Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ವೇದಮಾತೆಯ ಸ್ತುತಿ

# ಸ್ತುತಾ ಮಯಾ ವರದಾ ವೇದಮಾತಾ ಪ್ರಚೋದಯಂತಾಂ
ಪಾವಮಾನೀ ದ್ವಿಜಾನಾಮ್ 1 ಆಯುಃ ಪ್ರಾಣಂ ಪ್ರಜಾಂ ಪಶುಂ
ಕೀರ್ತೀ ದ್ರವಿಣಂ ಬ್ರಹ್ಮವರ್ಚಸಂ 1 ಮಹ್ಯಂ ದತ್ವಾ ವ್ರಜತ
ಬ್ರಹ್ಮಲೋಕಂ 11

* ಸರ್ವಶಕ್ತನಾದ ಪರಮಾತ್ಮನ ಸ್ವರೂಪವನ್ನು ತಿಳಿಯಲು, ಅವನ ದೈವೀಗುಣಗಳನ್ನು ತನ್ನದನ್ನಾಗಿ ಮಾಡಿಕೊಳ್ಳುವ ಉದ್ಧೇಶದಿಂದ ಯಾರು ದೃಢ ಸಂಕಲ್ಪ ತಾಳುತ್ತಾರೋ ಅವರಿಗೆ ವೇದಜ್ಞಾನದ ಸಂಸ್ಕಾರದ ಮೂಲಕ ದ್ವಿಜತ್ವವನ್ನು ದಾನ ಮಾಡಿ ಪಾವನೀಕರಿಸುವ ವೇದಮಾತೆಯೇ, ನಿನ್ನನ್ನು ಸ್ತುತಿಸುತ್ತೇವೆ.

ಹುಟ್ಟಿನಿಂದ ನಾವೆಲ್ಲರೂ ಸಂಸ್ಕಾರವಿಲ್ಲದವರಾದ ಕಾರಣ, ಜ್ಞಾನ ವಿಹೀನರಾಗಿ ಪಶು ಸದೃಶರಾಗಿದ್ದೆವು. ನಿನ್ನ ಅನುಗ್ರಹದಿಂದ ದ್ವಿಜತ್ವವನ್ನು ಹೊಂದಿದವರಾಗಿದ್ದರೂ, ಬೃಹತ್ ಪ್ರಕಾಶದ ಸ್ಥಿತಿಯಾದ ಬ್ರಹ್ಮಲೋಕದ ಪ್ರಾಪ್ತಿಗಾಗಿ, ಬ್ರಹ್ಮವಿದ್ಯೆಯ ಅಧ್ಯಯನಕ್ಕಾಗಿ ಪೂರ್ಣ ಆಯುಷ್ಯವನ್ನು ಹೊಂದಿದವರಾಗೋಣ. ನಮ್ಮ ಪ್ರಾಣಶಕ್ತಿಯು ವರ್ಧಿಸಲಿ. ನಿನ್ನಿಂದ ಅನುಗ್ರಹಿತವಾದ ಜ್ಞಾನವು ಪ್ರವಾಹರೂಪವಾಗಿ ಹರಿದು, ನಮ್ಮ ಕಾಲದ ನಂತರವೂ ಶಾಶ್ವತವಾಗಿ ಉಳಿದು ಪ್ರಚುರಪಡಿಸಲು, ಯೋಗ್ಯರಾದ ಪ್ರಜೆಗಳನ್ನು ಅನುಗ್ರಹಿಸು.

ನಾವು ಎಂದಿಗೂ ಅದೀನರಾಗದಂತೆ, ಕೀರ್ತಿಶಾಲಿಗಳಾಗಿ ಬಾಳುವಂತಾಗಲಿ. ಇದರ ಪೋಷಕವಾಗಿ ಸಕಲ ಸಂಪತ್ತುಗಳೂ ಲಭಿಸುವಂತಾಗಲಿ. ಬ್ರಹ್ಮ ತೇಜಸ್ಸಿನಿಂದ ಕೂಡಿದ ಆತ್ಮಿಕ ದೈಹಿಕ ಬಲಗಳೆರಡು ಲಭಿಸಲಿ. ಜನತೆಯ ಅಜ್ಞಾನಾಂಧಕಾರಗಳನ್ನು ಬಿಡಿಸಿ, ಎಲ್ಲರನ್ನೂ ಮೇಲೆತ್ತುವ, ಜಾಗ್ರತಾವಸ್ಥೆಗೆ ತರುವ ತೇಜಸ್ಸು ನಮ್ಮನ್ನು ಪ್ರೇರಿಸಲಿ. (ಅಥರ್ವ: 19-71-1)

‘ಋಗ್ವೇದ ದರ್ಶನ’ದ ಭೂಮಿಕೆಯಿಂದ, ಭಾಷ್ಯಕಾರರು: ಪಂಡಿತ ಸುಧಾಕರ ಚತುರ್ವೇದೀ)

Leave a Reply

Your email address will not be published. Required fields are marked *