Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಬೆಂಕಿ ಆಕಸ್ಮಿಕ: ಗಾಯಾಳು ಮಹಿಳೆ ಆಸ್ಪತ್ರೆಯಲ್ಲಿ ಮೃತ್ಯು

ಉಡುಪಿ: ಸೀಮೆ ಎಣ್ಣೆ ದೀಪದ ಬೆಂಕಿ ಆಕಸ್ಮಿಕವಾಗಿ ಸೀರೆಗೆ ತಗುಲಿ ತೀವ್ರ ತರದ ಸುಟ್ಟ ಗಾಯಕ್ಕೆ ಒಳಗಾದ ಮಹಿಳೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಡುಪಿ ತಾಲೂಕಿನಲ್ಲಿ ನಡೆದಿದೆ.
ಸಾಸ್ತಾನ ಗ್ರಾಮದ ನಿವಾಸಿ ನರ್ಸಿ (69) ಮೃತ ದುರ್ದೈವಿ. ಮೇ 23ರ ರಾತ್ರಿ 8 ಗಂಟೆಗೆ ಘಟನೆ ನಡೆದಿದೆ ಎನ್ನಲಾಗಿದೆ. ಮನೆಯ ಹೊರಗಿನ ಸೌದೆ ಒಲೆಯಲ್ಲಿ ಮಾಡಿದ ಅನ್ನವನ್ನು ಬಸಿಯಲು ಹೋಗುವ ಸಮಯದಲ್ಲಿ ಘಟನೆ ನಡೆಯಿತೆನ್ನಲಾಗಿದೆ.
ಈ ಬಗ್ಗೆ, ನೆರೆಮನೆಯ ಸಂತೋಷ್ ನೀಡಿದ ಹೇಳಿಕೆಯಂತೆ ಕೋಟ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *