು, ಇದೀಗ ಪೊಲೀಸರ ಅತಿಥಿಯಾದ ವಿದ್ಯಾಮಾನ ಕುಂಬಳೆ ಸಮೀಪದ ಅಂತೂಸ್ ಕಾಲನಿ ಪರಿಸರದಲ್ಲಿ ನಡೆದಿದೆ.

ಬಾವಿಗೆ ಬಿದ್ದ ಕಳ್ಳನನ್ನು ಅಗ್ನಿಶಾಮಕ ದಳದವರ ಸಹಾಯದಿಂದ ಮೇಲಕ್ಕೆತ್ತಿದ ಬಳಿಕ ಊರವರು ಕುಂಬಳೆ ಪೊಲೀಸರಿಗೆ ಹಸ್ತಾಂತರಿಸಿದರು. ಅಂತೂಸ್ ಕಾಲನಿಯ ಇಬ್ರಾಹಿಂ ಎಂಬವರ ಮನೆಯಲ್ಲಿ ಈ ಘಟನೆ ನಡೆದಿದೆ. ಮನೆಯ ಮುಂಬಾಗದ ಬಾಗಿಲನ್ನು ಮುರಿದು ಒಳನುಗ್ಗುವ ಮಧ್ಯೆ ಶಬ್ದ ಕೇಳಿ ಮನೆಯವರು ಎಚ್ಚರಗೊಂಡಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ಕಳ್ಳರು ಹೊರಗಿನಿಂದ ಓಡುವುದನ್ನು ಮನೆಯವರು ಗಮನಿಸಿದ್ದಾರೆ. ಇದನ್ನು ಕಂಡ ಇಬ್ರಾಹಿಂರವರ ತಮ್ಮ ಮೊಯ್ದೀನ್ ಹಾಗೂ ನೆರೆಮನೆಯವರು ಸೇರಿ ಸುಮಾರು ಎರಡು ತಾಸುಗಳ ತನಕ ಹುಡುಕಾಡಿದರೂ ಯಾರೂ ಸಿಗದೆ ಮನೆಯ ಕಡೆ ಹಿಂತಿರುಗುವಾಗ ಮನೆ ಸಮೀಪದ ಬಾವಿಯಲ್ಲಿ ಬೊಬ್ಬೆ ಕೇಳಿ ಬಂದಿದೆ. ಬಳಿಕ ಅಗ್ನಿಶಾಮಕ ದಳವನ್ನು ಸ್ಥಳಕ್ಕೆ ಕರೆಸಿ ಬಾವಿಗೆ ಬಿದ್ದ ಕಳ್ಳನನ್ನು ಮೇಲಕ್ಕೆತ್ತಿ ರಕ್ಷಿಸಲಾಯಿತು.

baviyinda melakke

ಸಿಕ್ಕಿಬಿದ್ದ ಕಳ್ಳ, ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯ ನಿವಾಸಿ ಎನ್ನಲಾಗಿದೆ. ಶಿವಮೊಗ್ಗದಿಂದ ಕೂಲಿ ಕೆಲಸಕ್ಕಾಗಿ ಕುಂಬಳೆಗೆ ಆಗಮಿಸಿದ ಇವರು, ಹಗಲು ಕೂಲಿ ಕೆಲಸ ಮಾಡುತ್ತಾ, ರಾತ್ರಿ ವೇಳೆಗಳಲ್ಲಿ ಕಳ್ಳತನ ನಡೆಸುತ್ತಿರುವುದು ಇವರ ಚಾಳಿ ಎಂದು ಪೊಲೀಸರು ಶಂಕೆ ವ್ಯಕ್ತ ಪಡಿಸಿದ್ದಾರೆ.

ಬಾಡಿಗೆ ಮನೆಯಿಂದ ಕಳವು: ಆರೋಪಿ ಬಂಧನ

ಬದಿಯಡ್ಕ: ಇಲ್ಲಿಗೆ ಸಮೀಪದ ಕನ್ಯಪ್ಪಾಡಿಯ ಬಾಡಿಗೆ ಮನೆಯಿಂದ 50 ಸಾವಿರ ರೂ. ಕಳವುಗೈದ ಪ್ರಕರಣದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

arafath

ತಳಂಗರೆ ಸಮೀಪದ ಬಾಂಗೋಡ್ ನಿವಾಸಿ ಮೊಹಮ್ಮದ್ ಅರ್ಫಾಸ್ (22) ಎಂಬಾತ ಬಂಧಿತ ಕಳ್ಳ. ಎಪ್ರಿಲ್ 11ರಂದು ನೀರ್ಚಾಲು ಸಮೀಪದ ಕನ್ಯಪ್ಪಾಡಿಯ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ತಿಮೋತಿ ಡಿ ಸೋಜರವರ ಮನೆಯಿಂದ 50 ಸಾವಿರ ರೂ. ಕಳವಾಗಿತ್ತು. ಮನೆ ಹಿಂಭಾಗದ ಬಾಗಿಲಿನ ಬೀಗ ಮುರಿದು ಒಳನುಗ್ಗಿದ ಕಳ್ಳ, ಕಪಾಟಿನಲ್ಲಿರಿಸಲಾಗಿದ್ದ ಹಣವನ್ನು ಕಳವು ಮಾಡಿದ್ದನು. ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಕಳವು ನಡೆದಿತ್ತು.

ಕಳ್ಳನ ಪತ್ನಿಯ ಮನೆ ಕನ್ಯಪ್ಪಾಡಿಯಲ್ಲಿದ್ದು, ಆರೋಪಿ ಅರ್ಫಾಸ್ ಕಳವು ನಡೆದ ದಿನ ಅಲ್ಲಿ ತಿರುಗಾಡುತ್ತಿರುವುದನ್ನು ಸ್ಥಳೀಯರು ಕಂಡಿದ್ದಾರೆನ್ನಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿರುವ ಮಧ್ಯೆ ಆರೋಪಿ ಮುಂಬೈಗೆ ಪರಾರಿಯಾಗಿರುವುದು ಇನ್ನಷ್ಟು ಶಂಕೆಗೆ ಕಾರಣವಾಗಿತ್ತು. ಈ ಮಧ್ಯೆ, ಆರೋಪಿ ಅರ್ಫಾಸ್ ಪತ್ನಿಯ ಮನೆಯಿರುವ ಕನ್ಯಪ್ಪಾಡಿಗೆ ಬಂದಾಗ ಪೊಲೀಸರು ಬಂಧಿಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

.

Leave a Reply

Your email address will not be published. Required fields are marked *