Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ಬೆಳ್ಳೆ ಗ್ರಾ.ಪಂ.ನಲ್ಲಿ ಹೆಣ ಸುಡಲೂ ರಾಜಕೀಯ: ಕ್ಷುಲ್ಲಕ ಕಾರಣಕ್ಕೆ ಕಟ್ಟಿಂಗೇರಿ ಹಿಂದೂ ರುದ್ರಭೂಮಿ ಅಭಿವೃದ್ಧಿಗೆ ವಿರೋಧ !

* ರಸ್ತೆ, ನೀರು, ವಿವಿಧ ಸವಲತ್ತುಗಳಿಗೆ ಮೀಸಲಿದ್ದ ರಾಜಕೀಯ ಹೆಣ ಸುಡುವಲ್ಲಿಗೂ ಬಂದು ತಲುಪಿ ವ್ಯವಸ್ಥೆಯ ಬಗ್ಗೆ ನಾಚಿಕೆಪಟ್ಟುಕೊಳ್ಳಬೇಕಾದ ಶೋಚನೀಯ ಪರಿಸ್ಥಿತಿ ಉಡುಪಿ ತಾಲೂಕಿನ ಬೆಳ್ಳೆ ಗ್ರಾಪಂನಲ್ಲಿ ಸೃಷ್ಟಿಯಾಗಿದೆ. 2000-01ನೇ ಸಾಲಿನಲ್ಲಿ ಸಹಾಯಕ ಕಮಿಷನರ್‍, ಕುಂದಾಪುರ ಅವರು ಸದರಿ ಗ್ರಾಮ ಪಂಚಾಯತ್‍ನ ಕಟ್ಟಿಂಗೇರಿ ಗ್ರಾಮದ ಸರ್ವೆ ಸಂಖ್ಯೆ 171/1ಸಿಯಲ್ಲಿ ಹಿಂದೂ ರುದ್ರಭೂಮಿ ರಚಿಸುವ ಸಂಬಂಧ ಒಟ್ಟು 2.18 ಎಕರೆ ಜನವಸತಿ ಇಲ್ಲದ ಸರಕಾರಿ ಪ್ರದೇಶದಲ್ಲಿ 20 ಸೆಂಟ್ಸ್ ಸ್ಥಳವನ್ನು ಮೀಸಲಿರಿಸಿ ಆದೇಶಿಸಿದ್ದರು. ಈ ಸಂಬಂಧ ಅಧಿಕೃತ ಪ್ರಕಟನೆ ಹೊರಡಿಸಲಾಗಿತ್ತು. ಈ ವೇಳೆ ಯಾರೂ ಆಕ್ಷೇಪ ಸಲ್ಲಿಸಿರುವುದು ದಾಖಲಾಗಿರುವುದಿಲ್ಲ. ಈ ಬಳಿಕ ಸದ್ರಿ ಸ್ಥಳದಲ್ಲಿ ಗಡಿ ಗುರುತು ಮಾಡಲಾಗಿತ್ತು. ಸದ್ರಿ ಸ್ಥಳ ರುದ್ರಭೂಮಿಯೆಂದೇ ಗುರುತಿಸಲಾಗುತ್ತಿತ್ತಲ್ಲದೆ ಸ್ಥಳ ಪಂಚಾಯತ್‍ ಸ್ವಾಧೀನದಲ್ಲಿತ್ತು.

ಹೈಕೋರ್ಟ್ ನಿಂದ  ರುದ್ರಭೂಮಿಗೆ ಹಸಿರು ನಿಶಾನೆ

karnataka-high-courtrmrj

2007-08ರಲ್ಲಿ ಗ್ರಾ.ಪಂ. ರುದ್ರಭೂಮಿಯನ್ನು ಅಭಿವೃದ್ಧಿ ಮಾಡುವರೆ ನಿರ್ಣಯಿಸಿತು. ಈ ವೇಳೆ ಆರಂಭದಲ್ಲಿ ಯಾವುದೇ ಆಕ್ಷೇಪ ಸಲ್ಲಿಸದ ಕೆಲವರು  ಕೆಲವೊಂದು ರಾಜಕೀಯ ಹಿತಾಸಕ್ತಿಗಳ ಪ್ರೇರಣೆಯಿಂದಾಗಿ ಮತ್ತು ಸಮೀಪದ ಭೂ ಮಾಲಕರು ತಮ್ಮ ಭೂಮಿಯನ್ನು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ನೀಡಿದ ಕುಮ್ಮಕ್ಕಿನಿಂದಾಗಿ ರುದ್ರ ಭೂಮಿ ಅಭಿವೃದ್ಧಿ ಮಾಡದಂತೆ ತಡೆ ಕೋರಿ 2008ರಲ್ಲಿ ಹೈಕೋರ್ಟ್ ಗೆ ರಿಟ್‍ ಅರ್ಜಿ ದಾಖಲಿಸಿದರು. ಈ ಅರ್ಜಿಯನ್ನು ನ್ಯಾ| ರಾಮ್‍ ಮೋಹನ್‍ ರೆಡ್ಡಿ ಅವರು ಸಾರಾಸಗಟಾಗಿ ತಿರಸ್ಕರಿಸಿ ಅರ್ಜಿದಾರರು ಆಕ್ಷೇಪ ಸಲ್ಲಿಸಲು ಯಾವುದೇ ಹಕ್ಕಿಲ್ಲ ಎಂದು ತೀರ್ಪಿತ್ತರು. ಇದರಿಂದ ರುದ್ರಭೂಮಿ ಅಭಿವೃದ್ಧಿಗೆ ಹಸಿರು ನಿಶಾನೆ ದೊರೆತಂತಾಯಿತು.

ಈ ಬಳಿಕ ಗ್ರಾಪಂ  ನ್ಯಾಯಾಲಯದ ಆದೇಶದ ಉಲ್ಲೇಖದೊಂದಿಗೆ ಸದ್ರಿ ರುದ್ರಭೂಮಿಯನ್ನು ಸ್ವಂತ ಖರ್ಷಿನಲ್ಲಿ ಅಭಿವೃದ್ಧಿಪಡಿಸುವರೆ  ಸ್ವಯಂಪ್ರೇರಿತವಾಗಿ ಪ್ರಸ್ತಾವನೆ ಸಲ್ಲಿಸಿದ ಹಿಂದೂ ರುದ್ರಭೂಮಿ ಸಮಿತಿಗೆ ಹಸ್ತಾಂತರಿಸಿ, ಅಭಿವೃದ್ಧಿಗೆ ಅಧಿಕೃತ ಅನುಮತಿ ನೀಡಿತು. ಸಮಿತಿಯು ಈ ಬಗ್ಗೆ 2 ಸಿಲಿಕಾನ್‍ ಚೇಂಬರ್‍ ಮತ್ತು ಅಗತ್ಯ ಕಚ್ಚಾ ಸಾಮಗ್ರಿಗಳಾದ ಸಿಮೆಂಟ್‍, ಕಬ್ಬಿಣ, ತಗಡು ಶೀಟುಗಳನ್ನು ದೇಣಿಗೆ ಮೂಲಕ ಸಂಗ್ರಹಿಸಿದ ಹಣದಲ್ಲಿ ಹೊಂದಿಸಿಕೊಂಡು ಅ. 11ರಂದು ವಿಜಯದಶಮಿ ಸಂದರ್ಭ ಸದ್ರಿ ಸ್ಥಳದಲ್ಲಿ ರುದ್ರಭೂಮಿ ಅಭಿವೃದ್ಧಿಗೆ ಶಿಲಾನ್ಯಾಸ ನೆರವೇರಿಸಲಾಯಿತು.

ಸಂಬಂಧ ಇಲ್ಲದವರಿಂದ ಆಕ್ಷೇಪ: ರಾಜಕೀಯ ದುಷ್ಪ್ರೇರಣೆ

ಇದಾದ ಬಳಿಕ ಸಮಿತಿಯು ಅ. 15ರಂದು ಸ್ಥಳದಲ್ಲಿ ಶುಚಿತ್ವ ಕಾರ್ಯ ಹಮ್ಮಿಕೊಂಡಿತ್ತು. ಆ ಸಂದ‍ರ್ಭ ಈ ವರೆಗೆ ಪ್ರಕರಣದ ಚಿತ್ರಣದಲ್ಲೇ ಇಲ್ಲದ ಭಿನ್ನ ಕೊಮಿನ ಕೆಲವೊಂದು ಮಹಿಳೆಯರು ಕೈಯಲ್ಲಿ ಕೋಲನ್ನು ಹಿಡಿದು ಶ್ರಮದಾನ ಮಾಡುತ್ತಿದ್ದವರನ್ನು ತಡೆಯಲು ಯತ್ನಿಸಿದರು. ಈ ವೇಳೆ ಸ್ವಲ್ಪಮಟ್ಟಿನ ವಾಗ್ವಾದ ನಡೆಯಿತು. ಸಮಿತಿ ದಾಖಲೆ ತೋರಿಸಿದರೂ ಮಹಿಳೆಯರು ಕಿವಿಗೆ ಹಾಕಿಕೊಳ್ಳದೆ ಅವರದ್ದೇ ವಾದ ಮಾಡುತ್ತಿದ್ದರು. ಈ ದೃಶ್ಯಗಳು ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡಿದವು. ಸಂಬಂಧ ಇಲ್ಲದವರು ನ್ಯಾಯಾಲಯದ ತೀರ್ಪಿದ್ದರೂ ಕ್ಷುಲ್ಲಕ ಕಾರಣಕ್ಕಾಗಿ ರಾಜಕೀಯ ದುಷ್ಪ್ರೇರಣೆಯಿಂದ ಆಕ್ಷೇಪಿಸುತ್ತಿರುವುದು ಸಾರ್ವಜನಿಕವಾಗಿ ಬಹಿರಂಗವಾಯಿತು. ಸದ್ರಿ ಆಕ್ಷೇಪ ವ್ಯಕ್ತಪಡಿಸುವವರು ತಮ್ಮ ಸಮುದಾಯಕ್ಕೆ ಬೆಳ್ಳೆ ಪೇಟೆಯ ಹೃದಯ ಭಾಗದಲ್ಲಿ ಶಾಲೆಯ ಬಳಿಯೇ ಶ್ಮಶಾನ ಇರುವುದನ್ನು ಮರೆತು ವಾದಿಸುವಂತಿತ್ತು.

belle-grama-panchayath-office

ಹೊಲಸು ರಾಜಕೀಯ; ನಿಲುವು ಸ್ಪಷ್ಟಪಡಿಸಲಿ

ಸ್ಥಳೀಯರ ಯಾವುದೇ ವಿರೋಧವಿಲ್ಲದಿದ್ದರೂ ಪೇಟೆಯಿಂದ ಕೆಲವೊಂದು ಮಂದಿ ಬಂದು ರುದ್ರಭೂಮಿ ಅಭಿವೃದ್ಧಿಗೆ ತಡೆ ಒಡ್ಡುವುದರ ಹಿಂದೆ ಪ್ರಬಲ ರಾಜಕೀಯ ದುಷ್ಪ್ರೇರಣೆ, ವೋಟ್‍ ಬ್ಯಾಂಕ್ ರಾಜಕೀಯ, ಸಮುದಾಯವೊಂದನ್ನು ಓಲೈಸುವ ಕುತಂತ್ರ ಅಡಗಿದ್ದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಮನುಷ್ಯ ಹುಟ್ಟಿದಂತೆ ಸಾಯುವುದು ಸಹಜ. ಹಾಗಾಗಿ ರುದ್ರಭೂಮಿ ಮೂಲ ಆವಶ್ಯಕತೆ. ಗ್ರಾಮಕ್ಕೊಂದು ರುದ್ರಭೂಮಿ ಇರಬೇಕು ಎಂಬುದು ಸುಪ್ರೀಂ ಕೋರ್ಟ್ ನಿರ್ದೇಶ ಕೂಡ. ರುದ್ರಭೂಮಿ ವಿಷಯವನ್ನು ಗ್ರಾಪಂ ಆಡಳಿತ ಪಕ್ಷ ವಾಸ್ತವವನ್ನು ಮರೆಮಾಚಿ ಕೆಲವರಿಗೆ ಅಥವಾ ನಿರ್ದಿಷ್ಟ ಸಮುದಾಯವನ್ನು ತೃಪ್ತಿಪಡಿಸುವುದಕ್ಕಾಗಿ ಬಳಸಿ, ವ್ಯಥಾ ಆಕ್ಷೇಪಿಸುತ್ತಿದೆ ಎಂದು ಕಂಡು ಬರುತ್ತಿದೆ. ಈ ಬಗ್ಗೆ ಗ್ರಾಪಂ ಸ್ಪಷ್ಟನೆ ನೀಡಬೇಕಿದೆ. ಈ ಬಗ್ಗೆ ಸಮಿತಿಯು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಅವರು ಈ ಬಗ್ಗೆ ಪರಿಶೀಲನೆ ನಡೆಸಲಿ. ಶಾಸಕ ಸೊರಕೆಯವರು ಸ್ಥಳವನ್ನು ಪರಿಶೀಲಿಸಿದ್ದು ಪ್ರಾಮಾಣಿಕವಾಗಿ ಪ್ರತಿಕ್ರಿಯಿಸಲಿ.

ಹೆಣ ಸುಡುವುದಕ್ಕೂ ರಾಜಕೀಯ ಮಾಡಿ ಕೀಳು ಮನಸ್ಥಿತಿ ಪ್ರದರ್ಶಿಸುವುದನ್ನು ಬಿಟ್ಟು ನ್ಯಾಯಯುತವಾಗಿ ಕೋರ್ಟ್ ಆದೇಶಕ್ಕೆ ಆಡಳಿತ ತಲೆ ಬಾಗಬೇಕಿದೆ. ಪ್ರಾಮಾಣಿಕರೆಂದೇ ಗುರುತಿಸಿಕೊಂಡಿರುವ ಅಧ್ಯಕ್ಷೆ ರಂಜನಿ ಹೆಗ್ಡೆ ಅವರು ಅಧಿಕಾರದ ಬಗ್ಗೆ ಚಿಂತಿಸದೆ, ರುದ್ರಭೂಮಿ ಸಂಬಂಧ ಹಿಂದಿನ ಪಂ. ನಿರ್ಣಯದಲ್ಲಿ ತಾನೂ ಇದ್ದೆ ಎಂಬುದನ್ನು ನೆನಪಿಸಿಕೊಂಡು, ಆತ್ಮಸಾಕ್ಷಿಗೆ ಬೆಲೆಕೊಟ್ಟು ಪ್ರಾಮಾಣಿಕತೆಯನ್ನು ಸಾಬೀತುಪಡಿಸಲಿ.

mar0816-news-ranjani17

Leave a Reply

Your email address will not be published. Required fields are marked *