Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯಿದೆ ಉಲ್ಲಂಘನೆ ಮಾಡಿದವರಿಗೆ ದಂಡ, ಅರ್ಜಿದಾರರಿಗೆ ಪರಿಹಾರ ಕೊಡಿಸುವಲ್ಲಿ ರಾಜ್ಯ ಮಾಹಿತಿ ಆಯುಕ್ತರುಗಳ ಹಿಂದೇಟು: ಶ್ರೀರಾಮ ದಿವಾಣ ಆರೋಪ.

ಮೂಡುಬೆಳ್ಳೆ ಕಾಲೇಜು ಪೂರ್ಣಕಾಲಿಕ ಪ್ರಾಂಶುಪಾಲರ ನೇಮಕ ಪ್ರಸ್ತಾವನೆ ವಾಪಾಸ್: ಆಡಳಿತ ಮಂಡಳಿಗೆ ಮುಖಭಂಗ !

ಉಡುಪಿ: ಉಡುಪಿ ತಾಲೂಕು ಮೂಡುಬೆಳ್ಳೆಯ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಪ್ರಸ್ತುತ ಪ್ರಭಾರ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿರುವವರಿಗೆ ಪದೋನ್ನತಿ ನೀಡಿ ಅವರನ್ನೇ ಪೂರ್ಣಕಾಲಿಕ ಪ್ರಾಂಶುಪಾಲರನ್ನಾಗಿ ನೇಮಕಾತಿ ಮಾಡುವ ಕಾಲೇಜು ಆಡಳಿತ ಮಂಡಳಿಯ ಅಕ್ರಮ ಯತ್ನ ವಿಫಲಗೊಂಡಿದೆ.

ನವೀನ್ ಕೊರೆಯಾ ಅವರು ಇದೀಗ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾಗಿದ್ದಾರೆ. ಇವರನ್ನೇ ಪೂರ್ಣಕಾಲಿಕ ಪ್ರಾಂಶುಪಾಲರನ್ನಾಗಿ ನಿಯುಕ್ತಿ ಮಾಡಬೇಕೆಂದು ಕೋರಿ ಆಡಳಿತ ಮಂಡಳಿಯು ಜೂನ್ ತಿಂಗಳಲ್ಲಿ ಉಡುಪಿ ಜಿಲ್ಲಾ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಮೂಲಕ ಇಲಾಖಾ ನಿರ್ದೇಶಕರಿಗೆ ಪ್ರಸ್ತಾವನೆ ಕಳುಹಿಸಿಕೊಟ್ಟಿತ್ತು.

ಎರಡೂವರೆ ವರ್ಷ ಕಳೆದರೂ ಕಾರ್ಯಪ್ರವೃತ್ತವಾಗದ ತಜ್ಞರ ಸಮಿತಿ !

ಯಾವುದೇ ಶಿಕ್ಷಣ ಸಂಸ್ಥೆಗೆ ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ’ಯ ಸ್ಥಾನಮಾನ ನೀಡುವ ಸಂಬಂಧ 2014, ಜುಲೈ 2ರ ಸರಕಾರದ ಆದೇಶದಂತೆ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಅಧ್ಯಕ್ಷತೆಯಲ್ಲಿ ಐದು ಮಂದಿ ತಜ್ಞ ಸದಸ್ಯರಿರುವ ಸಮಿತಿಯನ್ನು ರಚಿಸಲಾಗಿದ್ದು, ಈ ಸಮಿತಿ ಇದುವರೆಗೂ ಕಾರ್ಯಪ್ರವೃತ್ತವಾಗದ ಹಿನ್ನೆಲೆಯಲ್ಲಿ, ಸಂಬಂಧಿಸಿದ ಶಿಕ್ಷಣ ಸಂಸ್ಥೆಗಳನ್ನು ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ’ ಎಂದು ಘೋಷಿಸುವ ಪ್ರಕ್ರಿಯೆ ಈತನಕ ಆಗದಿರುವುದೂ, ಮೂಡುಬೆಳ್ಳೆ ಕಾಲೇಜಿನ ಪ್ರಭಾರ ಪ್ರಾಂಶುಪಾಲರನ್ನೇ ಪೂರ್ಣಕಾಲಿಕ ಪ್ರಾಂಶುಪಾಲರನ್ನಾಗಿ ನಿಯುಕ್ತಿ ಮಾಡುವ ಕಾಲೇಜು ಆಡಳಿತ ಮಂಡಳಿಯ ಯತ್ನ ವಿಫಲಗೊಳ್ಳಲು ಕಾರಣವಾಗಿದೆ.

ಸರಕಾರದ ಆದೇಶದನ್ವಯ ಆಯುಕ್ತರ ಅಧ್ಯಕ್ಷತೆಯಲ್ಲಿರುವ ತಜ್ಞರ ಸಮಿತಿಯು, ಯಾವುದೇ ಶಿಕ್ಷಣ ಸಂಸ್ಥೆಗಳಿಗೆ ‘ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ’ ಎಂದು ಮಾನ್ಯತೆ ಮಾಡುವುದರಿಂದಾಗಬಹುದಾದ ಸಾಧಕ ಬಾದಕಗಳನ್ನು ರಚನಾತ್ಮಕವಾಗಿ ಅಧ್ಯಯನ ನಡೆಸಿ ಸ್ಪಷ್ಟ ಅಭಿಪ್ರಾಯಗಳೊಂದಿಗೆ ಮೂರು ತಿಂಗಳ ಒಳಗಾಗಿ ಸರಕಾರಕ್ಕೆ ವರದಿ ಸಲ್ಲಿಸಬೇಕಾಗಿತ್ತು. ಆದರೆ, ತಜ್ಞರ ಸಮಿತಿ ಇದುತನಕ ವರದಿ ನೀಡದ ಹಿನ್ನೆಲೆಯಲ್ಲಿ ಯಾವುದೇ ಶಿಕ್ಷಣ ಸಂಸ್ಥೆಗೆ ‘ಅಲ್ಪಸಂಖ್ಯಾತ  ಶಿಕ್ಷಣ ಸಂಸ್ಥೆ’ ಎಂದು ಮಾನ್ಯತೆ ನೀಡಲು ಮತ್ತು ತಮ್ಮದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಎಂದು ಭಾವಿಸಿಕೊಮಡು ಚಟುವಟಿಕೆ ನಡೆಸುತ್ತಿರುವ ಕಾಲೇಜುಗಳ ಆಡಳಿತ ಮಂಡಳಿಗಳಿಗೆ ಕಾಲೇಜುಗಳಿಗೆ ತಮಗೆ ಬೇಕಾದವರನ್ನು, ತಮ್ಮ ಜಾತಿ, ಮತಗಳಿಗೆ ಸೇರಿದವರನ್ನೇ ಪೂರ್ಣಕಾಲಿಕ ಪ್ರಾಂಶುಪಾಲರನ್ನಾಗಿ ನೇಮಕ ಮಾಡಲು ಸಾಧ್ಯವಿಲ್ಲವಾಗಿದೆ.

ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜಿನಲ್ಲಿ ಮೂರು ಮಂದಿ ಹಿರಿಯ (ಸೀನಿಯಾರಿಟಿ) ಉಪನ್ಯಾಸಕರಿದ್ದು, ಈ ಮೂವರನ್ನೂ ಕಡೆಗಣಿಸಿ ನವೀನ್ ಕೊರೆಯಾರವರನ್ನು ಪ್ರಭಾರ ಪ್ರಾಂಶುಪಾಲರನ್ನಾಗಿ ಆಡಳಿತ ಮಂಡಳಿಯು ನಿಯುಕ್ತಿ ಮಾಡಿತ್ತು ಮತ್ತು ಈ ನೇಮಕಾತಿ ಪ್ರಕ್ರಿಯೆಗೆ ಸ್ಪಷ್ಟ ಆಕ್ಷೇಪ ವ್ಯಕ್ತವಾಗಿತ್ತು.

puboard

Leave a Reply

Your email address will not be published. Required fields are marked *