Realtime blog statisticsweb statistics
udupibits.in
Breaking News
# ಶೃಂಗೇರಿ ಜಗದ್ಗುರುಗಳ ನೇತೃತ್ವದ ಸನಾತನ ಧರ್ಮ ಸಂವರ್ಧಿನೀ ಸಭಾದ ನಿರ್ಣಯದಂತೆ ಅತ್ಯಾಚಾರ, ಅನೈತಿಕ ಸಂಬಂಧದ ಆರೋಪವಿರುವ ಮಠಾಧಿಪತಿಗಳನ್ನು ಸಭಾದಿಂದ ಕೈಬಿಡಲಾಗಿದೆ. ಆದುದರಿಂದ, ಅಂಥ ಮಠಾಧೀಶರನ್ನು ಯಾರೂ ಬೆಂಬಲಿಸಬಾರದು. – ಅಖಿಲ ಹವ್ಯಕ ಒಕ್ಕೂಟ.

ವರದರಾಯ ಭಂಡಾರಿ ಸ್ಮರಣೆಯಲ್ಲಿ ಭಜನ್

ಉಡುಪಿ: ದೊಡ್ಡಣಗುಡ್ಡೆಯಲ್ಲಿರುವ ಡಾ.ಎ.ವಿ.ಬಾಳಿಗ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಖ್ಯಾತ ಮನಃಶಾಸ್ತ್ರಜ್ಞ ಡಾ.ಪಿ.ವಿ.ಭಂಡಾರಿಯವರ ಪರ್ಕಳದಲ್ಲಿರುವ ನಿವಾಸದಲ್ಲಿ ಜನವರಿ 29ರಂದು ಭಜನ್ ಕಾರ್ಯಕ್ರಮವು ನಡೆಯಿತು.

ಉನ್ನತ ಶಿಕ್ಷಣ ಇಲಾಖೆಯಲ್ಲಿ ಹಿರಿಯ ಅಧಿಕಾರಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ 2015ರ ನವೆಂಬರ್ ನಲ್ಲಿ ನಿಧನರಾದ ಪಿ.ವರದರಾಯ ಭಂಡಾರಿಯವರ ಸ್ಮರಣೆಯಲ್ಲಿ, ಇವರ ಪುತ್ರರಾದ ಡಾ.ಪಿ.ವಿ.ಭಂಡಾರಿಯವರು ಭಜನ್ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಶ್ರೀಮತಿ ವಸಂತಿ ಶೆಣೈ ಅವರು ಭಜನ್ ಕಾರ್ಯಕ್ರಮ ನಡೆಸಿಕೊಟ್ಟರು. ಹಾರ್ಮೋನಿಯಂನಲ್ಲಿ ಶಶಿ ಕಿರಣ್ ಮಣಿಪಾಲ್ ಹಾಗೂ ತಬಲಾದಲ್ಲಿ ಮಾಧವಾಚಾರ್ಯ ಅವರು ಸಹಕರಿಸಿದ್ದರು.

Leave a Reply

Your email address will not be published. Required fields are marked *