Realtime blog statisticsweb statistics
udupibits.in
Breaking News
# ಶೃಂಗೇರಿ ಜಗದ್ಗುರುಗಳ ನೇತೃತ್ವದ ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯದಂತೆ ಅತ್ಯಾಚಾರ, ಅನೈತಿಕ ಸಂಬಂಧದ ಆರೋಪವಿರುವ ಮಠಾಧಿಪತಿಗಳನ್ನು ಸಭಾದಿಂದ ಕೈಬಿಡಲಾಗಿದೆ. ಆದುದರಿಂದ, ಅಂಥ ಮಠಾಧೀಶರನ್ನು ಯಾರೂ ಬೆಂಬಲಿಸಬಾರದು. – ಅಖಿಲ ಹವ್ಯಕ ಒಕ್ಕೂಟ.

ಉಡುಪಿ ಡಿಸಿಯಾಗಿದ್ದ ಡಾ.ವಿಶಾಲ್ ಕೋರಿಕೆ ತಿರಸ್ಕೃತ: ಲತಿಕಾ ಅಕ್ರಮವಾಗಿ ಪಡೆದುಕೊಂಡ ಹೆಚ್ಚುವರಿ ಹಣ ವಸೂಲಿಗೆ ಹಾಲಿ ಡಿಸಿಗೆ ಆದೇಶ !

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನದಲ್ಲಿ ಮ್ಯಾನೇಜರ್ ಆಗಿದ್ದ ಅವಧಿಯಲ್ಲಿ ಶ್ರೀಮತಿ ಲತಿಕಾರವರು ಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆದುಕೊಳ್ಳದೆ ದೇವಸ್ಥಾನದ ಭಂಡಾರದಿಂದ ಹೆಚ್ಚುವರಿಯಾಗಿ ಪಡೆದುಕೊಂಡ ಹಣವನ್ನು ವಸೂಲಿ ಮಾಡಿ ದೇವಸ್ಥಾನದ ನಿಧಿಗೆ ಜಮೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಂಡು, ಕೈಗೊಂಡ ಕ್ರಮದ ಬಗ್ಗೆ ಪಾಲನಾ ವರದಿ ಸಲ್ಲಿಸುವಂತೆ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರು ನವೆಂಬರ್ 23ರಂದು ಉಡುಪಿ ಜಿಲ್ಲಾಧಿಕಾರಿಗಳಿಗೆ ಸ್ಪಷ್ಟ ಆದೇಶ ಮಾಡಿದ್ದಾರೆ.

2014ರ ಜೂನ್ 17ರಂದು ಇದೇ ರೀತಿಯ ಆದೇಶವನ್ನು ಆಯುಕ್ತರು ಜಿಲ್ಲಾಧಿಕಾರಿಗಳಿಗೆ ಮಾಡಿದ್ದರು. ಆದರೆ, ಆಗ ಜಿಲ್ಲಾಧಿಕಾರಿಯಾಗಿದ್ದ ಡಾ.ಆರ್.ವಿಶಾಲ್ ರವರು ಲತಿಕಾ ಅಕ್ರಮವಾಗಿ ಪಡೆದುಕೊಂಡ ಹಣವನ್ನು ಅವರಿಂದ ವಸೂಲಿ ಮಾಡದೆ, ಲತಿಕಾರವರ ವೇತನವನ್ನು ಹೆಚ್ಚಿಸುವಂತೆ ಶಿಫಾರಸು ಮಾಡಿ ಧರ್ಮಾದಾಯ ದತ್ತಿಗಳ ಇಲಾಖೆಯ ಆಯುಕ್ತರಿಗೆ ಪತ್ರ ಬರೆದು ಅಕ್ರಮವೆಸಗಿದ ಲತಿಕಾರವರ ಮೇಲೆ ವಿಶೇಷ ಕಾಳಜಿ ವ್ಯಕ್ತಪಡಿಸಿದ್ದರು.

ಅಕ್ರಮ ೆಸಗಿದವರ ವಿರುದ್ಧ ಶಿಸ್ತು ಕ್ರಮ ಜರುಗಿಸುವ ಬದಲು, ಅಕ್ರಮ ಎಸಗಿದವರ ಪರವಾಗಿಯೇ ವಕಾಲತ್ತು ವಹಿಸಿ, ಅವರಿಗೆ ವೇತನ ಹೆಚ್ಚಿಸುವಂತೆ ಪತ್ರ ಬರೆದ ಜಿಲ್ಲಾಧಿಕಾರಿ ಡಾ.ವಿಶಾಲ್ ರವರ ಪಕ್ಷಪಾತೀಯ ಕ್ರಮ ಕೆಲವೊಂದು ಗಂಭೀರ ಅನುಮಾನಗಳಿಗೆ ಕಾರಣವಾಗಿತ್ತು ಮತ್ತು ಈ ಅಸಹಜವಾದ ಕ್ರಮಕ್ಕೆ ಮಾಹಿತಿ ಹಕ್ಕುಕಾರ್ಯಕರ್ತರೂ, ಶ್ರೀ ಕ್ಷೇತ್ರ  ಕಡಿಯಾಳಿ ಹಿತರಕ್ಷಣಾ ಸಮಿತಿಯ ಸಂಚಾಲಕರಾದ ಕೆ.ಎಸ್.ಉಪಾಧ್ಯ ಅವರು ಸ್ಪಷ್ಟ ಆಕ್ಷೇಪ ವ್ಯಕ್ತಪಡಿಸಿ ಆಯುಕ್ತರಿಗೆ ಪತ್ರ ಬರೆದಿದ್ದರು.

ಕೆ.ಶ್ರೀಶ ಉಪಾಧ್ಯ

 

Leave a Reply

Your email address will not be published. Required fields are marked *