Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕಾರು ಡಿಕ್ಕಿ: ಸೈಕಲ್ ಸವಾರ ಮೃತ್ಯು

ಉಡುಪಿ: ಕಾರು ಡಿಕ್ಕಿ ಹೊಡೆದ ಪರಿಣಾಮ ಸೈಕಲ್ ಸವಾರ ಗಂಭೀರ ಗಾಯಗೊಂಡು ಮೃತಪಟ್ಟ ಘಟನೆ ಹಂಗಾರಕಟ್ಟೆ – ಪಾರಂಪಳ್ಳಿ ರಸ್ತೆಯ ಗುಂಡ್ಮಿ ಗ್ರಾಮದ ವಿಶ್ವಕರ್ಮ ಸಭಾ ಭವನದ ಬಳಿ ಸಂಭವಿಸಿದೆ.
ಹಂಗಾರಕಟ್ಟೆ ನಿವಾಸಿ ಕೃಷ್ಣ (45) ಮೃತ ದುರ್ದೈವಿ. ಕೃಷ್ಣ, ಪದ್ಮನಾಭ ಹಾಗೂ ವೀರಭದ್ರ ಎಂಬವರು ಹಂಗಾರಕಟ್ಟೆಯಿಂದ ಪಾರಂಪಳ್ಳಿ ಕಡೆಗೆ ಸೈಕಲ್ ನಲ್ಲಿ ಸಂಚರಿಸುತ್ತಿದ್ದಾಗ, ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಸಂಚರಿಸುತ್ತಿದ್ದ ಕೆಎಲ್ 55 ಜೆ 4161 ನಂಬ್ರದ ಕಾರು ಕೃಷ್ಣ ಅವರು ಸಂಷಚರಿಸುತ್ತಿದ್ದ ಸೈಕಲ್ ಗೆ ಡಿಕ್ಕಿ ಹೊಡೆಯಿತು. ಪರಿಣಾಮ ಸೈಕಲ್ ಸವಾರ ಕೃಷ್ಣ ಅವರು ಗಂಭೀರ ಗಾಯಗೊಂಡು ಮೃತರಾದರು.
ಈ ಬಗ್ಗೆ, ವೀರಭದ್ರ ನೀಡಿದ ದುರಿನಂತೆ, ಕಾರು ಚಾಲಕ ಇಬ್ರಾಹೀಂ ವಿರುದ್ಧ ಕೋಟ ಠಾಣೆಯ ಪೊಲೀಸರು ಮೊಕದ್ದಮೆ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *