Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ಕೆರೆ ಸಹಿತ ಸರಕಾರಿ ಭೂಮಿ ಒತ್ತುವರಿ: ಮಹಿಳೆ ವಿರುದ್ಧ ದೂರು

ಉಡುಪಿ: ಉಡುಪಿ ತಾಲೂಕು ಕಟ್ಟಿಂಗೇರಿ ಗ್ರಾಮದ ಶಾಂತಿಗುರಿಯಲ್ಲಿ ವಾಸವಾಗಿರುವ ಶ್ರೀಮತಿ ಪ್ರೆಸಿಲ್ಲಾ ಮೋನಿಸ್ ಎಂಬವರು ಸರಕಾರಿ ಭೂಮಿಯಲ್ಲಿದ್ದ ಕೆರೆಯನ್ನು ಒತ್ತುವರಿ ಮಾಡಿಕೊಂಡ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕಟ್ಟಿಂಗೇರಿ ಗ್ರಾಮದ ಸರ್ವೇ ನಂಬ್ರ 25/4ಎ ಯಲ್ಲಿ ಻ನಾದಿ ಕಾಲದಿಂದಲೂ ವಿಶಾಲವಾದ ಕೆರೆ ಇದ್ದು, ಈ ಕೆರೆಯನ್ನು ಬೆಲೆಬಾಳುವ ಸರಕಾರಿ ಭೂಮಿಯ ಸಹಿತ ಪ್ರೆಸಿಲ್ಲಾ ಮೋನಿಸ್ ರವರು ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು ಸರಕಾರವನ್ನು ವಂಚಿಸಿರುವುದು ಸ್ಪಷ್ಟವಾಗಿದೆ.

ಪ್ರಸ್ತುತ ಒತ್ತುವರಿಯಾಗಿರುವ ಕೆರೆ, ಈ ಹಿಂದೆ ಅನೇಕ ಕುಟುಂಬಗಳಿಗೆ ಉಪಯೋಗಿಯಾಗಿತ್ತು. ಕಳೆದ ಅವಧಿಯ ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯ, ಗ್ರಾಮ ಕರಣಿಕ, ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಮೊದಲಾದವರ ಅದಕ್ಷತೆ ಮತ್ತು ಕರ್ತವ್ಯಲೋಪದಿಂದಾಗಿ ಪ್ರೆಸಿಲ್ಲಾ ಮೋನಿಸ್ ರವರು ಕೆರೆ ಸಹಿತವಾದ ಸರಕಾರಿ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲು ಸಾಧ್ಯವಾಗಿದೆ.

ಕೆರೆ ಒತ್ತುವರಿ ಬಗ್ಗೆ ನಿಷ್ಪಕ್ಷಪಾತ ತನಿಖೆಗೆ ಆಗ್ರಹಿಸಿ ಈಗಾಗಲೇ ಬೆಳ್ಳೆ – ಕಟ್ಟಿಂಗೇರಿ ಗ್ರಾಮ ಕರಣಿಕರು, ಮೂಡುಬೆಳ್ಳೆ ಗ್ರಾಮ ಪಂಚಾಯತ್ ಪಿಡಿಓ, ಅಧ್ಯಕ್ಷರು, ಕಾಪು ಹೋಬಳಿ ಕಂದಾಯ ನಿರೀಕ್ಷಕರು, ಉಡುಪಿ ತಾಲೂಕು ತಹಶೀಲ್ದಾರರು, ಉಡುಪಿ ಜಿಲ್ಲಾಧಿಕಾರಿಗಳು, ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಕಂದಾಯ ಸಚಿವರಿಗೆ ನವೆಂಬರ್ 15ರಂದು ದೂರು ಸಲ್ಲಿಸಲಾಗಿದೆ. ಗ್ರಾಮ ಕರಣಿಕರು ತನಿಖೆ ಆರಂಭಿಸಿದ್ದಾರೆ.

 

Leave a Reply

Your email address will not be published. Required fields are marked *