Realtime blog statisticsweb statistics
udupibits.in
Breaking News
# ಮಾಹಿತಿ ಹಕ್ಕು ಕಾಯ್ದೆ ಉಲ್ಲಂಘನೆ: ಉಡುಪಿ ಬಳಕೆದಾರರ ವೇದಿಕೆ ಸಂಚಾಲಕ ಕಡಿಯಾಳಿ ದಾಮೋದರ ಐತಾಳರಿಗೆ ಕರ್ನಾಟಕ ಮಾಹಿತಿ ಆಯೋಗದಿಂದ 5000 ರು. ದಂಡ

udupibits.in ವರದಿ ಬಳಿಕ ಸಿಎಂ ಪರಿಹಾರ ನಿಧಿಯಿಂದ ಹಣ ಬಿಡುಗಡೆ: ಬಿಜೆಪಿ ಸರಕಾರದ ಅವಧಿಯ ಲೋಪ ಸರಿಪಡಿಸಿದ ಕಾಂಗ್ರೆಸ್ ಸರಕಾರ !

ಉಡುಪಿ: ಕರುಳುಬೇನೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 75 ಸಾವಿರ ರು. ಬಿಡುಗಡೆಗೊಳಿಸುವುದಾಗಿ 2012ರಲ್ಲಿ ಪ್ರಕಟಿಸಿ ಬಳಿಕ ಮರೆತುಬಿಟ್ಟಿದ್ದ ರಾಜ್ಯ ಸರಕಾರ, ಇದೀಗ ನಾಲ್ಕೂವರೆ ವರ್ಷಗಳ ಬಳಿಕ ಹಣ ಬಿಡುಗಡೆಗೊಳಿಸಿದೆ.

ಕೆ.ರಘುಪತಿ ಭಟ್ ಅವರು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಅವಧಿಯಲ್ಲಿ, ಇವರ ಶಿಫಾರಸಿನಂತೆ ಹಣ ಬಿಡುಗಡೆ ಮಾಡುವುದಾಗಿ ಅಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳಾಗಿದ್ದ ಡಾ.ಎಚ್.ಆರ್.ಮಹಾದೇವ್ ಅವರು ಅಧಿಕೃತವಾಗಿ ತಿಳಿಸಿದ್ದರು.

ವರ್ಷ ನಾಲ್ಕೂವರೆ ಕಳೆದರೂ, ಮುಖ್ಯಮಂತ್ರಿ ಹರಿಹಾರ ನಿಧಿಯಿಂದ ಫಲಾನುಭವಿಗೆ ಹಣ ಬಿಡುಗಡೆಯಾಗಿಲ್ಲ. ಇಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂದು www.udupibits.in 2016ರ ಡಿ. 27ರಂದು ವಿಶೇಷ ವರದಿ ಪ್ರಕಟಿಸಿತ್ತು. ವರದಿ ಪ್ರಕಟವಾದ ಬಳಿಕ ಹಾಲಿ ಕಾಂಗ್ರೆಸ ಸರಕಾರದ ಅಧಿಕಾರಿಗಳು ಹಿಂದಿನ ಸರಕಾರದ ಅವಧಿಯಲ್ಲಿ ಅಂದಿನ ಅಧಿಕಾರಿಗಳ ಲೋಪದಿಂದಾಗಿ ನೆನೆಗುದಿಗೆ ಬಿದ್ದಿದ್ದ ಹಣ ಬಿಡುಗಡೆ ಪ್ರಕ್ರಿಯೆಗೆ ಚಾಲನೆ ನೀಡಿದ್ದು, ಇದೀಗ ಹಣ ಫಲಾನುಭವಿಗೆ ವಿತರಣೆಯಾಗಿದೆ.

ಹಾಲಿ ಕಾಂಗ್ರೆಸ್ ಸರಕಾರದಲ್ಲಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ (ಪರಿಹಾರ ನಿಧಿ ಶಾಖೆ)ಗಳಾದ ಪಿ.ಎ.ಗೋಪಾಲ್ ಅವರು ಇದೇ ಜನವರಿ 20ರಂದು ಮುಖ್ಯಮಂತ್ರಿ ಪರಿಹಾರ ನಿಧಿ ಮೊತ್ತವಾಗಿ 49,159 ರು. ಗಳನ್ನು ಬಿಡುಗಡೆಗೊಳಿಸಿದ್ದು, ಮೊತ್ತದ ಚೆಕ್ ನ್ನು ಫೆಬ್ರವರಿಯಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಮೋದ್ ಮಧ್ವರಾಜ್ ಅವರು ಫಲಾನುಭವಿ ಇಂದ್ರಾಳಿ ಬಳಿಯ ಮಂಚಿಕೋಡಿ ನಿವಾಸಿ ಶ್ರೀಧರ ಕುಲಾಲ್ ಇವರಿಗೆ ವಿತರಿಸಿದ್ದಾರೆ.

ಕುಲಾಲ್ ಅವರು 2012ರಲ್ಲಿ ಕರುಳುಬೇನೆ ಚಿಕಿತ್ಸೆಗಾಗಿ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆಗ ಶಾಸಕರಾಗಿದ್ದ ರಘುಪತಿ ಭಟ್ ಅವರ ಶಿಫಾರಸಿನ ಪ್ರಕಾರ, ಮುಖ್ಯಮಂತ್ರಿ ಪರಿಹಾರ ನಿಧಿಯಾಗಿ 75 ಸಾವಿರ ರು. ಬಿಡುಗಡೆಗೊಳಿಸುವುದಾಗಿ ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿಗಳು ಲಿಖಿತವಾಗಿಯೇ ತಿಳಿಸಿದ್ದರು. ಆದರೆ, ವರ್ಷ ನಾಲ್ಕೂವರೆ ಸಂದರೂ ಹಣ ಮಾತ್ರ ಬಿಡುಗಡೆಯಾಗಿರಲಿಲ್ಲ. ಫಲಾನುಭವಿ ಈ ಹಣದ ಆಸೆಯನ್ನೇ ಬಿಟ್ಟಿದ್ದರು.

ಆದರೆ, udupibits.in ನಲ್ಲಿ ಈ ಬಗ್ಗೆ ವರದಿ ಪ್ರಕಟವಾಗುತ್ತಲೇ ಎಚ್ಚೆತ್ತುಕೊಂಡ ಮುಖ್ಯಮಂತ್ರಿಗಳ ಕಚೇರಿ ಅಧಿಕೃತರು, ಮತ್ತಷ್ಟೂ ವಿಳಂಬ ಮಾಡದೆ ಕೂಡಲೇ ಹಣ ಬಿಡುಗಡೆಗೊಳಿಸುವ ಮೂಲಕ ಫಲಾನುಭವಿ ಶ್ರೀಧರ ಕುಲಾಲ್ ಸಮಾಧಾನದ ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ.

 

Leave a Reply

Your email address will not be published. Required fields are marked *