Realtime blog statisticsweb statistics
udupibits.in
Breaking News
ಉಡುಪಿ: ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹಾಗೂ ಬಿಜೆಪಿ ಬೆಂಬಲಿಸಿ ವರದಿ ಪ್ರಕಟಿಸಿದ ಉದಯವಾಣಿ ವಿರುದ್ಧ ಶ್ರೀರಾಮ ದಿವಾಣರಿಂದ ಚುನಾವಣಾ ಆಯೋಗಕ್ಕೆ ದೂರು

ಸರ್ವರನ್ನೂ ಸಮಾನರನ್ನಾಗಿ ಕಾಣುವುದೇ ವೇದ ಧರ್ಮ

ಯಸ್ಮಿನ್ ಸರ್ವಾಣಿ ಭೂತಾನ್ಯಾತ್ಮೈವಾಭೂದ್ವಿಜಾನತಃ
ತತ್ರ ಕೋ ಮೋಹಃ ಕಃ ಶೋಕ ಏಕತ್ವಮನುಪಶ್ಯತಃ (ಯಜುರ್ವೇದ: 40-7)

ಯಾವ ಸ್ಥಿತಿಯಲ್ಲಿ, ಆತ್ಮನೇ ಸ್ವತಃ ತಾನೇ ಸಮಸ್ತ ಜೀವರೂ ಆಗಿಹೋಗುತ್ತಾನೋ, ಆ ಸ್ಥಿತಿಯಲ್ಲಿ ತನ್ನ್ನು ಅನುಸರಿಸಿ ಏಕತ್ವವನ್ನು ಕಾಣುವ ವಿಜ್ಞಾನಿಗೆ ಮೋಹವಾವುದು ? ಶೋಕವಾವುದು ?

ಈ ಮಂತ್ರದಲ್ಲಿರುವ ಬರುವ ”ತಾನೇ ಸರ್ವಭೂತಗಳೂ ಆಗಿಹೋಗುವುದು, ಏಕತ್ವವನ್ನು ಕಾಣುವುದು” ಎಂಬ ವಾಕ್ಯಗಳಿಗೆ ನವೀನ ವೇದಾಂತದ ಅದ್ವೈತದ ಅರ್ಥ ಮಾಡಲು ಹೊರಡಬಾರದು. ಏಕೆಂದರೆ, ಸ್ವತಹಾ ವೇದಗಳೇ

”ದ್ವಾಸುಪರ್ಣಾ ಸಯುಜಾ ಸಖಾಯಾ ಸಮಾನಂ ವೃಕ್ಷಂ ಪರಿಷಸ್ವಜಾತೇ ತಯೋರನ್ಯಃ ಪಿಪ್ಪಲಂ ಸ್ವಾದ್ವತ್ಯನಶ್ನನನ್ನನ್ನೋ ಅಭಿಚಾಕಶೀತಿ (ಋಗ್ವೇದ: 1-164-20)

”ಸದಾ ಒಂದಿಗಿರುವ, ಪರಸ್ಪರ ಸಖರಾದ ಇಬ್ಬರು ಪಾಲನಾ ಶಕ್ತಿ ಸಂಪನ್ನರಾದ ಆತ್ಮರು, ಒಂದೇ ವೃಕ್ಷವನ್ನು ಆಶ್ರಯಿಸಿದ್ದಾರೆ. ಅವರಲ್ಲಿ ಒಬ್ಬನು ಸಿಹಿಹಣ್ಣನ್ನು ತಿನ್ನುತ್ತಾನೆ. ಇನ್ನೊಬ್ಬನು ತಿನ್ನದೆ ಪ್ರಕಾಶಿಸುತ್ತಿದ್ದಾನೆ”- ಎಂದು ಫಲಭೋಕ್ತೃವಾದ ಜೀವಾತ್ಮ ಸಾಕ್ಷಿರೂಪನಾದ ಪರಮಾತ್ಮ ಮತ್ತು ಜಡವಾದ ಪ್ರಕೃತಿ ಮೂರನ್ನೂ ಅಂಗೀಕರಿಸುತ್ತಲಿವೆ.

ಮತ್ತು ”ಪರಿಚಿನ್ನ ಭರತಾ ಅರ್ಭಕಾಸಃ” (ಋಗ್ವೇದ: 7-33-6)

”ಅಣುಪ್ರಮಾಣರಾದ, ದೇಹಧಾರಣೆ ಮಾಡುವ ಜೀವರು, ಏಕದೇಶವರ್ತಿಗಳಾಗಿದ್ದಾರೆ”- ಎಂದು ಜೀವರ ಅನೇಕತ್ವವನ್ನು ಸಾರುತ್ತಲಿವೆ. ಆದುದರಿಂದ, ಮೇಲ್ಕಂಡ ವಾಕ್ಯಗಳಿಗೆ- ”ಸರ್ವ ಜೀವರನ್ನೂ ತನ್ನಂತೆಯೇ ಕಾಣುವುದು, ಸುಖಃ-ದುಃಖಗಳ ವಿಷಯದಲ್ಲಿ ಸರ್ವರನ್ನೂ ತನ್ನಂತೆಯೇ ಭಾವಿಸುವುದು”- ಎಂಬ ಅರ್ಥವೇ ಯುಕ್ತಿ ಸಂಗತವಾಗಿರುತ್ತದೆ.

– ಪಂಡಿತ ಸುಧಾಕರ ಚತುರ್ವೇದೀ (‘ವೇದ ಪ್ರಕಾಶ’ ಮಾಸಿಕದ 1983ರ ಸೆಪ್ಟೆಂಬರ್ ತಿಂಗಳ ಸಂಚಿಕೆಯ ಲೇಖನದಿಂದ)

Leave a Reply

Your email address will not be published. Required fields are marked *