Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಪರಮಾತ್ಮನೇ ನಿಜವಾದ ತಂದೆ, ತಾಯಿ, ಬಂಧು ಬಳಗ, ಸದಾಕಾಲದ ಮಿತ್ರ…

ಓಂ ಅಗ್ನಿಂ ಮನ್ಯೇ ಪಿತರ ಮಗ್ನಿಮಾಪಿ                                                              ಮಗ್ನಿಂ ಭ್ರಾತರಂ ಸದ ಮಿತ್ಸಖಾಯಂ
ಅಗ್ನೇ ರ ನೀಕಂ ಬೃಹತಃ ಸಪರ್ಯಂ
ದಿವಿ ಶುಕ್ರಂ ಯಜತಂ ಸೂರ್ಯಸ್ಯ (ಋಗ್ವೇದ: 10-7-3)

ಭಾವಾರ್ಥ: ಪರಮಾತ್ಮನೇ ನಮ್ಮೆಲ್ಲರ ನಿಜವಾದ ತಂದೆ, ತಾಯಿ, ಬಂಧು ಬಳಗ ಮತ್ತು ಸದಾ ಕಾಲದ ಮಿತ್ರನಾಗಿರುವನು. ಸಾಂಸಾರಿಕ ತಂದೆ, ತಾಯಿ ಮೊದಲಾದವರು ಈ ಶರೀರ ಇರುವ ತನಕವೇ ಸಂಬಂಧ ಉಳ್ಳವರಾಗಿರುವರು. ಈ ಶರೀರ ಬಿದ್ದು ಹೋದ ಮೇಲೆ ಸಾಂಸಾರಿಕ ತಂದೆ, ತಾಯಿ, ಬಂಧು ಬಳಗ ಯಾರೂ ಇರುವುದಿಲ್ಲ. ನಿಜವಾದ ತಂದೆ, ತಾಯಿ ಆ ಪರಮಾತ್ಮನೊಬ್ಬನೇ ಆಗಿರುವನು. ಅವನ ಜ್ಯೋತಿಯೆಂಬ ಬಲದಿಂದ ಸೂರ್ಯ, ಚಂದ್ರ ಮೊದಲಾದುವು ಪ್ರಕಾಶಿಸುತ್ತವೆ. ಆದುದರಿಂದಲೇ ಭಗವಂತನು ಜ್ಯೋತಿಗಳಿಗೂ ಜ್ಯೋತಿ ಎನಿಸುತ್ತಾನೆ. ಪರಮೇಶ್ವರನ ಪ್ರಕಾಶವನ್ನುಳಿದು ಸೂರ್ಯ ಮೊದಲಾದುವು ಎಳ್ಳಷ್ಟೂ ಪ್ರಕಾಶವನ್ನು ಬೀರಲಾರವು. ಆದುದರಿಂದ, ಬನ್ನಿರಿ ಸಹೋದರರೆ, ನಾವೆಲ್ಲ ಜ್ಯೋತಿಗಳಿಗೂ ಜ್ಯೋತಿಯಾದ ಆ ಜಗತ್ಪತಿತನನ್ನು ಪ್ರೇಮಪೂರ್ವಕ ಸ್ತುತಿಸೋಣ, ಅವನನ್ನೇ ಪ್ರಾರ್ಥಿಸೋಣ, ಅವನು ನಮ್ಮೆಲ್ಲರಿಗೂ ಕಲ್ಯಾಣವನ್ನೆಸಗಲಿ.

Leave a Reply

Your email address will not be published. Required fields are marked *