Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ವಾಹನ ಡಿಕ್ಕಿ: ಆಕ್ಟೀವಾ ಸವಾರ ಮೃತ್ಯು

ಉಡುಪಿ: ಅಪರಿಚಿತ ವಾಹನ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮವಾಗಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಕೆಎ 47 ಆರ್ 2352 ನಂಬ್ರದ ಆಕ್ಟೀವಾ ಹೋಂಡಾ ಸೇತುವೆ ದಂಡೆಗೆ ತಾಗಿ ಸವಾರರು ಹೋಂಡಾ ಸಹಿತ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡ ಸವಾರ ಆಸ್ಪತ್ರೆಯಲ್ಲಿ ಮೃತಪಟ್ಟು, ಸಹ ಸವಾರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸೇತುವೆಯಲ್ಲಿ ಸಂಭವಿಸಿದೆ.
ಕುಂದಾಪುರ ತಾಲೂಕು ಕೋಡಿ ಗ್ರಾಮದ ನಿವಾಸಿ ಮೊಹಮ್ಮದ್ ಸನಾವುಲ್ಲ ಮೃತ ದುರ್ದೈವಿ. ಕೆ.ಮೊಯಿದೀನ್ ರವರ ಪುತ್ರ ಮೊಹಮ್ಮದ್ ಮುಸ್ತಾಪ (20) ಗಾಯಾಳು. ಈ ಬಗ್ಗೆ, ಗಾಯಾಳು ಮೊಹಮ್ಮದ್ ಮುಸ್ತಾಪ ನೀಡಿದ ದೂರಿನಂತೆ ಅಪರಿಚಿತ ವಾಹನದ ಚಾಲಕನ ವಿರುದ್ಧ ಬ್ರಹ್ಮಾವರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *