Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್ ಹೋತಾರಂ ರತ್ನಧಾತಮಮ್

ಅಗ್ನಿಮೀಳೇ ಪುರೋಹಿತಂ ಯಜ್ಞಸ್ಯ ದೇವಮೃತ್ವಿಜಮ್
ಹೋತಾರಂ ರತ್ನಧಾತಮಮ್ (ಋಗ್ವೇದ: 1-1-1)

ಪದಾರ್ಥ: (ಅಗ್ನಿಮ್) ಜ್ಞಾನಸ್ವರೂಪನೂ, ವ್ಯಾಪಕನೂ, ಸರ್ವರ ಅಗ್ರಣಿ ನಾಯಕನೂ ಆದ ಪರಮಾತ್ಮನನ್ನು (ನಾನು) (ಈಳೇ) ಸ್ತುತಿಸುತ್ತೇನೆ. ಆ ಪರಮೇಶ್ವರನು ಹೇಗಿದ್ದಾನೆ ? (ಪುರೋಹಿತಮ್) ಯಾವನು ಎಲ್ಲರ ಎದುರಿನಲ್ಲಿ ಸ್ಥಿತನೂ, ಉತ್ಪತ್ತಿಗೆ ಮೊದಲು ಪರಮಾಣು ಮೊದಲಾದ ಜಗತ್ತನ್ನು ಧಾರಣೆ ಮಾಡುವವನೂ, (ಯಜ್ಞಸ್ಯ ದೇವಮ್) ಯಜ್ಞಾದಿ ಉತ್ತಮ ಕರ್ಮಗಳ ಪ್ರಕಾಶಕನೂ (ಋತ್ವಿಜಮ್) ವಸಂತಾದಿ ಎಲ್ಲಾ ಋತುಗಳ ಉತ್ಪಾದಕನೂ, ಎಲ್ಲಾ ಋತುಗಳಲ್ಲಿ ಪೂಜನೀಯನೂ, (ಹೋತಾರಮ್) ಸರ್ವ ಋತುಗಳ ದಾತನೂ, ಪ್ರಳಯ ಕಾಲದಲ್ಲಿ ಎಲ್ಲ ಪದಾರ್ಥಗಳನ್ನೂ ತನ್ನಲ್ಲೇ ಗ್ರಹಿಸುವವನೂ, (ರತ್ನ ಧಾತಮಮ್) ಸೂರ್ಯ, ಚಂದ್ರಮಾ, ಆದಿ ರಮಣೀಯ ಪದಾರ್ಥಗಳ ಧಾರಕನೂ ಮತ್ತು ಸುಂದರವಾದ ಮುತ್ತು- ರತ್ನ- ಸುವರ್ಣ- ಬೆಳ್ಳಿ ಆದಿ ಪದಾರ್ಥಗಳನ್ನು ತನ್ನ ಮಕ್ಕಳಾದ ಪ್ರಜೆಗಳಿಗೆ ಕೊಡುವವನೂ ಆಗಿದ್ದಾನೆ.
     
ಭಾವಾರ್ಥ: ಜ್ಞಾನಸ್ವರೂಪ ಪರಮಾತ್ಮನು ಸರ್ವತ್ರ ವ್ಯಾಪಕನೂ, ಸರ್ವ ಪ್ರಕಾರದ ಯಜ್ಞಾದಿ ಶ್ರೇಷ್ಠ ಕರ್ಮಗಳ ಪ್ರಕಾಶಕ ಮತ್ತು ಉಪದೇಶಕನೂ, ಎಲ್ಲಾ ಋತುಗಳಲ್ಲಿಯೂ ಪೂಜನೀಯನೂ ಮತ್ತು ಎಲ್ಲಾ ಋತುಗಳನ್ನೂ ಮಾಡುವವನೂ, ಸರ್ವ ಋತುದಾತನೂ, ಎಲ್ಲಾ ಬ್ರಹ್ಮಾಂಡಗಳ ಕರ್ತೃ, ಧರ್ತೃ ಮತ್ತು ಹರ್ತೃ ಆಗಿದ್ದಾನೆ. ನಾನು ಇಂತಹ ಪ್ರಭುವಿನ ಉಪಾಸನೆ, ಪ್ರಾರ್ಥನೆ ಹಾಗೂ ಸ್ತುತಿಯನ್ನೇ ಮಾಡುತ್ತೇನೆ.
 

(‘ವೇದಜ್ಯೋತಿ'(ಚತುರ್ವೇದ ಶತಕ) ಗ್ರಂಥದಿಂದ, ಮೂಲ ಹಿಂದಿ: ಸ್ವಮೀ ಅಚ್ಯುತಾನಂದ ಸರಸ್ವತಿ, ಕನ್ನಡಾನುವಾದ: ಶ್ರುತಿಪ್ರಿಯ)
 

Leave a Reply

Your email address will not be published. Required fields are marked *