Realtime blog statisticsweb statistics
udupibits.in
Breaking News
ಉಡುಪಿ: ಅಕ್ರಮ ದಂಧೆಕೋರರಿಂದ ಹಣ ವಸೂಲಿ- ಉಡುಪಿ ನಗರ ಪೊಲೀಸ್ ಠಾಣೆಯ ಎಸ್ ಬಿ ಪಿಸಿ ಮಯ್ಯದ್ದಿ ವಿರುದ್ಧ ದೂರು.

ತನಿಖೆಗೆ ಆದೇಶಿಸಿ ತಿಂಗಳಾದರೂ ಆರಂಭವಾಗದ ತನಿಖೆ: ಡಿಸಿ, ಎಸಿ ಆದೇಶ ಕಡೆಗಣಿಸಿದ ತಹಶೀಲ್ದಾರ್ ಮಹೇಶ್ಚಂದ್ರ !

ಉಡುಪಿ: ಉಡುಪಿ ನಗರದಲ್ಲಿ ನಡೆದ 30 ಕೋಟಿ ರು.ಗೂ ಮಿಕ್ಕಿದ ಭಾರೀ ಭೂಹಗರಣದ ಬಗ್ಗೆ ಉಡುಪಿ ಜಿಲ್ಲಾಧಿಕಾರಿಗಳು ತನಿಖೆಗೆ ಆದೇಶಿಸಿ ಒಂದು ತಿಂಗಳು ಕಳೆದರೂ ತನಿಖೆ ನಡೆಸಬೇಕಾದ ಅಧಿಕಾರಿಗಳು ತನಿಖೆ ಆರಂಭಿಸದೆ ಕಡೆಗಣಿಸುವ ಮೂಲಕ ತಪ್ಪಿತಸ್ಥರನ್ನು ರಕ್ಷಿಸುತ್ತಿದ್ದಾರೆ.

ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಸರ್ವೇ ನಂಬ್ರ 89/5, 89/10, 89/11ಬಿ ಮತ್ತು 89/11ಬಿಯ 2.37 ಎಕರೆ ಸರಕಾರಿ ಭೂಮಿಯನ್ನು ಕೆಲವು ಮಂದಿ ಖಾಸಗಿ ವ್ಯಕ್ತಿಗಳಾದ ಅರವಿಂದ, ನಳಿನಿ, ಮೀನಾಕ್ಷಿ, ವಿಮಲ, ಮಾಧವ, ಭಾಸ್ಕರ, ರಾಘವ, ಜಗನ್ನಾಥ, ಕೃಷ್ಣಿ ಬಾಯಿ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳಾದ ಮೂಡನಿಡಂಬೂರು ಗ್ರಾಮದ ಗ್ರಾಮ ಕರಣಿಕ (ವಿಎ) ಪುನೀತ್ ಎಸ್. (ಉಡುಪಿ ತಾಲೂಕು ಗ್ರಾಮ ಕರಣಿಕರ ಸಂಘದ ಅಧ್ಯಕ್ಷ), ಕಂದಾಯ ನಿರೀಕ್ಷಕ (ಆರ್ಐ) ಸುದಾಕರ ಶೆಟ್ಟಿ ಅಲೆವೂರು, ಉಪ ತಹಶೀಲ್ದಾರ್ ಗೋಪಾಲ ಶೇರಿಗಾರ್ ಮತ್ತು ಇತರರು ಸೇರಿಕೊಂಡು ಮೂಲ ದಾಖಲೆಗಳನ್ನು ತಿದ್ದುಪಡಿ ಮಾಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ಆರ್.ಟಿ.ಸಿ ಮತ್ತು ಖಾತೆ ಮಾಡಿಸಿಕೊಂಡಿದ್ದರು.

ಈ ಭಾರೀ ಭೂಗಹರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿಗಳಾದ ಟಿ.ವೆಂಕಟೇಶ್ ಐಎಸ್ ಅವರು ಹಗರಣದ ಬಗ್ಗೆ ಕೂಡಲೇ ಖುದ್ದು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ಅವರಿಗೆ ಆದೇಶಿಸಿದ್ದರು. ಜಿಲ್ಲಾಧಿಕಾರಿಗಳು ತನಿಖೆ ಆದೇಶಿಸಿದ್ದರೂ, ಈ ಆದೇಶವನ್ನು ಸಹಾಯಕ ಕಮಿಷನರ್ ಅವರಿಗೆ ಕಳುಹಿಸಿಕೊಡುವಲ್ಲಿ ಜಿಲ್ಲಾಧಿಕಾರಿ ಕಚೇರಿಯ ಸಿಬ್ಬಂದಿಗಳು ನಿರ್ಲಕ್ಷಿಸಿದ್ದರು ಅಥವಾ ಈ ಬಗ್ಗೆ ಭೂಹಗರಣ ನಡೆಸಿದವರಿಗೆ ಮಾಹಿತಿ ನೀಡಿ ತನಿಖೆಗೆ ಆದೇಶಿಸಿದ ಕಡತ ಸಹಾಯಕ ಕಮಿಷನರ್ ಅವರಿಗೆ ಕಳುಹಿಸಿದೆ ಬೇಜವಾಬ್ದಾರಿ ಪ್ರದರ್ಶಿಸಿದ್ದರು.

ದೂರುದಾರರು ಪದೇ ಪದೇ ದೂರವಾಣಿ ಮೂಲಕ ವಿಚಾರಿಸಿದರೂ, ಖುದ್ದು ಜಿಲ್ಲಾಧಿಕಾರಿ ಕಚೇರಿಗೆ ಭೇಟಿ ನೀಡಿ ತನಿಖೆ ಆದೇಶಿಸಿದ ಕಡತವನ್ನು ಸಹಾಯಕ ಕಮಿಷನರ್ ಅವರಿಗೆ ವಿಳಂಬ ಮಾಡದೆ ಕಳುಹಿಸಿಕೊಡುವಂತೆ ಕೇಳಿಕೊಂಡರೂ ಸಂಬಂಧಿಸಿದ ಸಿಬ್ಬಂದಿಗಳು ಕಡತವನ್ನು ಸಹಾಯಕ ಕಮಿಷನರ್ ಅವರಿಗೆ ಕಳುಹಿಸಿಕೊಡದೆ ನಿರ್ಲಕ್ಷಿಸಿ ಕರ್ತವ್ಯಲೋಪ ಎಸಗಿದ್ದರು. ಕೊನೆಗೆ, ಇನ್ನೂ ವಿಳಂಬ ಮಾಡಿದಲ್ಲಿ ನಿಮ್ಮ ಬಗ್ಗೆಯೇ ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸುವುದಾಗಿ ಮುನ್ನೆಚ್ಚರಿಕೆ ನೀಡಿದ ಬಳಿಕ 16 ದಿನಗಳ ಬಳಿಕ ಜಿಲ್ಲಾಧಿಕಾರಿ ಕಚೇರಿಯ ಸಂಬಂಧಿಸಿದ ಸಿಬ್ಬಂದಿಗಳು ನವೆಂಬರ್ 24ರಂದು ಈ ಮೇಲ್ ಮೂಲಕ ತನಿಖೆಗೆ ಆದೇಶಿಸಿದ ಕಡತವನ್ನು ಸಹಾಯಕ ಕಮಿಷನರ್ ಅವರಿಗೆ ಕಳುಹಿಸಿಕೊಟ್ಟು ಕೈತೊಳೆದುಕೊಂಡರು.

ಕುಂದಾಪುರ ಉಪ ವಿಭಾಗದ ಸಹಾಯಕ ಕಮಿಷನರ್ ಶಿಲ್ಪನಾಗ್ ಐಎಎಸ್ ಅವರು ಸಹ ಭೂಹಗರಣ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಖುದ್ದು ಸ್ಥಳ ತನಿಖೆ ನಡೆಸಿ ಮೂರು ದಿನದೊಳಗೆ ವಿವರಣಾತ್ಮಕವಾದ ವರದಿ ಸಲ್ಲಿಸುವಂತೆ ಉಡುಪಿ ತಹಶೀಲ್ದಾರ್ ಮಹೇಶ್ಚಂದ್ರ ಅವರಿಗೆ ನವೆಂಬರ್ 24ರಂದೇ ಆದೇಶಿಸಿದರು. ಈ ಆದೇಶ ನವೆಂಬರ್ 25ರಂದು ತಹಶೀಲ್ದಾರ್ ಮಹೇಶ್ಷಂದ್ರ ಅವರ ಮುಂದೆ ಮೇಜಿನ ಮೇಲೆ ಇಡಲ್ಪಟ್ಟಿತು ಮತ್ತು ಮೇಜಿನ ಮೇಲೆ ಇರಿಸಿದ ಸಿಬ್ಬಂದಿಗಳು ಪ್ರಕರಣದ ಬಗ್ಗೆ ತಹಶೀಲ್ದಾರ್ ಅವರಿಗೆ ಮೌಖಿಕ ಮಾಹಿತಿಯನ್ನೂ ನೀಡಿದ್ದರು.

shilpa-nag-c-t-ias

shilpa nag c t ias

ಭಾರೀ ಭೂಹಗರಣದ ಗಂಭೀರ ಪ್ರಕರಣವೊಂದರ ಕಡತ ತನ್ನೆದುರು ಬಂದು 14 ದಿನ ಕಳೆದರೂ, ತಹಶೀಲ್ದಾರ್ ಮಹೇಶ್ಚಂದ್ರ ಅವರು ಇನ್ನೂ ಕೂಡಾ ತನಿಖೆಯನ್ನೇ ಆರಂಭಿಸದೆ ಉದ್ಧೇಶಪೂರ್ವಕವಾಗಿ ವಿಳಂಬ ಧೋರಣೆ ಅನುಸರಿಸುತ್ತಿದ್ದಾರೆ. ಈ 14 ದಿನಗಳ ಅವಧಿಯಲ್ಲಿ ಮಧ್ಯೆ ಎರಡು ಬಾರಿ ಸಿಬ್ಬಂದಿಗಳು ಭೂಹಗರಣದ ಬಗ್ಗೆ ಸ್ಥಳ ತನಿಖೆ ನಡೆಸಲು ಇರುವ ಬಗ್ಗೆ ತಹಶೀಲ್ದಾರ್ ಅವರ ಗಮನಕ್ಕೆ ಮೌಖಿಕವಾಗಿ ತಂದಿದ್ದಾರೆ. ಮಾತ್ರವಲ್ಲ, ಒಂದು ಬಾರಿ ಸ್ವತಹ ದೂರುದಾರರೇ ತಹಶೀಲ್ದಾರ್ ಮಹೇಶ್ಚಮದ್ರ ಅವರನ್ನು ಖುದ್ದು ಭೇಟಿಯಾಗಿ ಗಮನ ಸೆಳೆದಿದ್ದಾರೆ. ಆದರೆ ಈ ಭೇಟಿಯ ಸಂದರ್ಭದಲ್ಲಿ, ‘ತನಗೆ ಅಂಥ ಯಾವುದೇ ಕಡತ ಬಂದಿಲ್ಲ, ತಾನದನ್ನು ನೋಡಿಯೇ ಇಲ್ಲ’ ಎಂದು ಅತ್ಯಂತ ಉಡಾಫೆಯಿಂದ ವರತಿಸಿದ್ದು, ಈ ಭಾರೀ ಭೂಹಗರಣದಲ್ಲಿ ತಹಶೀಲ್ದಾರರು ಶಾಮೀಲಾಗಿರಬಹುದು ಎಂಬ ಅನುಮಾನಕ್ಕೆಡೆಮಾಡಿಕೊಟ್ಟಿದೆ.

‘ಖುದ್ದು ಸ್ಥಳ ತನಿಖೆ ನಡೆಸಿ ಮೂರು ದಿನದೊಳಗೆ ವಿವರಣಾತ್ಮಕವಾದ ವರದಿ ಸಲ್ಲಿಸಿ’ ಎಂದು ಸಹಾಯಕ ಕಮಿಷನರ್ ಅವರು ಆದೇಶಿಸಿದ್ದರೂ, 14 ದಿನ ಕಳೆದರೂ ಸ್ಥಳ ತನಿಖೆಯನ್ನೂ ನಡೆಸದೆ, ಮೂರು ದಿನದೊಳಗೆ ವರದಿಯನ್ನೂ ನೀಡದೆ ಸಹಾಯಕ ಕಮಿಷನರ್ ಅವರ ಆದೇಶವನ್ನೂ ಕಡೆಗಣಿಸಿರುವುದು ತಹಶೀಲ್ದಾರ್ ಮಹೇಶ್ಚಂದ್ರ ಅವರ ದಾಷ್ಟ್ರ್ಯತನಕ್ಕೆ ಸಾಕ್ಷಿಯಾಗಿದೆ.

ಈ ಭಾರೀ ಭೂಹಗರಣದಲ್ಲಿ ಆಡಳಿತ ಪಕ್ಷಕ್ಕೆ ಸೇರಿದ ರಾಜಕಾರಣಿಗಳು ಪರೋಕ್ಷವಾಗಿ ಶಾಮೀಲಾಗಿದ್ದಾರೆನ್ನಲಾಗಿದೆ. ಮೂಡನಿಡಂಬೂರು ಗ್ರಾಮದಲ್ಲಿನ 2.37 ಎಕರೆ ಸ್ವರ್ಜಿತ ಭೂಮಿಯನ್ನು ಸಂತತಿ ಇಲ್ಲದ ಕಾರಣಕ್ಕೆ ನಿರ್ಗತಿಕ ಮಹಿಳೆಯರ ಹೆರಿಗೆ ಆಸ್ಪತ್ರೆಗಾಗಿ ಸರಕಾರಕ್ಕೆ ದಾನ ಮಾಡಿದ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಅವರು 1944ರ ಎಪ್ರಿಲ್ ಒಂದರಂದು ಬರೆದಿರಿಸಿದ ವೀಲುನಾಮೆಯನ್ನೇ ನಕಲಿ ಮಾಡುವ ಯತ್ನದಲ್ಲಿದ್ದಾರೆ ಎಂಬ ಮಾಹಿತಿ udupibits.in ಗೆ ಲಭಿಸಿದೆ.

land-scam

One Comment

  1. Rajeshkunder@gmail.com'

    Kunder

    February 7, 2017 at 8:34 pm

    Fake media & fake news

Leave a Reply

Your email address will not be published. Required fields are marked *