Realtime blog statisticsweb statistics
udupibits.in
Breaking News
ಉಡುಪಿ: ಆಮಂತ್ರಣ ಮತ್ತು ಪತ್ರ ವ್ಯವಹಾರಗಳಲ್ಲಿ ‘ಪ್ರಭಾರ ಪ್ರಾಂಶುಪಾಲರು’ ಎಂದು ಬರೆಯಲು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಿಗೆ ಇಲಾಖಾ ಉಪನಿರ್ದೇಶಕರಿಂದ ಆದೇಶ

ಸದ್ಗುರು ಭಗವಾನ್ ನಿತ್ಯಾನಂದ ಸ್ವಾಮೀ ಚಿದಾಕಾಶ ಗೀತಾ- 3

# ಬಾವಿಯಿಂದ ನೀರು ಎಳೆಯುವಂತೆ ಸಾಧಕನು ಶ್ವಾಸವನ್ನು ಮೇಲಕ್ಕೆ ಎಳೆಯುವುದು ಮತ್ತು ಕೆಳಗೆ ಶ್ವಾಸವು ಹೋಗುವಾಗ ಬಾವಿಯಲ್ಲಿ ಕೊಡಪಾನ ಇಳಿಸುವಂತೆ ಹೋಗಬೇಕು. ಕೆಳಗೆ ಬಿಡುವ ಶ್ವಾಸವು ಮಾಯಾಶಕ್ತಿಯಿಂದ ಕೂಡಿರುವುದು. ಮೇಲೆ ಎಳೆಯುವ ಶ್ವಾಸವು ಓಂಕಾರ ಶಕ್ತಿಯಿಂದ ಕೂಡಿರುವುದು. ಓಂಕಾರ ಶಕ್ತಿಯಿಂದ ಕೂಡಿದ ಶ್ವಾಸಶಕ್ತಿಯ ಆಕರ್ಷಣವೆಂದು ಹೇಳುವುದೇ ಮನಸ್ಸಿನ ಶಕ್ತಿಯಾಗಿರುವುದು.

ಮನಸ್ಸು ಎಂದು ಹೇಳುವಂತಾದ್ದೇ ಜೀವಾತ್ಮಾ. ಅಂದರೆ ಜೀವಾತ್ಮನ ಆಧಾರದಿಂದಲೇ ಮನಸ್ಸಿನ ಶಕ್ತಿ ನಡೆಯುವಂತದ್ದು. ಆದ್ದರಿಂದ ಮನಸ್ಸಿನ ಸ್ಥಾನ ಕೆಳಗಿರುವುದು, ಜೀವಾತ್ಮನ ಸ್ಥಾನ ಮೇಲಿರುವುದು. ಹೀಗಿರುವುದರಿಂದ ಎರಡರ ಸ್ಥಾನ ಮಾತ್ರ ಪ್ರತ್ಯೇಕವಾಗಿರುವುದು. ಜೀವಾತ್ಮ ಎಂಬುದೇ ಪರಮಾತ್ಮನಾಗಿರುವನು. ಅಂದರೆ ಜೀವಾತ್ಮನು ಪರಮಾತ್ಮನ ಪ್ರತಿಬಿಂಬನಾಗಿರುವನು.

ಆತ್ಮಜ್ಞಾನವೆಂಬ ವಿದ್ಯೆಯನ್ನು ಕಲಿತುಕೊಳ್ಳಬೇಕು. ಆ ವಿದ್ಯೆ ಎಂದರೇನು ? ತನ್ನ ಆತ್ಮಸ್ವರೂಪದ ಜ್ಞಾನವನ್ನು ತಾನು ರಾಜಯೋಗದ ಸಾಧನದ ಅಭ್ಯಾಸವನ್ನು ಮಾಡಿ, ಆ ಆತ್ಮಜ್ಞಾನದ ಸ್ವಾನುಭವವನ್ನು ಪಡೆಯುವುದೇ ಆತ್ಮಜ್ಞಾನದ ಬ್ರಹ್ಮವಿದ್ಯೆ ಎನ್ನುವುದು. ಅದೇ ವಿದ್ಯೆಯ ಅನುಭವದಿಂದ ಪರಮಾತ್ಮ ಸ್ವರೂಪದ ತತ್ತ್ವಜ್ಞಾನವೆಂಬ ಗುಟ್ಟನ್ನು ಜೀವಾತ್ಮನಿಗೆ ಸ್ವಾನುಭವದಿಂದ ತಿಳಿದುಕೊಳ್ಳಬೇಕು.

ಜೀವಾತ್ಮದೊಳಗೆ ಪರಮಾತ್ಮ. ಅಂದರೆ ಜೀವಾತ್ಮನು ಪರಮಾತ್ಮನ ಪ್ರತಿಬಿಂಬರೂಪನಾಗಿರುವನು. ಸ್ಥೂಲ ದೇಹದೊಳಗೆ ಸೂಕ್ಷ್ಮ ಜ್ಞಾನ ವಿಚಾರವನ್ನು ಅಂತರ್ ದೃಷ್ಟಿಯಿಂದ ಸ್ವಾನುಭವದಿಂದ ನೋಡಿ, ಶಾಶ್ವತವಾದ ಸುಖ ಪಡೆದುಕೊಳ್ಳುವುದೇ ನಿಜವಾದ ಮುಕ್ತಿಯಾಗಿರುವುದು.

(‘ಚಿದಾಕಾಶ ಗೀತಾ’ ಗ್ರಂಥದಿಂದ, ಸಾಧ್ವಿ ತುಳಸಿ ಅಮ್ಮ ಅವರು ಸಂಗ್ರಹಿಸಿದ ಭಗವಾನ್ ನಿತ್ಯಾನಂದರ ಉಪದೇಶಗಳು)

Leave a Reply

Your email address will not be published. Required fields are marked *