Realtime blog statisticsweb statistics
udupibits.in
Breaking News
ಉಡುಪಿ: ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಕಾಪು ತಾಲೂಕಿಗೆ ಸೇರಿಸಿದ್ದು ಖಂಡನೀಯ, ಉಡುಪಿ ತಾಲೂಕಿಗೆ ಸೇರಿಸುವುದು ಮಾತ್ರ ಸರಿಯಾದ ಕ್ರಮ- ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಅಶ್ವಿನ್ ಲಾರೆನ್ಸ್, ಶ್ರೀರಾಮ ದಿವಾಣ ಜಂಟೀ ಹೇಳಿಕೆ.

ನ.13: ಡಾ.ವಿರೂಪಾಕ್ಷ ದೇವರಮನೆಯವರ ‘ಮಕ್ಕಳತ್ರ ಮಾತಾಡಿ ಪ್ಲೀಸ್’ ಪುಸ್ತಕ ಬಿಡುಗಡೆ

ಉಡುಪಿ: ಸಾವಣ್ಣ ಪ್ರಕಾಶನ ಪ್ರಕಟಿಸಿದ ಡಾ. ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ ಬರೆದ “ಮಕ್ಕಳತ್ರ ಮಾತಾಡಿ ಪ್ಲೀಸ್” ಪುಸ್ತಕದ ಬಿಡುಗಡೆ ಸಮಾರಂಭ, ನವೆಂಬರ್ 13 ಆದಿತ್ಯವಾರ ಸಂಜೆ 5 ಗಂಟೆಗೆ ಉಡುಪಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಜರುಗಲಿದೆ.

ಮುಂಬಯಿಯ ಅಟಾಮಿಕ್ ಎನರ್ಜಿ ಜೂನಿಯರ್ ಕಾಲೇಜಿನ ಪ್ರಾಂಶುಪಾಲರಾದ ರಾಮಚಂದರ್ ಗೌಡ, ಪತ್ರಕರ್ತೆ ಸಂಧ್ಯಾ ಎಸ್.ಪೈ,  ಡಾ. ಎ.ವಿ.ಬಾಳಿಗಾ ಸಮೂಹ ಸಂಸ್ಥೆಗಳ ನಿರ್ದೇಶಕರೂ, ಖ್ಯಾತ ಮನೋವೈದ್ಯರೂ ಆದ ಡಾ. ಪಿ.ವಿ.ಭಂಡಾರಿ ಹಾಗೂ ಸಾವಣ್ಣ ಪ್ರಕಾಶನದ ಜಮೀಲ್‍ ಅವರು ಸಮಾರಂಭದಲ್ಲಿ ಮುಖ್ಯ ಅಥಿತಿಗಳಾಗಿ ಭಗವಹಿಸಲಿದ್ದಾರೆ.

ಇದೇ ಸಂದರ್ಭದಲ್ಲಿ ‘ಸಿದ್ಧ’ ವೀಡಿಯೊ ಬಿಡುಗಡೆ ಮತ್ತು ಕಿರು ಪ್ರಹಸನ ಪ್ರದರ್ಶನವನ್ನು ಆಯೋಜಿಸಲಾಗಿದೆ.

 

Leave a Reply

Your email address will not be published. Required fields are marked *