Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

ನೋಂದಣಿಯೇ ಆಗದ ಹಾಜಿ ಅಬ್ದುಲ್ಲಾ ಸ್ಮಾರಕ ಆಸ್ಪತ್ರೆ ಹಸ್ತಾಂತರ ಒಪ್ಪಂದ: ಆಸ್ಪತ್ರೆ ಸಿಬ್ಬಂದಿಗಳಿಗೆ ಒಕ್ಕಲೇಳಲು ಜಿಲ್ಲಾ ಸರ್ಜನ್ ರಿಂದ ಬೆದರಿಕೆ !

ಉಡುಪಿ: ಉಡುಪಿಯ ಕವಿ ಮುದ್ದಣ ಮಾರ್ಗದಲ್ಲಿರುವ ಹಾಜಿ ಅಬ್ದುಲ್ಲಾ ಸ್ಮಾರಕ ಮಕ್ಕಳ ಮತ್ತು ಹೆಂಗಸರ ಆಸ್ಪತ್ರೆಯನ್ನು ಉಡುಪಿ ಮೂಲದ ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿಯವರಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಹಾಜಿ ಅಬ್ದುಲ್ಲಾರವರ ವೀಲುನಾಮೆಗೆ ವಿರುದ್ಧವಾಗಿ ಹಸ್ತಾಂತರಿಸಿದ ಪ್ರಕ್ರಿಯೆ ಕಾನೂನುಬದ್ಧವಾಗಿ ಪೂರ್ಣಗೊಳ್ಳುವ ಮೊದಲೇ, ಬಿ.ಆರ್.ಶೆಟ್ಟಿಯವರ ಖಾಸಗಿ ಗುತ್ತಿಗೆದಾರನಂತೆ ವರ್ತಿಸುತ್ತಿರುವ ಸರಕಾರ ಅನಧಿಕೃತವಾಗಿ ಆಸ್ಪತ್ರೆ ಆವರಣದಲ್ಲಿರುವ ವಸತಿ ನಿಲಯಗಳನ್ನು ಕಾಲಿ ಮಾಡುವಂತೆ ಆಸ್ಪತ್ರೆ ಸಿಬ್ಬಂದಿಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಆಸ್ಪತ್ರೆ ಆವರಣದಲ್ಲಿ ಆಸ್ಪತ್ರೆ ಸಿಬ್ಬಂದಿಗಳ ವಸತಿಗಳಿದ್ದು, ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಯ ಜಿಲ್ಲಾ ಸರ್ಜನ್ ರವರು ಮೌಖಿಕವಾಗಿ ಸಿಬ್ಬಂದಿಗಳಿಗೆ ಮುಂದಿನ ಮೂರು ದಿನಗಳೊಳಗೆ ವಸತಿಗಳನ್ನು ಕಾಲಿ ಮಾಡುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ. ಇದನ್ನು ಜಿಲ್ಲಾ ಸರ್ಜನ್ ರವರು ಮೌಖಿಕವಾಗಿ ಮತ್ತು ಅನಧಿಕೃತವಾಗಿ ತಿಳಿಸಿರುವುದರಿಂದ, ಇದೊಂದು ಬೆದರಿಕೆ ಕ್ರಿಮಿನಲ್ ಪ್ರಕರಣವಾಗಿದೆ ಎಂದು ವ್ಯಾಖ್ಯಾನಿಸಲಾಗಿದೆ.

ಹಾಜಿ ಅಬ್ದುಲ್ಲಾ ಸ್ಮಾರಕ ಮಕ್ಕಳ ಮತ್ತು ಹೆಂಗಸರ ಆಸ್ಪತ್ರೆಯನ್ನು ಬಿ.ಆರ್.ಶೆಟ್ಟಿಯವರ ‘ಬಿ.ಆರ್.ಎಸ್. ಸ್ವಾಸ್ಥ್ಯ ಮತ್ತು ಸಂಶೋಧನ ಸಂಸ್ಥೆ’ ಗೆ ಹಸ್ಥಾಂತರಿಸಲು ಸರಕಾರ ನಿರ್ಧರಿಸಿದೆಯಾದರೂ, ಇದುವರೆಗೂ ಈ ಸಂಬಂಧವಾಗಿ ಕಾನೂನುಬದ‍್ದವಾಗಿ ಹಸ್ತಾಂತರಕ್ಕೆ ಸಂಬಂಧಿಸಿದ ಒಪ್ಪಂದವನ್ನು ನೋಂದಣಿ ಮಾಡಿಲ್ಲ. ನೋಂದಣಿ ಮಾಡಿಕೊಳ್ಳುವ ಮೊದಲೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಅವಸರವಾಗಿ ಶಿಲನ್ಯಾಸ ಮಾಡಿರುವುದೇಕೇ ಎಂಬ ಪ್ರಶ್ನೆ ಉದ್ಭವಿರುವ ನಡುವೆಯೇ ಇದೀಗ, ನೋಂದಣಿ ಪ್ರಕ್ರಿಯೆ ಮಾಡುವ ಮೊದಲೇ, ಆಸ್ಪತ್ರೆ ಆವರಣದಿಂದಲ್ಲಿರುವ ವಸತಿಗಳಿಂದ ಸಿಬ್ಬಂದಿಗಳನ್ನು ಏಳುವಂತೆ ಸೂಚಿಸುವ ಜರೂರತ್ತಾದರೂ ಏನು ಎನ್ನುವ ಪ್ರಶ್ನೆಯೂ ಉದ್ಭವಿಸಿದೆ.

ಮುಂದಿನ ಒಂದೆರಡು ವಾರದೊಳಗೆ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲ ಸ್ಮಾರಕ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿ ಆರಂಭಿಸುವ ಉದ್ಧೇಶದಿಂದ ಬಿ.ಆರ್.ಎಸ್. ಸಂಸ್ಥೆಯು ಜಿಲ್ಲಾ ಸರ್ಜನ್ ರವರ ಮೂಲಕ ಸಿಬ್ಬಂದಿಗಳನ್ನು ಒಕ್ಕಲೆಬ್ಬಿಸಲು ಮುಂದಾಗಿದೆ ಎಂದು ಭಾವಿಸಲಾಗಿದೆ. ಈ ಪ್ರಕ್ರಿಯೆಯೇ ಅಕ್ರಮವಾಗಿದೆ ಮತ್ತು ಮಾನವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಸಿಬ್ಬಂದಿಗಳು ಪ್ರಸ್ತುತ ತಮ್ಮನ್ನು ಒಕ್ಕಲೆಬ್ಬಿಸುವ ಅನಧಿಕೃತ ಪ್ರಕ್ರಿಯೆಯ ವಿರುದ್ಧ ಕಾನೂನು ಹೋರಾಟ ನಡೆಸಲು ಚಿಂತನೆ ನಡೆಸಿದ್ದಾರೆಂದು ತಿಳಿದುಬಂದಿದೆ.

ಈ ನಡುವೆ, ಬಿ.ಆರ್.ಎಸ್. ಸಂಸ್ಥೆಯು ತಮ್ಮ ವಕೀಲರ ಮೂಲಕ ಆಸ್ಪತ್ರೆ ಹಸ್ತಾಂತರ ಪ್ರಕ್ರಿಯೆಯ ಬಗ್ಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದವರಿಗೆ ಅನಧಿಕೃತವಾಗಿ ನಕಲಿ ಕೇವಿಯಟ್ ಪ್ರತಿಗಳನ್ನು ಕಳುಹಿಸುವ ಮೂಲಕ ಪರೋಕ್ಷವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಆರೋಗ್ಯ ಇಲಾಖೆಯ ಪ್ಹಿರಧಾನ ಕಾರ್ತಿಯದರ್ಶಿ ಶಾಲಿನಿ ರಜನೀಶ್ ರವರ ಕಚೇರಿಗೆ ಕೆಲವರು ಹಲವು ಮಾಹಿತಿ ಹಕ್ಕು ಅರ್ಜಿಗಳನ್ನು ಕಳುಹಿಸಿದ್ದು, ಇದೇ ಕಚೇರಿಯ ಅಧಿಕಾರಿಗಳು ಅರ್ಜಿದಾರರ ವಿಳಾಸಗಳನ್ನು ಬಿ.ಆರ್.ಎಸ್. ಸಂಸ್ಥೆಯವರಿಗೆ ನೀಡುವ ಮೂಲಕ ಅಪರಾದವೆಸಗಿದ್ದಾರೆ ಎಂಬ ದೂರು ಸಹ ಕೇಳಿಬಂದಿದೆ.

mara-2     hospital-2haji-abdulla

Leave a Reply

Your email address will not be published. Required fields are marked *