Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಮಗನಿಂದ ತಾಯಿಯ ಕೊಲೆ !

ಉಡುಪಿ: ಮಗನೇ ಕತ್ತಿಯಿಂದ ಕುತ್ತಿಗೆಗೆ ಕಡಿದು ತಾಯಿಯನ್ನು ಕೊಲೆಗೈದ ಘಟನೆ ಕುಂದಾಪುರ ತಾಲೂಕಿನಲ್ಲಿ ನಡೆದಿದೆ. ಬಳ್ಕೂರು ಗ್ರಾಮದ ಸಸಿಹಿತ್ಲು ಪೂಜಾರಿ ಮನೆಯ ನಿವಾಸಿ ಸಾಧು ಪೂಜಾರ್ತಿ (70) ಕೊಲೆಯಾದ ದುರ್ದೈವಿ. ಈಕೆಯ ಮಗ ರಾಮ ಪೂಜಾರಿ ಕೊಲೆ ಆರೋಪಿ.
ಆರೋಪಿ ರಾಮ ಪೂಜಾರಿಗೆ ಸರಿಯಾಗಿ ಕೆಲಸಕ್ಕೆ ಹೋಗದೆ, ಹಣಕ್ಕಾಗಿ ಆಗಾಗ ತಾಯಿ ಸಾಧು ಪೂಜಾರ್ತಿಯವರನ್ನು ಪೀಡಿಸುತ್ತಿದ್ದ. ಮೇ 28ರ ಮಧ್ಯಾಹ್ನವೂ ಹಣಕ್ಕಾಗಿ ತಾಯಿಯನ್ನು ಪೀಡಿಸಿದ್ದು, ಹಣ ಕೊಡದ ಕಾರಣಕ್ಕೆ, ತಾಯಿಯ ಕುತ್ತಿಗೆಗೆ ಕತ್ತಿಯಿಂದ ಕಡಿದು ಕೊಲೆಗೈದ ಎನ್ನಲಾಗಿದೆ.
ಘಟನೆ ಬಗ್ಗೆ, ಮೃತರ ಅಳಿಯ ರಾಜು ಪೂಜಾರಿ ನೀಡಿದ ದೂರಿನಂತೆ, ಆರೋಪಿ ರಾಮ ಪೂಜಾರಿ ವಿರುದ್ಧ ಕುಂದಾಪುರ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *