Realtime blog statisticsweb statistics
udupibits.in
Breaking News
ಉಡುಪಿ: ಕನಿಷ್ಠ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ನಗರಸಭೆ, ಜಿಲ್ಲಾಡಳಿತ, ರಾಜ್ಯ-ಕೇಂದ್ರ ಸರಕಾರ ಸಂಪೂರ್ಣ ವಿಫಲ !

ಕಡಿಯಾಳಿ ದೇಗುಲದಲ್ಲಿ ನವರಾತ್ರಿ ಮಹೋತ್ಸವ: ಸಾಂಸ್ಕೃತಿಕ ವೈಭವ

ಉಡುಪಿ: ನವರಾತ್ರಿ ಮಹೋತ್ಸವದ ಅಂಗವಾಗಿ ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಅಕ್ಟೋಬರ್ ಒಂದರಿಂದ 11ರ ವರೆಗೆ ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ಜರುಗಿತು.

ಅಕ್ಟೋಬರ್ ಒಂದರಂದು ಗಣಯಾಗದೊಂದಿಗೆ ಆರಂಭಗೊಂಡ ನವರಾತ್ರಿ ಮಹೋತ್ಸವದ ಧಾರ್ಮಿಕ ಕಾರ್ಯಕ್ರಮದಲ್ಲಿ ಪ್ರತೀದಿನ ಬೆಳಿಗ್ಗೆ ಚಂಡಿಕಾಯಾಗ, ಮಧ್ಯಾಹ್ನ ಅನ್ನ ಸಂತರ್ಪಣೆ, ರಾತ್ರಿ ಹೂವಿನ ಪೂಜೆ, ಕಲ್ಪೋಕ್ತಪೂಜೆ, ಅ.2ರಿಂದ 10ರ ವರೆಗೆ ವಾಹನೋತ್ಸವ, ಅ.9ರಂದು ದುರ್ಗಾಷ್ಠಮಿ, ಮಹಾಚಂಡಿಕಾಯಾಗ, ಮಹಾ ಅನ್ನ ಸಂತರ್ಪಣೆ, ಅ.10ರಂದು ಮಹಾನವಮಿ, ಅ.11ರಂದು ವಿಜಯದಶಮಿ, ನವಾನ್ನ ಸಮರ್ಪಣೆ, ಶಮೀಪೂಜೆ, ಶಾರದಾ ವಿಸರ್ಜನೆ, ಉತ್ಸವ, ಕನ್ನಿಕಾಪೂಜೆ ಇತ್ಯಾದಿಗಳು ನಡೆದುವು.

ನವರಾತ್ರಿ ಮಹೋತ್ಸವದ ಸಂದರ್ಭದಲ್ಲಿ ಉಡುಪಿ ಜಿಲ್ಲಾಧಿಕಾರಿಗಳು, ಅಪರ ಜಿಲ್ಲಾಧಿಕಾರಿಗಳು, ನಗರಸಭಾ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಕಳ ಎಎನ್ಎಫ್ ಡಿವೈಎಸ್ಪಿ ಹೀಗೆ ಅನೇಕ ಮಂದಿ ಗಣ್ಯರು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ದೇವಿಯ ಪ್ರಸಾದ ಸ್ವೀಕರಿಸಿದರು.

ಪ್ರತೀದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಅ.2ರಂದು ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ರಾಘವೇಂದ್ರ ಉಪಾಧ್ಯ ಅವರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿದರು. ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ಉಡುಪಿ ನಗರಸಭೆಯ ಮ್ಯಾನೇಜರ್ ವೆಂಕಟರಮಣಯ್ಯ, ಕರ್ನಾಟಕ ರಾಜ್ಯ ಮುಜುರಾಯಿ ದೇವಾಲಯಗಳ ಅರ್ಚಕರ ಸಂಘದ ರಾಜ್ಯ ಸಮಿತಿ ನಿರ್ದೇಶಕರೂ, ಜಿಲ್ಲಾಧ್ಯಕ್ಷರೂ ಆದ ಕೆ.ಎಸ್.ಉಪಾಧ್ಯ, ಸ್ಥಳೀಯ ನಗರಸಭಾ ಸದಸ್ಯೆ ಶ್ರೀಮತಿ ಗೀತಾ ಶೇಟ್ ಹಾಗೂ ಭರತನಾಟ್ಯ ಗುರು ರಾಮಕೃಷ್ಣ ಕೊಡಂಚ ಇವರು ಉಪಸ್ಥಿತರಿದ್ದರು.

udghatane

ಅ.2ರಂದು ಸಂಜೆ ಸಭಾ ಕಾರ್ಯಕ್ರಮದ ಬಳಿಕ ನೃತ್ಯ ಗುರು ರಾಮಕೃಷ್ಣ ಕೊಡಂಚ ಇವರ ಶಿಷ್ಯರಾದ ಮ್ಯೂಸಿಕ್ ಆಂಡ್ ಫೈನ್ ಆರ್ಟ್ಸ್ ಮುಕುಂದಕೃಪಾ ಇಲ್ಲಿನ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಮುಜರಾಯಿ ದೇವಾಲಯಗಳ ಅರ್ಚಕರ ಸಂಘ ಮತ್ತು ಶ್ರೀ ಕ್ಷೇತ್ರ ಕಡಿಯಾಳಿ ಹಿತರಕ್ಷಣಾ ಸಮಿತಿ ಪರವಾಗಿ ಕೆ.ಎಸ್.ಉಪಾಧ್ಯ ಅವರು ಈ ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು.

kodancha

ಅ.3ರಂದು ಮಲ್ಪೆಯ ಶ್ರೀಮತಿ ಶಶಿಕಲಾ ರಮೇಶ್ ಸಂಚಾಲಕತ್ವದ ‘ಯಕ್ಷ ಮಹಿಳೆಯರು’ ಸಂಸ್ಥೆಯ ಸದಸ್ಯೆಯರಿಂದ ‘ಭಕ್ತ ಪ್ರಹ್ಲಾದ’ ಪೌರಾಣಿಕ ನಾಟಕ ಪ್ರದರ್ಶನಗೊಂಡಿತು.

nataka-1

ಅ.4ರಂದು ಮಣಿಪಾಲದ ವಿಪಂಚಿ ಬಳಗದ ಶ್ರೀಮತಿ ಪವನ ಬಿ. ಆಚಾರ್ಯ, ಗ್ರೀನ್ ರೆಮಿಡೀಸ್ ನಿರ್ದೇಶಕಿ ಸುಮಂಗಲಾ ಹೆಬ್ಬಾರ್ ಹಾಗೂ ಜಯಲಕ್ಷ್ಮೀ ಭಟ್ ಸಾಣೂರು ಇವರಿಂದ ವೀಣಾ ವಾದನ ಕಾರ್ಯಕ್ರಮ ನಡೆಯಿತು. ಇವರಿಗೆ ತಬಲಾದಲ್ಲಿ ಡಾ.ಬಾಲಚಂದ್ರ ಆಚಾರ್ಯ ಹಾಗೂ ಕೀಬೋರ್ಡ್ ನಲ್ಲಿ  ತಾಳದಲ್ಲಿ ಕು.ಜಾಹ್ನವಿ ಸಹಕರಿಸಿದ್ದರು.

pavana

ವೀಣಾವಾದನ ಕಾರ್ಯಕ್ರಮದ ಬಳಿಕ ಹಿಂದೂಸ್ಥಾನಿ ಗಾಯಕಿ, ಉಡುಪಿ ತೆಂಕನಿಡಿಯೂರು ಹೈಸ್ಕೂಲಿನ ಸಂಗೀತ ಶಿಕ್ಷಕಿ ಎಸ್.ಎಂ.ಮೀನಾಕ್ಷಿ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ತಬಲಾದಲ್ಲಿ ಮಧ್ವೇಶ್ ಉಡುಪಿ ಹಾಗೂ ಕೀಬೋರ್ಡ್ ನಲ್ಲಿ ರಾಜಾರಾಂ ಭಕ್ತ ಉಡುಪಿ ಇವರು ಸಹಕರಿಸಿದ್ದರು.

minakshi

ಅ.5ರಂದು ಮೈಸೂರಿನ ಕೆ.ಸಂದೇಶ್ ಭಾರ್ಗವ್ ಸ್ಥಾಪಿಸಿದ ಕಲಾ ಸಂದೇಶ ಪ್ರತಿಷ್ಠಾನದ ಕುಮಾರಿ ಪೂಜಾದೇವ್, ಕು.ರಿಚಿ ದೇವ್ ಹಾಗೂ ಬಳಗದವರಿಂದ ನೃತ್ಯ ವೈಭವ ನಡೆಯಿತು.

poojadev

ಅ.6ರಂದು ಕರಂಬಳ್ಳಿಯ ಶ್ರೀ ಸುಬ್ರಹ್ಮಣ್ಯ ಯಕ್ಷಗಾನ ಕಲಾ ಮಂಡಳಿಯವರಿಂದ ದಾಮೋದರ ಭಟ್ ಇವರ ನೇತೃತ್ವದಲ್ಲಿ ‘ಸುದರ್ಶನ ವಿಜಯ’ ಯಕ್ಷಗಾನ ಬಯಲಾಟ ಜರುಗಿತು.

yakshagana

ಅ.7ರಂದು ನಿನಾದ ಮ್ಯೂಸಿಕ್ ಅಕಾಡೆಮಿಯ ಗುರು ಜಿ.ರವಿಕುಮಾರ್, ಶಿಷ್ಯರಾದ ಎಂಜಿಎಂ ಕಾಲೇಜು ವಿದ್ಯಾರ್ಥಿನಿ ಐಶ್ವರ್ಯ ಹಾಗೂ ಎಂಐಟಿ ವಿದ್ಯಾರ್ಥಿ ಶ್ರೇಷ್ಠ ಇವರಿಂದ ವಯೋಲಿನ್ ವಾದನ ಕಾರ್ಯಕ್ರಮ ನಡೆಯಿತು. ಇವರಿಗೆ ತಬಲಾದಲ್ಲಿ ಪ್ರಜ್ವಲ್ ಬನ್ನಂಜೆ ಹಾಗೂ ರಿದಂ ಪ್ಯಾಡ್ ನಲ್ಲಿ ಸುರೇಶ್ ಸಂತೆಕಟ್ಟೆ ಇವರು ಸಹಕರಿಸಿದ್ದರು.

ravikumar

ವಯೋಲಿನ್ ವಾದನ ಕಾರ್ಯಕ್ರಮದ ಬಳಿಕ ಶ್ರೀಮತಿ ಜಯ ತಂತ್ರಿ ಇವರ ದರ್ಪಣ ಸ್ಕೂಲ್ ಆಫ್ ಆರ್ಟ್ಸ್ ಸಂಸ್ಥೆಯ ವಿದ್ಯಾರ್ಥಿನಿಯರಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.  ಅ.8ರಂದು ಕಡಿಯಾಳಿ ಶ್ರೀ ಮಹಿಷಮರ್ದಿನೀ ಅಂಗನವಾಡಿಯ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ಕು. ಶ್ರೀರಕ್ಷಾ ಆಚಾರ್ಯ ಪಾಡಿಗಾರ್ ಇವರ ಶಾಸ್ತ್ರೀಯ ಸಂಗೀತ ಕಾರ್ಯಕ್ರಮದ ರಂಗ ಪ್ರವೇಶ ನಡೆಯಿತು. ಇವರಿಗೆ ವಯೋಲಿನ್ ನಲ್ಲಿ ಇವರ ತಂದೆ ಪಾಡಿಗಾರು ಶ್ರೀಧರ ಆಚಾರ್ಯ ಹಾಗೂ ಮೃದಂಗದಲ್ಲಿ ಡಾ.ಬಾಲಚಂದ್ರ ಹೆಬ್ಬಾರ್ ಇವರು ಸಹಕರಿಸಿದ್ದರು.

sriraksha-padigar

ಅ.9ರಂದು ಮೊದಲಿಗೆ ಶಿವಮೊಗ್ಗದ ಬಿ.ಎನ್.ರಾಮು ಹಾಗೂ ತಮಿಳುನಾಡು ಧರ್ಮಪುರಿಯ ಆರ್.ರತ್ನವೇಲು ಇವರಿಂದ ನಾದಸ್ವರ ವಾದನ ಕಾರ್ಯಕ್ರಮ ನಡೆಯಿತು. ಇವರಿಗೆ ಡೋಲಿನಲ್ಲಿ ಭದ್ರಾವತಿಯ ಪಿ.ಚಂದ್ರಶೇಖರ್ ಇವರು ಸಹಕಿರಿಸದ್ದರು.

shivamogga-ramu

ಬಳಿಕ ಹಿರಿಯಡ್ಕದ ಚಂದ್ರಶೇಖರ್ ಶೇರಿಗಾರ್, ಶ್ರೀಮತಿ ಲತಾ ಚಂದ್ರಶೇಖರ್ ಹಾಗೂ ರೂಪೇಶ್ ಇವರಿಂದ ಸ್ಯಾಕ್ಸೋಫೋನ್ ವಾದನ ಕಾರ್ಯಕ್ರಮ ನಡೆಯಿತು. ಇವರಿಗೆ ಡೋಲಿನಲ್ಲಿ ಉದಯ ಕುಮಾರ್ ಪೆರ್ಡೂರು ಹಾಗೂ ತಾಳದಲ್ಲಿ ಚಂದ್ರಹಾಸ ಹಿರಿಯಡ್ಕ ಇವರು ಸಹಕರಿಸಿದ್ದರು.

chandrashekhar

ಸ್ಯಾಕ್ಸೋಫೋನ್ ಕಾರ್ಯಕ್ರಮದ ನಂತರ ಮಂಗಳೂರಿನ ಅಂಧ ಸಂಗೀತ ಶಿಕ್ಷಕಿ ಕು. ಕಸ್ತೂರಿ ಕಾಮತ್ ಬಿಕರ್ನಕಟ್ಟೆ ಇವರಿಂದ ಭಕ್ತಿ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ಕೀಬೋರ್ಡ್ ನಲ್ಲಿ ದೇವರಾಜ ಆರ್ಯ, ತಬಲಾದಲ್ಲಿ ಶ್ರೀಕಾಂತ್ ನಾಯಕ್, ಕೊಳಲಿನಲ್ಲಿ ವರುಣ್ ರಾವ್ ಹಾಗೂ ರಿದಂ ಪ್ಯಾಡ್ ನಲ್ಲಿ ಉದಯ ಕುಮಾರ್ ಇವರು ಸಹಕರಿಸಿದ್ದರು.

kasturi

ಅ.10ರಂದು ‘ಸಂಗೀತ ಜಾಹ್ನವಿ ಸುಗಮ ಸಂಗೀತ ತಂಡ’ದ ಎಸ್.ಜನಾರ್ದನ್ ದೊಡ್ಡಣಗುಡ್ಡೆ ಹಾಗೂ ಕು.ಸುದೇಷ್ಣ ಪರ್ಕಳ ಇವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು. ಇವರಿಗೆ ಕೀ ಬೋರ್ಡ್ ನಲ್ಲಿ ಅರುಣ್ ಹಾವಂಜೆ ಹಾಗೂ ತಬಲಾದಲ್ಲಿ ಶಶಿಕಿರಣ್ ಮಣಿಪಾಲ್ ಇವರು ಸಹಕರಿಸಿದ್ದರು.

s-janardan

ಅ.11ರಂದು ಮಂಜರಿ ಚಂದ್ರ ಹಾಗೂ ‘ಸೃಷ್ಠಿ ಕಲಾ ಕುಟೀರ’ದ ವಿದ್ಯಾರ್ಥಿನಿಯರಿಂದ ನೃತ್ಯ ವೈಭವ, ಹಾಗೂ ಬಳಿಕ ಯು. ನಾಗರಾಜ ಶೇಟ್ ಹಾಗೂ ಶ್ರೀಮತಿ ಸ್ವಪ್ನ ಉಡುಪಿ ಇವರಿಂದ ಭಕ್ತಿ ಲಹರಿ ಕಾರ್ಯಕ್ರಮಗಳು ನಡೆದುವು. ಭಕ್ತಿಲಹರಿ ಕಾರ್ಯಕ್ರಮಕ್ಕೆ ತಬಲಾದಲ್ಲಿ ನಾಗೇಶ್ ಪಲಿಮಾರು ಹಾಗೂ ಕೀಬೋರ್ಡ್ ನಲ್ಲಿ ಮಧು ಕಾಪು ಇವರು ಸಹಕರಿಸಿದ್ದರು.

nagaraj-shet

Leave a Reply

Your email address will not be published. Required fields are marked *