Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

ನದಿಯಲ್ಲಿ ಮುಳುಗಿದಾತನನ್ನು ರಕ್ಷಿಸಲು ನದಿಗಿಳಿದಾತನೇ ನೀರಿನಲ್ಲಿ ಮುಳುಗಿ ಮೃತ್ಯು

ಉಡುಪಿ: ನದಿ ನೀರಿನಲ್ಲಿ ಮುಳುಗಿದಾತನನ್ನು ರಕ್ಷಿಸಲು ನದಿಗೆ ಇಳಿದ ವ್ಯಕ್ತಿಯೇ, ಈಜಲು ಬಾರದೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕಾರ್ಕಳ ತಾಲೂಕು ನಾಡ್ಪಾಲು ಗ್ರಾಮದ ಸೀತಾನದಿಯಲ್ಲಿ ಸಂಭವಿಸಿದೆ.
ಶಿವಮೊಗ್ಗ ನಿವಾಸಿ, ಮಾರುತಿ ಓಮಿನಿ ಕಾರು ಚಾಲಕ ಮುನ್ನಾ ಯಾನೆ ಇರ್ಷಾದ್ ಮೃತ ದುರ್ದೈವಿ. ಇರ್ಷಾದ್ ರವರು ಶಿವಮೊಗ್ಗ ಒಂದನೇ ಕ್ರಾಸ್ 100 ಅಡಿ ರಸ್ತೆಯ ನಿವಾಸಿಗಳಾದ ಅಬೂಬಕರ್ ಹಾಗೂ ಇವರ ಮನೆಯವರನ್ನು ಕರೆದುಕೊಂಡು ಶಿವಮೊಗ್ಗದಿಂದ ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಗೆ ಬಂದಿದ್ದರು. ಮಂಗಳೂರಿನಲ್ಲಿರುವ ಸಂಬಂಧಿಕರ ಮನೆಯಿಂದ ಶಿವಮೊಗ್ಗಕ್ಕೆ ಮರಳುವಾಗ, ನಾಡ್ಪಾಲು ಗ್ರಾಮದಲ್ಲಿನ ದರ್ಗಾಕ್ಕೆ ಹೋಗುವ ಸಲುವಾಗಿ ಸೀತಾನದಿಯಲ್ಲಿ ಸ್ನಾನಕ್ಕಿಳಿದಾಗ, ಅಬೂಬಕರ್ ರವರ ಪುತ್ರ ನೌಷಾದ್ ನದಿ ನೀರಿನಲ್ಲಿ ಮುಳುಗಿದ್ದು, ಈತನನ್ನು ರಕ್ಷಿಸಲು ಚಾಲಕ ಇರ್ಷಾದ್ ನದಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಈಜು ಬಾರದ ಕಾರಣ ಕಾರಣ ಇರ್ಷಾದ್ ರವರೇ ನೀರಿನಲ್ಲಿ ಮುಳುಗಿ ಮೃತರಾದರೆನ್ನಲಾಗಿದೆ.
ಈ ಬಗ್ಗೆ, ಅಬೂಬಕರ್ ನೀಡಿದ ಹೇಳಿಕೆಯಂತೆ ಹೆಬ್ರಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *