Realtime blog statisticsweb statistics
udupibits.in
Breaking News
ಉಡುಪಿ: ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಕಾಪು ತಾಲೂಕಿಗೆ ಸೇರಿಸಿದ್ದು ಖಂಡನೀಯ, ಉಡುಪಿ ತಾಲೂಕಿಗೆ ಸೇರಿಸುವುದು ಮಾತ್ರ ಸರಿಯಾದ ಕ್ರಮ- ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಅಶ್ವಿನ್ ಲಾರೆನ್ಸ್, ಶ್ರೀರಾಮ ದಿವಾಣ ಜಂಟೀ ಹೇಳಿಕೆ.

ನೋಟ್ ಬ್ಯಾನ್ ನ ಅನಗತ್ಯ ಟಾರ್ಚರ್ ಅನ್ನೂ ವಿಮರ್ಶಿಸದಿರಲು ಆಗುವುದಿಲ್ಲ

# ದೊಡ್ಡ ಸಮಸ್ಯೆ. ನನಗೀಗ ಒಬ್ಬರ ಪ್ರಶ್ನೆ. ನಿಜವಾಗಿ ನೀವು ಯಾರ ಪರ ಇದ್ದೀರಿ ಅಂತ. ನನಗಿದು ಇಡೀ ದೇಶದಲ್ಲಿ ಉಂಟಾಗುತ್ತಿರುವ ದೊಡ್ಡ ಕಂದಕದಂತೆ ಕಾಣುತ್ತದೆ. ಒಬ್ಬ ರಾಜಕೀಯ ವಿಜ್ಞಾನದ ವಿದ್ಯಾರ್ಥಿ ಹೇಗೆ ಯೋಚನೆ ಮಾಡ್ಬೇಕೊ ಹಾಗೆ ಯೋಚಿಸಲು ಪ್ರಯತ್ನಿಸುತ್ತಿದ್ದೇನೆ.

ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ ಇರಲಿ, ಮೋದಿಯವರಿರಲಿ ಅವರಿಬ್ರೂ ನನ್ನ ಪ್ರಧಾನ ಮಂತ್ರಿಗಳೆಂದೇ ಗೌರವದಿಂದ ಕಂಡಿದ್ದೇನೆ. ಆದರೆ ನನ್ನ ಯಾವ ಪ್ರಧಾನ ಮಂತ್ರಿಗಳನ್ನೂ ನನ್ನ ಮಾವನ ಹಾಗೋ, ಬಾವನ ಹಾಗೋ ಸಮರ್ಥಿಸಿಕೊಳ್ಳಲು ಎಂದೂ ಹೋಗಿಲ್ಲ. ಹೋಗುವುದೂ ಇಲ್ಲ. ರಾಷ್ಟ್ರೀಯ ಗ್ರಾಮೀಣ ಉದ್ಯೋಗದಂಥ ಬೆಸ್ಟ್ ಯೋಜನೆಯನ್ನು ತಂದ ಮನಮೋಹನ್ ಸಿಂಗ್ ಅವರ ಆ ಕೆಲಸವನ್ನು ಗೌರವಿಸದೆ ಇರಲು ನನಗೆ ಆಗುವುದಿಲ್ಲ. ಸಿಂಗ್ ಅವರು ಕೇವಲ ಆಡಳಿತಾತ್ಮಕ ವ್ಯವಸ್ಥೆಯಾಗಿ ಇಟ್ಟಿದ್ದ ನಿರ್ಮಲ ಭಾರತ ಯೋಜನೆಯನ್ನು ಜನರ ಬಳಿಗೆ ಕೊಂಡೊಯ್ದು ಸ್ವಚ್ಚ ಭಾರತ ಅಭಿಯಾನವನ್ನಾಗಿಸಿದ ನರೇಂದ್ರ ಮೋದಿಯವರ ದಕ್ಷತೆಯನ್ನು ಗೌರವಿಸದೆ ಇರಲೂ ಆಗುವುದಿಲ್ಲ.

ಕಾಳಧನಿಕರು ಕೊಬ್ಬಲು ಬೇಕಾದ ಆರ್ಥಿಕ ನೀತಿಯನ್ನು ತಂದದ್ದಕ್ಕಾಗಿ ಸಿಂಗ್ ಅವರ ನೀತಿಯನ್ನು ವಿಮರ್ಶಿಸದೆ ಇರಲು ಆಗುವುದಿಲ್ಲ. ನೋಟ್ ಬ್ಯಾನ್ ನ ಅನಗತ್ಯ ಟಾರ್ಚರ್ ಅನ್ನೂ ವಿಮರ್ಶಿಸದಿರಲು ಆಗುವುದಿಲ್ಲ. ಹಾಗೆಂದು ಅದರ ಉದ್ದೇಶವೆ ಕೆಟ್ಟದಾಗಿತ್ತು ಎಂದು ನಾನು ಭಾವಿಸುವುದಿಲ್ಲ. ಬದಲು ಹೆಚ್ಚು ಯೋಚಿಸದೆ ತಗೊಂಡ ನಿರ್ಧಾರವಾಗಿತ್ತು. ಬ್ಯಾಂಕಲ್ಲಿ ಹಣ ಸಿಗಲಿಲ್ಲ ಎನ್ನುವುದು ದೊಡ್ಡ ಸಮಸ್ಯೆ ಅಲ್ಲ. ಆದರೆ ಅದರಿಂದ collapse ಆಗುವ ಇಕಾನಮಿಯನ್ನು ರಕ್ಷಿಸಿಕೊಳ್ಳಲು ಬೇಕಾದ ಸಿದ್ದತೆಗಳು ಬೇಕಿತ್ತು. ಈ ಸಿದ್ದತೆಯನ್ನು ಮುಂಚಿತವಾಗಿ ಮಾಡಿಕೊಂಡಾಗ ನೋಟ್ ಬ್ಯಾನ್ ಮಾಡುತ್ತಾರೆ ಎಂದೇನೂ ಗೊತ್ತಾಗಲು ಸಾಧ್ಯ ಇರಲಿಲ್ಲ.

ಉದಾಹರಣೆಗೆ ಉದ್ಯೋಗ ಕಳಕೊಳ್ಳುವವರನ್ನು ಬೇರೆ ಕಡೆ ಡೈವರ್ಟ್ ಮಾಡುವ ಸಿದ್ದತೆಗಳು ಬೇಕಿತ್ತು. ಅಥವಾ 1930 ರಲ್ಲಿ ಅಮೆರಿಕದಲ್ಲಿ ಮಾಡಿದಂತೆ ಉದ್ಯೋಗ ಕಳಕೊಂಡವರಿಗೆ ಮಾಸಾಶನ ಕೊಡುವ ಕಾರ್ಯಕ್ರಮ ಬೇಕಿತ್ತು. ಇಂಥ ಸ್ಟೆಪ್ಸ್ ಇಲ್ಲದೆ ತಗೊಂಡ ನಿರ್ಧಾರ ಭ್ರಷ್ಟರನ್ನು ಹೆಡೆಮುರಿ ಕಟ್ಟಿದಾಗಲೂ ಕೂಡ ಜನರ ಬದುಕನ್ನು ಸುಮಾರು ಆರು ತಿಂಗಳ ನಂತರ ಹತಾಶೆಗೆ ದೂಡುತ್ತದೆ. ಇದನ್ನೇ ಅಮರ್ತ್ಯಸೇನ್, ಜೀನ್ ಡ್ರೀಝ್ ಎಲ್ಲ ಹೇಳಿದ್ದು.

ಮನಮೋಹನ್ ಸಿಂಗ್ ಅರ್ಥಶಾಸ್ತ್ರಜ್ಞ ನಿಜ. ಆದರೂ ಅವರು ಒಂದು ಪಕ್ಷದಲ್ಲಿರುವಾಗ ಅವರ ಅಭಿಪ್ರಾಯವನ್ನು ಅರ್ಥಶಾಸ್ತ್ರಜ್ಞನ ಅಭಿಪ್ರಾಯವೆಂದು ತೆಗೆದುಕೊಳ್ಳಲು ಬರುವುದಿಲ್ಲ. ಆದರೆ ಅಮರ್ತ್ಯಸೇನ್ ಹಾಗಲ್ಲ. ಅವರು ಮನಮೋಹನ್ ಸಿಂಗ್ ಇಕಾನಮಿಯನ್ನು ಟೀಕಿಸಿದ್ದರು. ಅಮರ್ತ್ಯಸೇನ್, ಜೀನ್ ಡ್ರೀಝ್ ರಂಥ ಅರ್ಥಶಾಸ್ತ್ರಜ್ಞರು ಮೋದಿಯವರ ಮೇಲೆ ವೈಯಕ್ತಿಕ ಸಿಟ್ಟಿನಿಂದ ಟೀಕಿಸುತ್ತಾರೆಂದಾಗಲಿ, ವಿರೋಧ ಪಕ್ಷಗಳ ಕೈಗೊಂಬೆಗಳಾಗಿದ್ದಾರೆಂದಾಗಲಿ ಅಥವಾ ನೋಟ್ ಬ್ಯಾನ್ ಅನ್ನು ಬೆಂಬಲಿಸಿದ ಅಮಿತಾಭ್ ಬಚ್ಚನ್ ಅಮರ್ತ್ಯಸೇನ್ ಗಿಂತ ದೊಡ್ಡ ಅರ್ಥಶಾಸ್ತ್ರಜ್ಞ ಎಂದಾಗಲಿ ಭಾವಿಸಲು ನನಗೆ ಆಗ್ತಾ ಇಲ್ಲ.

ಈ ನಿಲುವನ್ನು ಯಾರ ಪರ ಎಂದು ಬೇಕಾದರೂ ಅರ್ಥೈಸಬಹುದು. ಅದು ಅರ್ಥೈಸುವವರಿಗೆ ಬಿಟ್ಟದ್ದು.

  • ಅರವಿಂದ ಚೊಕ್ಕಾಡಿ

Leave a Reply

Your email address will not be published. Required fields are marked *