Realtime blog statisticsweb statistics
udupibits.in
Breaking News
ಉಡುಪಿ: ಜಿಲ್ಲೆಯ 25 ಮಂದಿ ಪೊಲೀಸ್ ವಾಹನ ಚಾಲಕ ಸಿಬ್ಬಂದಿಗಳ ಪರಸ್ಪರ ವರ್ಗಾವಣೆ.

‘udupibits ಶತಮಾನದ ಶಕ್ತಿ’ ಗೌರವಕ್ಕೆ ಕೆ.ಎಸ್.ಉಪಾಧ್ಯ ಆಯ್ಕೆ

ಉಡುಪಿ: ಉಡುಪಿಬಿಟ್ಸ್ ಡಾಟ್ ಇನ್ ಸಂಸ್ಥೆಯು ಕೊಡಮಾಡುವ ವಾರ್ಷಿಕ ‘’ಉಡುಪಿಬಿಟ್ಸ್ ಶತಮಾನದ ಶಕ್ತಿ’’ ಗೌರವಕ್ಕೆ ಹಿರಿಯ ಮಾಹಿತಿ ಹಕ್ಕು ಹೋರಾಟಗಾರರಾದ ಉಡುಪಿ ಲಕ್ಷ್ಮೀಂದ್ರನಗರದ ಕೆ.ಎಸ್.ಉಪಾಧ್ಯ ಅವರನ್ನು ಆಯ್ಕೆ ಮಾಡಲಾಗಿದೆ.

ಕಳೆದ ಹಲವು ವರ್ಷಗಳಿಂದ ನಿರಂತರವಾಗಿ ಮಾಹಿತಿ ಹಕ್ಕು ಕಾಯ್ದೆಯನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಅನೇಕ ಭ್ರಷ್ಟಚಾರದ ಪ್ರಕಣಗಳ ವಿರುದ್ಧ ಹೋರಾಟ ನಡೆಸಿ ಮಹತ್ವದ ವಿಕ್ರಮಗಳನ್ನು ಸಾಧಿಸಿರುವ ಕೆ.ಎಸ್.ಉಪಾಧ್ಯ ಅವರನ್ನು 2016ನೇ ಸಾಲಿನ ‘’ಉಡುಪಿಬಿಟ್ಸ್ ಶತಮಾನದ ಶಕ್ತಿ’’ ಗೌರವಕ್ಕೆ ಸಂಸ್ಥೆಯು ಗುರುತಿಸಿದೆ. ಉಪಾಧ್ಯ ಅವರು ಸಿಂಡಿಕೇಟ್ ಬ್ಯಾಂಕ್ ನಿವೃತ್ತ ಅಧಿಕಾರಿಯಾಗಿದ್ದಾರೆ.

2015ನೇ ಸಾಲಿನಲ್ಲಿ ಈ ಗೌರವಕ್ಕೆ ಮೂಲತಹ ಉಡುಪಿಯವರಾಗಿದ್ದು, ಪ್ರಸ್ತುತ ಚೆನ್ನೈನಲ್ಲಿ ನೆಲೆಸಿರುವ ಹಿರಿಯ ಗ್ರಾಹಕ ನ್ಯಾಯವಾದಿ ಪಿ.ಆರ್.ಭಂಡಾರ್ಕರ್ ಅವರನ್ನು ಆಯ್ಕೆ ಮಾಡಲಾಗಿತ್ತು.

ಪ್ರಾಮಾಣಿಕತೆ, ದಕ್ಷತೆ, ಶಿಸ್ತು, ಸತ್ಯಸಂಧತೆ, ಸಾಮಾಜಿಕ ಕಾಳಜಿಯ ಜೊತೆಗೆ ಜೀವಮಾನದಲ್ಲಿ ಶ್ರೇಷ್ಠ ಸಾಧನೆಗೈದ ಹಿರಿಯರನ್ನು ಗುರುತಿಸಿ ಗೌರವಿಸುವುದು ಉಡುಪಿಬಿಟ್ಸ್ ಡಾಟ್ ಇನ್ ಸಂಸ್ಥೆಯ ಉದ್ಧೇಶವಾಗಿದೆ.

 

Leave a Reply

Your email address will not be published. Required fields are marked *