Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಹೋಟೆಲ್ ಉದ್ಯೋಗಿಯ ಶವ ಪತ್ತೆ

ಉಡುಪಿ: ಉಡುಪಿ ತಾಲೂಕು ಪೆರ್ಡೂರು ಗ್ರಾಮದ ಕುಂಜದಕಟ್ಟೆ ನಿವಾಸಿ ವಿಶ್ವನಾಥ ಶೆಟ್ಟಿ (43) ಎಂಬವರ ಮೃತದೇಹ, ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿನ ರಸ್ತೆ ಬದಿ ಇರುವ ಗೇಟ್ ಪಕ್ಕ ಪತ್ತೆಯಾಗಿದೆ.
ವಿಶ್ವನಾಥ ಶೆಟ್ಟಿ, ಮಣಿಪಾಲದ ಹೋಟೆಲ್ ಒಂದರಲ್ಲಿ ಉದ್ಯೋಗಿಯಾಗಿದ್ದು, ಮೃತದೇಹ ಪತ್ತೆಯಾದ ದಿನದಂದು ಬೆಳಿಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟಿದ್ದರು. ಕೆಲಸ ಮುಗಿಸಿ ರಾತ್ರಿ ಮನೆಗೆ ಮರಳದಿದ್ದ ಕಾರಣ, ಹುಡುಕಾಡಿದಾಗ ರಸ್ತೆ ಬದಿ ಮೃತದೇಹ ಪತ್ತೆಯಾಯಿತೆನ್ನಲಾಗಿದೆ. ಈ ಬಗ್ಗೆ, ಮೃತರ ಪತ್ನಿ ಚಂದ್ರಕಲಾ ನೀಡಿದ ಹೇಳಿಕೆಯಂತೆ ಹಿರಿಯಡ್ಕ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *