Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಬೇರೋಬ್ಬನಿಂದ ನಿನ್ನ ಉದ್ಧಾರವಾಗದು.

# ತದ್ವಿವಿದ್ಧಿ ಯಸ್ತ ಇಂದ್ರೋಜುಜೋಷತ್ ಸ್ತುಹಿ ಸುಷ್ಟತಿಂ ನಮಸಾವಿವಾಸ
ಉಪಭೂಷ ಜರಿತುರ್ಮಾ ರುವಣ್ಯಃ ಶ್ರಾವಯಾ ವಾಕ್ಯಂ ಕುವಿ ದಂಗವೇದತ್ (ಋಗ್ವೇದ: 8-96-12)

ಓ ಜೀವ, ಪ್ರಭುವಿಗೇನುಬೆಂಕೆಂದರಿ. ಅತ್ಯಂತೋತ್ತಮವಾದ ಸಜ್ಜನರ ಹೃದಯಾಂತಾರಾಳದಿಂದ ಹೊರ ಬೀಳುವ ಸ್ತುತಿಗೆ ಪಾತ್ರನಾದ ಭಗವಂತನನ್ನು ಸ್ತುತಿಸು. ವಿನಯಾವನತನಾಗಿ ವಿಶಿಷ್ಟ ವಿಧಿಯಿಂದ ಉಪಾಸಿಸು. ಅದೇ ದೇವದೇವನ ಬಳಿ ವಿರಾಜಿಸು. ರೋದಿಸಬೇಡ. ಅರಿಕೆ ಮಾಡಿಕೊಳ್ಳುವುದು ಏನಿದೆಯೋ, ಹೇಳಿಕೊ. ಭೂಮ್ಯಾದಿ ಅಖಿಲ ಬ್ರಹ್ಮಾಂಡ ಜ್ಞಾತೃವಾ ದೇವ. ಅವನು ನಿನ್ನ ಕಾಮನೆಯನ್ನು ತಿಳಿಯುವನು. ಓ ಪ್ರಿಯ, ಅಳಬೇಡ.

# ಮಹಿಮಾ ತೇ ಅನ್ಯೇನ ನ ಸಂನಶೇ. (ಯಜುರ್ವೇದ: 23-15)

ಬೇರೋಬ್ಬನಿಂದ ನಿನ್ನ ಉದ್ಧಾರವಾಗದು.

# ಪ್ರಾಂಚೋ ಅ ಗಾಮ ನೃತಯೇ ಹಸಾಯ. (ಅಥರ್ವವೇದ: 12-2-22)

ಮುಂದು ಮುಂದಕ್ಕೆ, ಸೌಜನ್ಯ ಧನ್ಯತಾಯುತರಾಗಿ, ಭಕ್ತಿ ಭಾವೋದ್ರೇಕದಿಂದ ಹೋಗೋಣ. ಆನಂದಮಯನ ಮಕ್ಕಳು ಅಳುವುದಾದರೂ ಏಕೆ ? ನಗಿರಿ.

# ಗಿರಾ ಮುಪಶ್ರುತಿಂಚರ (ಋಗ್ವೇದ: 1-10-3)

ಭಗವನ್, ನಿನ್ನ ವಾಣಿಯನ್ನು ಅನುಗಾಮಿನಿಯಾಗಿ ಮಾಡು.

(‘ಋಗ್ವೇದ ದರ್ಶನ’ದಿಂದ, ಭಾಷ್ಯಕಾರರು: ಪಂಡಿತ ಸುಧಾಕರ ಚತುರ್ವೇದಿ)

Leave a Reply

Your email address will not be published. Required fields are marked *