Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಆರೋಗ್ಯ ಇಲಾಖೆಯ PIO & FAA ಗೆ ಮಾಹಿತಿ ಆಯೋಗದಿಂದ ಸಮನ್ಸ್

ಉಡುಪಿ: ಮಾಹಿತಿ ಹಕ್ಕು ಕಾಯ್ದೆ 2005ರಂತೆ ಅರ್ಜಿ ಸಲ್ಲಿಸಿದ ವ್ಯಕ್ತಿಗೆ ನಿಗದಿತ ಅವಧಿಯಲ್ಲಿ ಮಾಹಿತಿ ನೀಡದೆ ಕಾಯ್ದೆಯನ್ನು ಉಲ್ಲಂಘಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಾಗೃತಕೋಶ ವಿಭಾಗದ ಸಾರ್ವಜನಿಕ ಮಾಹಿತಿ ಅಧಿಕಾರಿ ಹಾಗೂ ಇಲಾಖಾ ನಿರ್ದೇಶಕರ ಕಚೇರಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಕರ್ನಾಟಕ ಮಾಹಿತಿ ಆಯೋಗವು ಸಮನ್ಸ್ ಜಾರಿಗೊಳಿಸಿದೆ.

ಆರೋಗ್ಯ ಇಲಾಖೆಯಲ್ಲಿ ನಡೆದ ಬಹುಕೋಟಿ ಮೊತ್ತದ ರಾಸಾಯನಿಕ ಮತ್ತು ರಕ್ತ ಶೇಖರಣಾ ಟ್ಯೂಬ್ ಗಳ ಖರೀದಿ ಪ್ರಕ್ರಿಯೆಯಲ್ಲಿ ಹಗರಣ ನಡೆದಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಾಗೃತಕೋಶದ ಅಂದಿನ ಮುಖ್ಯ ಜಾಗೃತಾಧಿಕಾರಿಗಳಾಗಿದ್ದ ಡಾ.ಕೆ.ಎಚ್.ನರಸಿಂಹಮೂರ್ತಿ ಅವರು ರಾಜ್ಯದಾದ್ಯಂತ ಎಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ, ಕಡತಗಳನ್ನು ತಪಾಸಣೆಗೆ ಒಳಪಡಿಸಿ ನಿಷ್ಪಕ್ಷಪಾತವಾದ ತನಿಖಾ ವರದಿಯನ್ನು ಇಲಾಖಾ ಮೇಲಾಧಿಕಾರಿಗಳಿಗೆ ಸಲ್ಲಿಸಿದ್ದರು.

ಈ ತನಿಖಾ ವರದಿಯಲ್ಲಿ ಹಗರಣ ನಡೆದ ಬಗ್ಗೆ ಮತ್ತು ಹಗರಣದಲ್ಲಿ ಇಲಾಖಾ ಅಧಿಕಾರಿಗಳ ಶಾಮೀಲಾತಿಯನ್ನು ಖಚಿತಪಡಿಸಲಾಗಿತ್ತು. ಈ ತನಿಖಾ ವರದಿಯಿಂದ ವಿಚಲಿತರಾದ ಇಲಾಖೆಯ ಉನ್ನತ ಅಧಿಕಾರಿಗಳು ಹಿಂದಿನ ಆರೋಗ್ಯ ಸಚಿವರಾದ ಯು.ಟಿ.ಖಾದರ್ ಅವರು ಅತ್ಯಂತ ವ್ಯವಸ್ಥಿತವಾಗಿ ಈ ಬಹುಕೋಟಿ ಹಗರಣವನ್ನು ಮುಚ್ಚಿಹಾಕಿದ್ದರು.

 

ಸಚಿವರು ಹಾಗೂ ಅಧಿಕಾರಿಗಳು ಡಾ.ನರಸಿಂಹಮೂರ್ತಿಯವರು ಸಿದ್ದಪಡಿಸಿದ ತನಿಖಾ ವರದಿಯನ್ನು ಸಹ ಮುಚ್ಚಿಟ್ಟಿದ್ದರು. ಉಡುಪಿಯ ಮಾಹಿತಿ ಹಕ್ಕು ಕಾರ್ಯಕರ್ತರಾದ ಶ್ರೀರಾಮ ದಿವಾಣ ಅವರು ಡಾ.ನರಸಿಂಹಮೂರ್ತಿಯವರು ಇಲಾಖಾ ಮೇಲಾಧಿಕಾರಿಗಳಿಗೆ ಸಲ್ಲಿಸಿದ ತನಿಖಾ ವರದಿಯ ಯಥಾ ದೃಢೀಕೃತ ಪ್ರತಿಯನ್ನು ನೀಡುವಂತೆ ಕೋರಿ ಇಲಾಖೆಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದರು.

ಜಾಗೃತಕೋಶದ ಸಾರ್ವಜನಿಕ ಮಾಹಿತಿ ಅಧಿಕಾರಿ ಮಾಹಿತಿ ನೀಡದ ಕಾರಣ, ನಿರ್ದೇಶಕರ ಕಚೇರಿಯ ಮೇಲ್ಮನವಿ ಪ್ರಾಧಿಕಾರಕ್ಕೆ ಒಂದನೇ ಅಪೀಲ್ ಸಲ್ಲಿಸಿದ್ದರು. ಮೇಲ್ಮನವಿ ಪ್ರಾಧಿಕಾರ ಕೂಡಾ ಮಾಹಿತಿ ನೀಡದೆ ಅರ್ಜಿಯನ್ನು ಸಾರಾ ಸಗಟು ನಿರ್ಲಕ್ಷಿಸಿತ್ತು. ಈ ಹಿನ್ನೆಲೆಯಲ್ಲಿ ಶ್ರೀರಾಮ ದಿವಾಣ ಅವರು ಮಾಹಿತಿ ಆಯೋಗಕ್ಕೆ ಎರಡನೇ ಅಪೀಲ್ ಸಲ್ಲಿಸಿದ್ದರು.

ಅರ್ಜಿದಾರ ಶ್ರೀರಾಮ ದಿವಾಣರ ಎರಡನೇ ಅಪೀಲ್ ನ್ನು ವಿಚಾರಣೆಗೆ ಸ್ವೀಕರಿಸಿದ ಆಯೋಗವು, ಪ್ರಕರಣದ ವಿಚಾರಣೆಯನ್ನು ಜುಲೈ 13ಕ್ಕೆ ನಿಗದಿಪಡಿಸಿ, ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿದೆ.

Leave a Reply

Your email address will not be published. Required fields are marked *