Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಮಹಾಮಂತ್ರ: ಗಾಯತ್ರಿ ಮಹಿಮೆ, ಓಂಕಾರದ ಶಕ್ತಿ ತಿಳಿಯಪಡಿಸುವ ಗ್ರಂಥ

* ಮಹಾಮಂತ್ರ 

ಹಿಂದಿ ಮೂಲ: ಮಹಾಮಹೋಪಾಧ್ಯಾಯ ಆಚಾರ್ಯ ‘ನವನೀತ’
ಕನ್ನಡಾನುವಾದ: ರಾಜಗೋಪಾಲ ಎಂ.,
ಪ್ರಕಾಶಕರು: ಗಾಯತ್ರಿ ಧ್ಯಾನ ಮಂದಿರ, ಹಿರಿಯಡ್ಕ- 576113,
ಉಡುಪಿ ತಾಲೂಕು ಮತ್ತು ಜಿಲ್ಲೆ,
ಮೊಬೈಲ್: 9448296784.

# ಹಿರಿಯಡ್ಕದಲ್ಲಿರುವ ತಮ್ಮ ಮನೆ ಪರಿಸರದಲ್ಲಿ ಗಾಯತ್ರಿ ಧ್ಯಾನ ಮಂದಿರವನ್ನು ಪ್ರತಿಷ್ಠಾಪಿಸಿ ಗಾಯತ್ರಿ ಉಪಾಸನೆ ಮಾಡುತ್ತಿರುವ ರಾಜಗೋಪಾಲ್ ಎಂ. ಅವರು ಜೀವ ವಿಮಾ ನಿಗಮದ ನಿವೃತ್ತ ಉದ್ಯೋಗಿ. ಹಿಮಾಲಯ, ತಪೋವನ, ಗೋಮುಖ ಗ್ಲೇಸಿಯರ್, ಬದರಿ ಇತ್ಯಾದಿ ಸ್ಥಳಗಳಿಗೆ ಯಾತ್ರೆ ಮಾಡುತ್ತಾ ಸರಳ ಅಧ್ಯಾತ್ಮ ಜೀವನ ನಡೆಸುತ್ತಿರುವ ರಾಜಗೋಪಾಲ್ ರವರು ಕನ್ನಡಕ್ಕೆ ಅನುವಾದಿಸಿ ಪ್ರಕಟಿಸಿದ ಕೃತಿಯೇ ‘ಮಹಾಮಂತ್ರ’. ಇದರ ಮೂಲ ಕೃತಿಕಾರರು ಮಹಾಮಹೋಪಾಧ್ಯಾಯ ಆಚಾರ್ಯ ‘ನವನೀತ’.

ಸೃಷ್ಠಿಯ ಆದಿ ಮಂತ್ರವಾದ ಗಾಯತ್ರಿ ಮಂತ್ರದ ಮಹಿಮೆ, ‘ಓಂ’ ಕಾರದ ಶಕ್ತಿ, ಇವುಗಳ ಉಪಾಸನೆ, ಧ್ಯಾನದಿಂದಾಗುವ ಲಾಭಗಳ ಬಗ್ಗೆ ಈ ಕೃತಿಯಲ್ಲಿ ಬಹಳಷ್ಟು ಅತ್ಯುಪಯುಕ್ತ ಮಾಹಿತಿಗಳನ್ನು ಸರಳವಾಗಿ ಮನಮುಟ್ಟುವಂತೆ ವಿವರಿಸಲಾಗಿದೆ. ಪರಮಾತ್ಮನ ವಿಶೇಷ ಸೃಷ್ಠಿಯಾದ ಮನುಷ್ಯ ಓಂ ಮತ್ತು ಗಾಯತ್ರಿಯನ್ನು ಉಪಾಸನೆ, ಧ್ಯಾನ ಮಾಡುವ ಮೂಲಕ ತನ್ನ ಇಹ ಮತ್ತು ಪರಲೋಕಗಳ ಬದುಕನ್ನು ಹೇಗೆ ಸಾರ್ಥಕಗೊಳಿಸಿಕೊಳ್ಳಬಹುದು ಎಂಬುದನ್ನು ಈ ಕೃತಿಯಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ.

ಗಾಯತ್ರಿ ಮಹಾಮಂತ್ರದ ಅಕ್ಷಕರ್ಷರಗಳನ್ನೂ ಇಲ್ಲಿ ವ್ಯಾಖ್ಯಾನಿಸಲಾಗಿದೆ. ವೇದಗಳು, ವಿವಿಧ ಉಪನಿಷತ್ತು, ಸ್ಮೃತಿ, ಭಾಗವತ, ಬ್ರಾಹ್ಮಣ, ರಾಮಾಯಣ, ಮಹಾಭಾರತ, ಇತ್ಯಾದಿ ಗ್ರಂಥಗಳಲ್ಲಿ ಗಾಯತ್ರಿ ಮಹಾಮಂತ್ರವನ್ನು ಕೊಂಡಾಡಿರುವ ಬಗ್ಗೆ ಇಲ್ಲಿ ವಿವರವಾಗಿ ನೀಡಲಾಗಿದೆ. ಗಾಯತ್ರಿ ಮತ್ತು ಓಂಕಾರದ ಉಪಾಸನೆ ಮಾಡುವ ಕ್ರಮವನ್ನೂ ಕೃತಿಯಲ್ಲಿ ಕೊಡಲಾಗಿದೆ. ಪ್ರತಿಯೊಬ್ಬರೂ ಓದಲೇಬೇಕಾದ ಮತ್ತು ಓದಿ ಆಚರಿಸಬಹುದಾದ, ಆಚರಿಸಬೇಕಾದ ಒಂದು ಅತ್ಯುತ್ತಮ ಗ್ರಂಥವನ್ನು ಅಧ್ಯಾತ್ಮಿಕ ಲೋಕಕ್ಕೆ ನೀಡಿದ ಗಾಯತ್ರಿ ಧ್ಯಾನ ಮಂದಿರದ ರಾಜಗೋಪಾಲ್ ಎಂ. ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸಬೇಕು.

Leave a Reply

Your email address will not be published. Required fields are marked *