Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ವೇದಕ್ಕಾಗಿ ಮೀಸಲಿಟ್ಟ ನಾಲಿಗೆ, ಪ್ರಿಯವಾದ ಪರಿಶುದ್ಧ ಜ್ಞಾನವನ್ನು ಸ್ರವಿಸುತ್ತಾ ಹೋಗುತ್ತದೆ…

# ಸ ಮೇ ಶ್ರದ್ಧಾಂಚ ಮೇಧಾಂಚ ಜಾತವೇದಾಃ ಪ್ರಯಚ್ಛತುಃ (ಅಥರ್ವವೇದ: 19-64-1)
ಆ ಸರ್ವ ವ್ಯಾಪಕ, ಸರ್ವಜ್ಞ ಪ್ರಭುವು ನನಗೆ ಶ್ರದ್ಧೆಯನ್ನು ಕರುಣಿಸಲಿ, ಬುದ್ಧಿ ಬಲವನ್ನು ಕರುಣಿಸಲಿ.

# ಋತಸ್ಯ ಸದಸೋ ಜ್ಯೋತಿರಜ್ಯಾತ್ (ಋಗ್ವೇದ: 10-111-2)
ವೇದದಲ್ಲಿ ಸುಸ್ಥಿತನಾದವನ ವರ್ಚಸ್ಸು, ಆತ್ಮಿಕ ತೇಜಸ್ಸು ದೇದೀಪ್ಯಮಾನವಾಗಿರುವುದು.

# ಋತಸ್ಯ ಜಿಹ್ವಾಪಹತೇ ಮಧುಪ್ರಿಯಂ ವಕ್ತಾಪತಿರ್ಧಿಯೋ ಅಸ್ಯಾ ಅದಾಭ್ಯಃ (ಋಗ್ವೇದ: 9-72-5)
ವೇದಕ್ಕಾಗಿ ಮೀಸಲಿಟ್ಟ ನಾಲಿಗೆ, ಪ್ರಿಯವಾದ ಪರಿಶುದ್ಧ ಜ್ಞಾನವನ್ನು ಸ್ರವಿಸುತ್ತಾ ಹೋಗುತ್ತದೆ. ಅಥವಾ, ಪ್ರಿಯವಾದ ಆತ್ಮನನ್ನು ಪಾವನಗೊಳಿಸುತ್ತದೆ. ಈ ವೇದೋಪದೇಶಕನು, ಈ ಬುದ್ಧಿಯ ಪಾಲಕನು ಯಾರಿಂದಲೂ ಒತ್ತಾಯದಿಂದ ಬಾಗಿಸಲಾಗದವನು ಆಗುತ್ತಾನೆ.

# ಋತಸ್ಯ ತಂತುರ್ವಿತತಃ ಪವಿತ್ರ ಆ ಜಿಹ್ವಾಯಾ ಅಗ್ರೇ ವರುಣಸ್ಯ ಮಾಯಾಯಾ
ಧೀರಾಶ್ಚಿತ್ತತ್ ಸಮಿನಕ್ಷಂತ ಆಸತಾತ್ರಾ ಕರ್ತಮವ ಪದಾತ್ಯ ಪ್ರಭುಃ (ಋಗ್ವೇದ: 9-73-9)
ದುಃಖ ನಿವಾರಕ, ವರಣೀಯ ಪರಮಾತ್ಮನ ನಿರ್ಭ್ರಾಂತ ಜ್ಞಾನದಿಂದ ವೇದದ ಪವಿತ್ರವಾದ, ವಿಸ್ತಾರವು, ವೇದಜ್ಞನ ನಾಲಗೆಯ ಅಗ್ರದಲ್ಲಿ ಹರಡಿಕೊಂಡಿರುತ್ತದೆ. ಧೀರರಾದವರು ಮಾತ್ರ, ಮೇಧಾ ಪ್ರೇರಕರು ಮಾತ್ರ, ಆ ವೇದವನ್ನು ಸಮುಚಿತ ರೀತಿಯಲ್ಲಿ ಒಗ್ಗೂಡಿದವರಾಗಿ ಹೃದ್ಗತವಾಗಿ ಮಾಡಿಕೊಂಡು ಅನುಷ್ಠಾನಕ್ಕೆ ತರುತ್ತಾರೆ. ಅಶಕ್ತನು, ಇಂದ್ರಿಯಾರಾಮ ಭೋಗವಿಲಾಸಿಯು, ಅದನ್ನು ತಿಳಿಯಲಾರದವನು, ಇಲ್ಲಿಯೇ ಪತನದ ಕೂಪದಲ್ಲಿ, ಅಡಿಯಲ್ಲಿ ಬಿದ್ದಿರುತ್ತಾನೆ.

(‘ಋಗ್ವೇದ ದರ್ಶನ’ ಗ್ರಂಥದಿಂದ, ಭಾಷ್ಯಕಾರರು: ಪಂಡಿತ ಸುದಾಕರ ಚತುರ್ವೇದೀ)

Leave a Reply

Your email address will not be published. Required fields are marked *