Realtime blog statisticsweb statistics
udupibits.in
Breaking News
# ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕಮಲಾದೇವಿ ಚಟ್ಟೋಪಾಧ್ಯಾಯ ಹೆಸರಿಡಲು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ನಿವೃತ್ತ ಪತ್ರಕರ್ತ ಅಮ್ಮೆಂಬಳ ಆನಂದರಿಂದ ಸಿಎಂ ಕುಮಾರಸ್ವಾಮೀಗೆ ಮನವಿ.

ಉದ್ಯೋಗ ಖಾತ್ರಿಯಲ್ಲಿ ರಂಜನಿ ಹೆಗ್ಡೆಯಿಂದ ಅಕ್ರಮ: ರಂಜನಿ ಪಕ್ಷ ನಿಷ್ಠೆ ಬದಲಿಸಿದ ಬಳಿಕ ರಾಜೇಂದ್ರ ಶೆಟ್ಟಿಯವರಿಗಾದ ಜ್ಞಾನೋದಯ !

ಉಡುಪಿ: ಉಡುಪಿ ತಾಲೂಕು ಮೂಡುಬೆಳ್ಳೆ ಗ್ರಾಮ ಪಂಚಾಯತ್ ಅಧ್ಯಕ್ಷೆಯಾಗಿರುವ ಶ್ರೀಮತಿ ರಂಜನಿ ಹೆಗ್ಡೆ ಹಾಗೂ ಇವರ ಪತಿ 2011-12 ಮತ್ತು 2014-15ರಲ್ಲಿ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದ ಅವಧಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಹಾಲಿ ಗ್ರಾಮ ಪಂಚಾಯತ್ ಸದಸ್ಯ ರಾಜೇಂದ್ರ ಶೆಟ್ಟಿ ಯೋಜನೆಯ ಒಂಬುಡ್ಸ್ ಮೆನ್ ರವರಿಗೆ ದೂರು ನೀಡಿದ್ದಾರೆ.

ದೂರನ್ನು ಸ್ವೀಕರಿಸಿರುವ ಒಂಬುಡ್ಸ್ ಮೆನ್ ಅವರು, 2011-12 ಮತ್ತು 2014-15ರಲ್ಲಿ ರಂಜನಿ ಹೆಗ್ಡೆ ಹಾಗೂ ಇವರ ಪತಿ ನಡೆಸಿರುವ ಎಲ್ಲಾ ಉದ್ಯೋಗ ಖಾತ್ರಿ ಕಾಮಗಾರಿಗಳನ್ನೂ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪಂಚಾಯತ್ ಅಧಿಕೃತರಿಗೆ ಆದೇಶಿಸಿದ್ದಾರೆ.

ರಂಜನಿ ಹೆಗ್ಡೆ 2010ರಿಂದ 2015ರ ವರೆಗೆ ಮೂಡುಬೆಳ್ಳೆ ಗ್ರಾಮ ಪಂಚಾಯತ್ ನ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರು. ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದ ರಂಜನಿ ಹೆಗ್ಡೆ, 2015ರ ಚುನಾವಣೆ ಬಳಿಕ ತಮ್ಮ ನಿಷ್ಠೆಯನ್ನು ಕಾಂಗ್ರೆಸ್ ಪಕ್ಷಕ್ಕೆ ವರ್ಗಾಯಿಸಿದ್ದು, ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ 2015ರ ಜೂನ್ 30ರಿಂದ ಅಧ್ಯಕ್ಷರಾಗಿದ್ದಾರೆ.

ರಂಜನಿ ಹೆಗ್ಡೆ ರಾಷ್ಟ್ರಿಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಅಕ್ರಮ ಎಸಗಿದ್ದಾರೆ ಎಂದು ಆರೋಪಿಸಲಾಗಿದ್ದು, ಈ ಅವಧಿಯಲ್ಲಿ ರಂಜನಿ ಹೆಗ್ಡೆ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಸದಸ್ಯೆಯಾಗಿದ್ದರು. ಇದೀಗ ಈ ಹಳೆಯ ಅಕ್ರಮದ ವಿರುದ್ದ ದೂರು ನೀಡಿದ ರಾಜೇಂದ್ರ ಶೆಟ್ಟಿ ಸಹ ರಂಜನಿ ಹೆಗ್ಡೆ ಅಕ್ರಮ ಎಸಗಿದ್ದಾರೆ ಎನ್ನಲಾದ ಅವಧಿಯಲ್ಲಿ ಬಿಜೆಪಿ ಬೆಂಬಲಿತ ಸದಸ್ಯರಾಗಿದ್ದರು. ಮಾತ್ರವಲ್ಲ, ರಂಜನಿ ಹೆಗ್ಡೆಯವರು ಅಕ್ರಮ ಎಸಗಿದ್ದಾರೆ ಎನ್ನಲಾದ 2014-15ರ ಅವಧಿಯಲ್ಲಿ ಇದೇ ರಾಜೇಂದ್ರ ಶೆಟ್ಟಿಯವರು ಗ್ರಾ.ಪಂ.ಅಧ್ಯಕ್ಷರೇ ಆಗಿದ್ದರು.

ಬಿಜೆಪಿ ಬೆಂಬಲಿತ ಸದಸ್ಯೆಯಾಗಿದ್ದ ಅವಧಿಯಲ್ಲಿ ರಂಜನಿ ಹೆಗ್ಡೆ ಅಕ್ರಮ ಎಸಗಿರುವುದು, ಬಿಜೆಪಿ ಬೆಂಬಲಿತ ಸದಸ್ಯರಾಗಿ, ಅಧ್ಯಕ್ಷರೂ ಆಗಿದ್ದ ರಾಜೇಂದ್ರ ಶೆಟ್ಟಿಯವರ ಗಮನಕ್ಕೆ ಬಾರದಿರುವುದು, ಆಗ ಮೌನವಾಗಿದ್ದು, ಇದೀಗ ರಂಜನಿ ಹೆಗ್ಡೆ ತನ್ನ ಪಕ್ಷ ನಿಷ್ಟೆಯನ್ನು ಬಿಜೆಪಿಯಿಂದ ಕಾಂಗ್ರೆಸ್ ಗೆ ವರ್ಗಾಯಿಸಿದ ಬಳಿಕ ಜ್ಞಾನೋದಯಗೊಂಡು ದೂರು ನೀಡಿರುವುದು ರಾಜೇಂದ್ರ ಶೆಟ್ಟಿಯವರ ಧ್ವೇಷ ರಾಜಕಾರಣವೆಂದು ಸಾರ್ವಜನಿಕರು ಮಾತನಾಡಿಕೊಳ್ಳುವಂತಾಗಿದೆ.

ಮೂಡುಬೆಳ್ಳೆ ಗ್ರಾ.ಪಂ.ನಲ್ಲಿ ರಂಜನಿ ಹೆಗ್ಡೆ ಹೊರತುಪಡಿಸಿ ರಾಜೇಂದ್ರ ಶೆಟ್ಟಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಉಳಿದ ಸದಸ್ಯರಾರೂ ಯಾವುದೇ ರೀತಿಯ ಅಕ್ರಮ ಎಸಗಿಲ್ಲವೇ, ತಾನು ಅಧ್ಯಕ್ಷನಾಗಿದ್ದ ಅವಧಿಯಲ್ಲಿ ನಡೆದ ಅಕ್ರಮಕ್ಕೆ ಅಧ್ಯಕ್ಷರಾಗಿದ್ದ ರಾಜೇಂದ್ರ ಶೆಟ್ಟಿಯವರೂ ಹೊಣೆ ವಹಿಸಬೇಕಲ್ಲವೇ ಎಂಬಿತ್ಯಾದಿ ಪ್ರಶ್ನೆಗಳನ್ನು ಇದೀಗ ಸಾರ್ವಜನಿಕರು ಕೇಳುತ್ತಿದ್ದಾರೆ.

ಮೂಡುಬೆಳ್ಳೆ ಗ್ರಾಮ ಪಂಚಾಯತ್ ನ ಹಾಲಿ ಅಧ್ಯಕ್ಷೆಯಾಗಿರುವ  ರಂಜನಿ ಹೆಗ್ಡೆಯವರ ಹಳೆಯ ಅಕ್ರಮಗಳ ಬಗ್ಗೆ ರಾಜೇಂದ್ರ ಶೆಟ್ಟಿಯವರು ಡಿಸೆಂಬರ್ 5ರಂದು ನೀಡಿದ ದೂರಿನ ಆಧಾರದಲ್ಲಿ ಡಿಸೆಂಬರ್ 6ರಂದು ತನಿಖೆಗೆ ಆದೇಶಿಸಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯ ಒಂಬುಡ್ಸ್ ಮೆನ್ ರವರು, ಹತ್ತು ದಿನಗಳೊಳಗೆ ತನಿಖಾ ವರದಿಯನ್ನು ಸಲ್ಲಿಸುವಂತೆ ತನಿಖಾಧಿಕಾರಿಗಳಿಗೆ ಸ್ಪಷ್ಟ ಸೂಚನೆ ನೀಡಿದ್ದಾರೆ.

rajendra-shetty

* ರಾಜೇಂದ್ರ ಶೆಟ್ಟಿ

 

 

 

 

 

Leave a Reply

Your email address will not be published. Required fields are marked *