Realtime blog statisticsweb statistics
udupibits.in
Breaking News
ಉಡುಪಿ: ಜೂನ್ 6 ಬೆಳಗ್ಗೆ 11ಕ್ಕೆ ಉಡುಪಿ ಡಿಸಿ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗದಿಂದ ಮಾಹಿತಿ ಹಕ್ಕು ಅರ್ಜಿಗಳ ವಿಚಾರಣೆ.

ತುಳು ನಾಡಿನ ಸಮಸ್ಯೆಗಳೇ ಬೇರೆ …

೧. ಕುಡಿಯುವ ನೀರು, ೨. ಕ್ರಷಿಗೆ ನೀರು, ೩. ಸಾಂಸ್ಥಿಕ ಹಿಂಸೆ, ೪. ಸಭ್ಯತೆಯ ಮುಖವಾಡ, ೫. ಕೋಮುವಾದವೊಂದೇ ಇಲ್ಲಿನ ಸಮಸ್ಯೆ ಎಂದು ಬಿಂಬಿಸುವ ಪರಿಸ್ಥಿತಿ. ಆದರೆ ಕೋಮುವಾದವೇ ಜನರ ಸಮಸ್ಯೆ ಅಲ್ಲ.
ಚರ್ಚ್ ನ ಮೂರ್ತಿಗಳನ್ನು ಒಡೆದು ಹಾಕಿದಾಗ ಫಾದರ್ ಒಡೆದ ಚೂರುಗಳನ್ನು ಆಯುತ್ತಿದಾಗ ಒಬ್ಬ ಹಿಂದೂ ಹೋಗಿ “ಅದನ್ನು ಬಿಟ್ಟು ಬಿಡಿ ಫಾದರ್. ನಮ್ಮ ದೇವರಿಗೆ ಮಾಡಿದ ಅನ್ಯಾಯಕ್ಕೆ ಸಾಕ್ಷಿಯಾಗಿ ಹಾಗೇ ಇರಲಿ ಬಿಡಿ”ಎಂದ. ಯಾರೋ ಇಬ್ರು ಮುಸ್ಲಿಂ ಹುಡುಗರು, ”ಹಿಂದೂಗಳು ನಮ್ಮ ವಿರೋಧಿಗಳು” ಎಂದರು ಎಂದು ಧರ್ಮಗುರು “ಸಾವಿರಾರು ವರ್ಷಗಳಿಂದ ನಾವು ಹಿಂದೂಗಳೊಂದಿಗೆ ಬದುಕುತ್ತಿದ್ದೇವೆ. ಅವರ ಬಗ್ಗೆ ಹೀಗೆಲ್ಲ ಹೇಳುವುದಾದರೆ, ನೀವು ಮಸೀದಿಗೆ ಬರುವುದೇ ಬೇಡ” ಎಂದು ಹೊರಗೆ ಹಾಕಿದರು. ನಂತರ ಒಬ್ಬ ಹಿಂದುವೇ ಧರ್ಮಗುರುಗಳನ್ನು ಸಮಾಧಾನ ಮಾಡಿದ್ದರು.
ಸಾಕಷ್ಟು ಹಿಂದೂಗಳು ಉಳ್ಳಾಲದ ದರ್ಗಾಕ್ಕೆ ನಡೆದುಕೊಳ್ಳುತ್ತಾರೆ. ಸಾರ್ವಜನಿಕ ಸತ್ಯನಾರಾಯಣ ಪೂಜೆಗಳಿಗೆಲ್ಲ ನಾನು ಹಣ ಕೊಡುವುದಿಲ್ಲ. ನಾನು ಹಸಿವು ಎಂದು ಬಂದರೆ, ಆರೋಗ್ಯ ಕೆಟ್ಟಿದೆ, ಮದ್ದಿಗೆ ದುಡ್ಡಿಲ್ಲ ಎಂದು ಬಂದರೆ, ಕಾಲೇಜಿಗೆ ಫೀಸ್ ಕಟ್ಟಲು ದುಡ್ಡಿಲ್ಲ ಎಂದು ಬಂದರೆ ಮಾತ್ರ ನನಗೆ ಸಾಧ್ಯವಾಗುವ ಸಹಾಯ ಮಾಡುವುದು. ಆದರೆ ಸಾಕಷ್ಟು ಮುಸ್ಲಿಂ, ಕ್ರೈಸ್ತರು ಸತ್ಯನಾರಾಯಣ ಪೂಜೆಗೆಲ್ಲ ಹಣ ಕೊಡುತ್ತಾರೆ. ಕೋಮುವಾದಕ್ಕಿಂತ ಕೋಮುವಾದವೊಂದೇ ತುಳುನಾಡಿನ ಸಮಸ್ಯೆ ಎಂದು ಬಿಂಬಿಸುವುದು ದೊಡ್ಡ ಸಮಸ್ಯೆ.
೬. ಅಭಿವ್ರದ್ಧಿಯ ಕುರಿತ ಯಾವ ವರದಿಗಳೂ ತುಳುನಾಡಿನ ಪರವಾಗಿಲ್ಲ. ಅಭಿವ್ರದ್ಧಿ ಹೊಂದಿದ ಪ್ರದೇಶವಾದ್ದರಿಂದ ಸರಕಾರ ಏನನ್ನೂ ಕೊಡಬೇಕಾಗಿಲ್ಲ ಎಂದೇ ಶಿಫಾರಸ್ಸು ಮಾಡಿವೆ. ನಮ್ಮ ಎಂ.ಎಲ್.ಎ ಗಳು ಸಿ.ಎಂ.ಹತ್ರ ಜಗಳವಾಡಿ ಒಂದಷ್ಟು ತಗೊಂಡು ಬರುವುದರಿಂದ ಕಿಂಚಿತ್ ಸಿಗ್ತಾ ಇದೆ ಅಷ್ಟೆ. ಹಿರಿಯ ತಲೆಮಾರಿನ ಎಂ.ಎಲ್.ಎ.ಗಳು ಹೊರಟು ಹೋದರೆ ನಂತರದವರಿಗೆ ಸಿ.ಎಂ.ಹತ್ರ ಜಗಳವಾಡುವ ಶಕ್ತಿಯೂ ಇರುವುದಿಲ್ಲ. ತುಳುನಾಡಿಗೆ ಅಭಿವ್ರದ್ಧಿಗೆ ದುಡ್ಡು ಬೇಡ, ಆದರೆ ಬಡವರ ಮೂಲ ಸೌಕರ್ಯಕ್ಕಾಗಿ ಮತ್ತು ಅಭಿವ್ರದ್ಧಿಯಿಂದ ಆಗಿರುವ ಡ್ಯಾಮೇಜನ್ನು ನಿಯಂತ್ರಿಸುವುದಕ್ಕಾಗಿ ಹಣ ಬೇಕಾಗಿದೆ.
೭. ತುಳು ನಾಡಿನ ಯುವಕ ಯುವತಿಯರು ಸರಕಾರಿ ಉದ್ಯೋಗದ ಬಗ್ಗೆ ಅನಾಸಕ್ತರು. ತಾವು ಯಾವ ಸಿದ್ಧತೆಯನ್ನೂ ಮಾಡದೆ ಎಕ್ಸಾಂ ಬರೀತಾರೆ. ಆಮೇಲೆ ಘಟ್ಟದವರೆಲ್ಲ ದುಡ್ಡು ಕೊಟ್ಟು ಬರ್ತಾರೆ ಎಂದು ಬೇಸ್ ಲೆಸ್ ಆರೋಪ ಮಾಡ್ತಾರೆ. ಉತ್ತರ ಕರ್ನಾಟಕದ ಹುಡುಗರು ತುಂಬ ಪರಿಶ್ರಮ ಪಡ್ತಾರೆ. ಆದ್ದರಿಂದ ಅವರು ಆಯ್ಕೆ ಆಗ್ತಾರೆ. ಅದು ತುಳುನಾಡಿನ ಹುಡುಗರಿಗೆ ಅರ್ಥ ಆಗ್ತಾ ಇಲ್ಲ. ಅದರಿಂದಾಗಿ ತುಳುನಾಡಿನಲ್ಲಿ ಸರಕಾರಿ ಇಲಾಖೆಯಲ್ಲಿ ಹತ್ತು ಶೇಕಡ ಕೂಡ ಸ್ಥಳೀಯರು ಇಲ್ಲ. ಐವತ್ತು ಶೇಕಡ ಆದರೂ ಸ್ಥಳೀಯರು ಇಲ್ಲದಿದ್ದರೆ ಇರುವವರಿಗೆ ಸ್ಥಳೀಯ ಬದ್ದತೆ ಇರುವುದಿಲ್ಲ. ಆಗ ಭ್ರಷ್ಠಾಚಾರ ಜಾಸ್ತಿಯಾಗ್ತದೆ.
೮. ಬ್ರಿಟಿಷ್ ಮದ್ರಾಸ್ ಸರಕಾರ ದಕ್ಷಿಣ ಕನ್ನಡದಲ್ಲಿ ರೂಪಿಸಿದ ವ್ಯವಸ್ಥಿತ ಶಿಕ್ಷಣ ಪದ್ಧತಿ ಇಂದು ಉಳಿದಿಲ್ಲ. ಆದರೆ ನಮ್ಮದೇ ಒಳ್ಳೆಯ ಶಿಕ್ಷಣ ಎಂಬ ಫಾಲ್ಸ್ ಪ್ರೆಸ್ಟೀಜ್ ತುಳುನಾಡಿನವರಿಗೆ ಹೋಗಿಲ್ಲ. ನನಗಿಂತಲೂ ಐದಾರು ವರ್ಷ ಹಿರಿಯರಾದ ಶಿಕ್ಷಕರು ರಿಟೈರ್ಡ್ ಆಗುವ ವರೆಗೆ ಇದು ಹೇಗೋ ನಡೆದುಕೊಂಡು ಹೋಗುತ್ತದೆ. ಆಮೇಲಿನ ಪರಿಸ್ಥಿತಿ ಏನು?
೯. ನಮ್ಮ ಬಹುತೇಕ ಯುವಕ ಯುವತಿಯರು, ಯುವ ಶಿಕ್ಷಕರು, ಪ್ರಾಧ್ಯಾಪಕರು ತುಳು ನಾಡಿನ ಸಮಸ್ಯೆ ಏನೆಂದು ಯೋಚಿಸಲಿಕ್ಕೇ ಸಿದ್ದರಿಲ್ಲದಿರುವುದೇ ದೊಡ್ಡ ಸಮಸ್ಯೆ. ಐಷಾರಾಮಿಯಾಗಿ ಬದುಕುವುದೇ ಧ್ಯೇಯವಾದರೆ ಇದು ಎಷ್ಟು ಕಾಲ ನಡೆದೀತು. ನನಗ್ಯಾಕೊ ಇವೆಲ್ಲ ತುಳು ನಾಡಿನ ಸಮಸ್ಯೆಗಳೆಂದು ಅನಿಸುತ್ತಿವೆ.

– ARAVINDA CHOKKADI

Leave a Reply

Your email address will not be published. Required fields are marked *