Realtime blog statisticsweb statistics
udupibits.in
Breaking News
# ದೂರು ನೀಡಿ ವರ್ಷಗಳೇ ಕಳೆದರೂ, ಆರಂಭವಾಗದ ವಿಚಾರಣೆ: ಕರ್ನಾಟಕ ಮಾಹಿತಿ ಆಯೋಗದ ನಿಧಾನಗತಿ ವಿರುದ್ಧ RTI ಕಾರ್ಯಕರ್ತ ಶ್ರೀರಾಮ ದಿವಾಣರಿಂದ ಮುಖ್ಯ ಮಾಹಿತಿ ಆಯುಕ್ತರಿಗೆ ದೂರು.

ಗಾಯತ್ರಿ ಧ್ಯಾನ ಮಂದಿರದಲ್ಲಿ ಗಾಯತ್ರಿ ಯಜ್ಞ ಸಂಪನ್ನ

ಉಡುಪಿ: ಹಿರಿಯಡ್ಕ ಗಾಯತ್ರಿ ಧ್ಯಾನ ಮಂದಿರದ ಏಳನೇ ವಾರ್ಷಿಕೋತ್ಸವವು ಡಿಸೆಂಬರ್ 25ರಂದು ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನೆರವೇರಿತು. ವಾರ್ಷಿಕೋತ್ಸವದ ಅಂಗವಾಗಿ ಪೂರ್ವಾಹ್ನ ಗಾಯತ್ರಿ ಯಜ್ಞ, ಅಪರಾಹ್ನ ಉಪನ್ಯಾಸ ಮತ್ತು ಹಿಂದೂಸ್ಥಾನೀ ಗಾಯನ ಕಾರ್ಯಕ್ರಮಗಳು ನಡೆದವು.

gayatri-5

ಮೈಸೂರಿನ ಧನಂಜಯ ಮೂರ್ತಿ ಅವರು ಗಾಯತ್ರಿ ಮಂತ್ರದ ಮಹತ್ವ ಮತ್ತು ಶಕ್ತಿಯ ಬಗ್ಗೆ ಉಪನ್ಯಾಸ ನೀಡಿದರು. ಗಾಯತ್ರಿ ಮಂತ್ರ ಅದ್ಭುತ ಶಕ್ತಿಯ ಮಂತ್ರ, ಮಂತ್ರದ ಅರ್ಥವನ್ನು ಮನನ ಮಾಡಿಕೊಂಡು ಅನುಷ್ಠಾನ ಮಾಡಿದಲ್ಲಿ ಸಿದ್ಧಿ ಸಾಧ್ಯ, ಐದು ಸಾವಿರ ವರ್ಷಗಳ ಹಿಂದಿನ ವರೆಗೆ ಮೂರ್ತಿಪೂಜೆ ಇರಲಿಲ್ಲ. ಬಳಿಕ ಮೂರ್ತಿಪೂಜೆಯನ್ನು ಆರಂಭಿಸಲಾಯಿತು. ಮೂರ್ತಿಪೂಜೆ ಆರಂಭವಾದ ಬಳಿಕ ಅನರ್ಥಗಳು ಮತ್ತು ರಾಗ ಧ್ವೇಷಗಳು ಪ್ರಾರಂಭಗೊಂಡವು ಎಂದು ಅವರು ಹೇಳಿದರು.

gayatri-3

ಖ್ಯಾತ ಹಿಂದೂಸ್ಥಾನೀ ಗಾಯಕ ಹೊನ್ನಾವರದ ವಿಶ್ವೇಶ್ವರ ಭಟ್ ಅವರಿಂದ ಹಿಮದೂಸ್ಥಾನೀ ಗಾಯನ ಕಾರ್ಯಕ್ರಮ ನಡೆಯಿತು. ತಬಲಾದಲ್ಲಿ ಭಾರವಿ ದೇರಾಜೆ ಹಾಗೂ ಹಾರ್ಮೋನಿಯಂನಲ್ಲಿ ಪ್ರಸಾದ್ ಕಾಮತ್ ಸಹಕರಿಸಿದ್ದರು. ಗಾಯತ್ರಿ ಧ್ಯಾನ ಮಂದಿರದ ವ್ಯವಸ್ಥಾಪಕ, ಹಿರಿಯ ಬರಹಗಾರ ರಾಜಗೋಪಾಲ್ ಹಾಗೂ ಹಿರಿಯ ವಿಮರ್ಶಕ, ಚಿಂತಕ ರಾಜಶೇಖರ್ ಅತಿಥಿಗಳಿಗೆ ಸ್ಮರಣಿಕೆಗಳನ್ನು ನೀಡಿದರು. ಶ್ರೀಧರ ಬಳೆಗಾರ ಹಾಗೂ ವೆಂಕಟಕೃಷ್ಣ ಅವರು ಅತಿಥಿಗಳನ್ನು ಪರಿಚಯಿಸಿದರು.
gayatri-2

Leave a Reply

Your email address will not be published. Required fields are marked *