Realtime blog statisticsweb statistics
udupibits.in
Breaking News
ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ- ಶಂಕಿತ ಹಂತಕ ಬಿಜಾಪುರ ಸಿಂಧಗಿಯ ಪರಶುರಾಮ ವಾಗ್ಮೊರೆ ಬಂಧನ.

ಫೀಲಿಂಗ್ ಆಫ್ ಇನ್ ಸೆಕ್ಯುರಿಟಿ ಅಗತ್ಯವಿದೆಯಾ ?

# ಇಲ್ಲಿ ಬಲಪಂಥೀಯರೂ ಇಲ್ಲ, ಎಡಪಂಥೀಯರೂ ಇಲ್ಲ. ಬಲಪಂಥದ ವಿರೋಧಿಗಳು ಮತ್ತು ಎಡಪಂಥದ ವಿರೋಧಿಗಳು ಮಾತ್ರವಿದ್ದಾರೆ. ಅದ್ದರಿಂದ ತಪ್ಪುಗಳನ್ನು ಮಾತ್ರ ಚರ್ಚೆ ಮಾಡಲಾಗುತ್ತಿದೆ ಹೊರತು ಎಡಪಂಥ ಎಂದರೇನು, ಬಲಪಂಥ ಎಂದರೇನು ಎಂಬ ಅರಿವೇ ಬೆಳೆಯುವುದಿಲ್ಲ.

# ಸಕ್ಸಸ್ ಆಗುವುದು ಬೇರೆ. ಏನೇ ಆದರೂ ಸಕ್ಸಸ್ ಎಂದು ಹೇಳಿಕೊಳ್ಳುವುದು ಬೇರೆ. ಏನಾದರೂ ಮಾಡಿ ಸಕ್ಸಸ್ ಮಾಡಬೇಕೆಂಬ ಆಸೆ ಖಂಡಿತಾ ಇದೆ. ಆ ಮನಸ್ಸಿನ ಬಗ್ಗೆ ನನಗೆ ಗೌರವವಿದೆ. ಆದರೆ ಎಲ್ಲಿ ಹೋದರೂ ಸಕ್ಸಸ್ ಆಗುವುದಿಲ್ಲ. ಅಲ್ಲೆಲ್ಲೊ ರಾಷ್ಟ್ರಪತಿ ಆಡಳಿತ ಹಾಕಲು ಹೋದರೆ ಕೋರ್ಟ್ ಪ್ಲ್ಯಾನ್ ಅನ್ನು ಢಮಾರ್ ಮಾಡುತ್ತದೆ. ಸಿಕ್ಕ ಸಿಕ್ಕ ವಿದೇಶಕ್ಕೆಲ್ಲ ಹೋಗಿ ಶೋ ಕೊಟ್ಟರೂ ಹಣ ಬರುವುದಿಲ್ಲ. ಹಣವನ್ನು ಮುಟ್ಟಲು ಹೋದರೆ ಅದೂ ಕಚ್ಚಿಕೊಂಡಿತು. ಕಡೆಗೆ ಪನ್ನೀರ್ ಆದರೂ ಮಾಡೋಣವೆಂದರೆ ಅಲ್ಲಿಯೂ ತಣ್ಣೀರೇ. ಯಾಕೆ ಹೀಗೆ?

# ಒಂದು ಟಿವಿ ಯಲ್ಲಿ ಡಿಮಾನಿಟೈಸೇಷನ್ ನಿಂದ ಕಪ್ಪು ಹಣವನ್ನು ನಿಲ್ಸಕ್ಕಾಗಲ್ಲ. ನಾನು ಬೇಕಾದರೆ ಬಾಂಡ್ ಬರ್ಕೊಡ್ತೀನಿ ಅಂತಿದ್ರಪ್ಪ, ಏನೋ ಸಂಶೋಧನೆ ಮಾಡಿದವರ ಹಾಗೆ. ಆದರೆ ತಲೆಯೊಳಗೆ ಮೆದುಳಿರುವವರಿಗೆ ಆಸೆ ಎಂದಿನ ವರೆಗೆ ಇರ್ತದೊ ಅಂದಿನ ವರೆಗೆ ಸ್ವಲ್ಪ ತನಗಿರಲಿ ಎಂಬ ಭಾವದಿಂದ ಆಗುವ ಚಟುವಟಿಕೆಯನ್ನಾಗಲಿ, ಗಂಡು ಹೆಣ್ಣಿನ ಆಕರ್ಷಣೆಯನ್ನಾಗಲಿ ನಿಲ್ಲಿಸಲು ಸಾಧ್ಯವಿಲ್ಲ ಎಂದು ಗೊತ್ತಿರ್ತದೆ. ಇದಕ್ಜೆಲ್ಲ ಬಾಂಡ್ ಬರ್ಕೊಡೋದು ಯಾಕೆ ?

# ಇಷ್ಟೊಂದು ಫೀಲಿಂಗ್ ಆಫ್ ಇನ್ ಸೆಕ್ಯುರಿಟಿ ಅಗತ್ಯ ಉಂಟಾ ? ಇಸ್ರೋ ಉಪಗ್ರಹ ಉಡಾವಣೆಗೆ ಇಂದಿನ ಪ್ರಧಾನಿಯೆ ಕ್ರೆಡಿಟ್ ತಗೋಬೇಕೆಂದು ಕೆಲವರ ವಾದವಾದರೆ, ಅದರ ಕ್ರೆಡಿಟ್ ನೆಹರೂ ಮತ್ತು ಸಿಂಗ್ ಅವರಿಗೇ ಹೋಗಬೇಕು ಅಥವ ಅವರಿಗೂ ಸಿಗಬೇಕೆಂದು ಕೆಲವರ ವಾದ. ಇಸ್ರೋ ಸ್ಥಾಪನೆಯ ವಿಚಾರದಲ್ಲಿ ಸರಿ. ಕ್ರೆಡಿಟ್ ನೆಹರೂ ಮತ್ತು ವಿಕ್ರಂ ಸಾರಾಬಾಯಿ ಅವರಿಗೇ ಹೋಗಬೇಕು. ಇದು ಪ್ರತೀ ಬಾರಿ ಉಡ್ಡಯನ ಮಾಡಿದಾಗಲೂ ನೆಹರು ಇಲ್ಲದಿದ್ದರೆ ಇದಾಗುತ್ತಿರಲಿಲ್ಲ ಎಂದುಕೊಂಡೇ ಇರಬೇಕಾದಷ್ಟು ಫೀಲಿಂಗ್ ಆಫ್ ಇನ್ ಸೆಕ್ಯುರಿಟಿ ಅಗತ್ಯ ಇದೆಯಾ ? ಸಿಂಗ್ ಅವರಿಗೂ ಅಷ್ಟೆ. ಭಾರತವನ್ನು ವಿಶ್ವದ ಬಂಡವಾಳಶಾಹಿಗಳಿಗೆ ದೋಚಲು ತೆರೆದಿಟ್ಟು ಪ್ರತಿಯೊಬ್ಬನ ಕಿಸೆಯಲ್ಲೂ ಎಗ್ಗಿಲ್ಲದಂತೆ ಖರ್ಚು ಮಾಡಲು ಬೇಕಾದಷ್ಟು ಹಣ ತುಂಬಿದ ಕ್ರೆಡಿಟ್ಟು ಸಿಂಗ್ ಸಾಹೇಬರಿಗೇ ಹೋಗುತ್ತದೆ. ಹಾಗಿರುವಾಗ ಆದ ಎಲ್ಲದರಲ್ಲೂ ಸಿಂಗರಿಗೆ ಪಾಲು ಕೊಡಲೇಬೇಕಾದಷ್ಟು ಫೀಲಿಂಗ್ ಆಫ್ ಇನ್ ಸೆಕ್ಯುರಿಟಿ ಅಗತ್ಯವಿದೆಯಾ ? ಡಿಮಾನಿಟೈಸೇಷನ್ ಮಾಡಿ ಭ್ರಷ್ಠಾಚಾರವನ್ನು ದೇಶದಿಂದ ಮೂಲೋಚ್ಛಾಟನೆ ಮಾಡಿ ಬಡವರ ಮಬೆಯನ್ನು ಬೆಳಗಿದ ಕ್ರೆಡಿಟ್ ಅಂತೂ ಪ್ರಸ್ತುತ ಪ್ರಧಾನಿಯವರಿಗೆ ಸಿಕ್ಕೇ ಸಿಗುತ್ತದೆ. ಇಸ್ರೋ ಸ್ವಾಭಾವಿಕ ಪ್ರಕ್ರಿಯೆಯಲ್ಲಿ ಮಾಡಿದ ಯೋಜನೆಗೆ ಹಣ ಕೊಡುವುದಿಲ್ಲ ಎಂದು ಹೇಳಲಿಲ್ಲ ಎಂಬ ಕಾರಣಕ್ಕಾಗಿಯೇ ಎಲ್ಲ ಕ್ರೆಡಿಟ್ ಪ್ರಧಾನಿಯವರದೇ ಎಂದು ಹೇಳ್ತಾ ಓಡಾಡುವಷ್ಟು ಫೀಲಿಂಗ್ ಆಫ್ ಇನ್ ಸೆಕ್ಯುರಿಟಿ ಅಗತ್ಯವಿದೆಯಾ ?

# ಹಣವನ್ನು ಚಲಾವಣೆಗೆ ತರುವ ಪುರಾತನ ಪದ್ಧತಿ ಗೋಲ್ಡ್ ಸ್ಟಾಂಡರ್ಡ್. ಇದರಲ್ಲಿ ನೂರು ಕೋಟಿ ರೂಪಾಯಿ ಚಲಾವಣೆಗೆ ಬಂದರೆ ನೂರು ಕೋಟಿ ಮೌಲ್ಯದ ಚಿನ್ನ ರಕ್ಷಣಾ ನಿಧಿಯಾಗಿ ಇರುತ್ತದೆ. ಕರೆನ್ಸಿ ನೋಟಿಗೆ ಹಂಡ್ರಡ್ ಪರ್ಸಂಟ್ ಗೋಲ್ಡ್ ಬ್ಯಾಕ್ ಅಪ್ ಇರುವುದರಿಂದ ಕರೆನ್ಸಿ ನೋಟಿನ ಶಕ್ತಿ ಕುಗ್ಗುವುದೆ ಇಲ್ಲ.
ನಂತರ ಫಿಕ್ಸೆಡ್ ಫ್ಯುಡಿಷರಿ ಸಿಸ್ಟಮ್, ಆ ನಂತರ ಪ್ರಪೋರ್ಷನಲ್ ರಿಸರ್ವ್ ಸಿಸ್ಟಮ್ ಜಾರಿಗೆ ಬಂದಿತು. ಕಟ್ಟ ಕಡೆಗೆ ಬಂದದ್ದು ಮಿನಿಮಮ್ ರಿಸರ್ವ್ ಸಿಸ್ಟಮ್. ಭಾರತದ ರಿಸರ್ವ್ ಬ್ಯಾಂಕ್ ನೂರಾ ಹದಿನೈದು ಕೋಟಿ ರೂಪಾಯಿ ಮೊತ್ತದ ಚಿನ್ನ ಮತ್ತು ಎಂಬತ್ತೈದು ಕೋಟಿ ರೂಪಾಯಿ ಮೊತ್ತದ ಬಾಂಡುಗಳು, ಒಟ್ಟಾಗಿ ಇನ್ನೂರು ಕೋಟಿ ರೂಪಾಯಿ ಮೌಲ್ಯವನ್ನು ರಕ್ಷಣಾ ನಿಧಿಯಾಗಿ ಇರಿಸಿಕೊಂಡು ಎಷ್ಟು ಬೇಕಾದರೂ ನೋಟು ಪ್ರಿಂಟ್ ಮಾಡಬಹುದು ಎಂಬ ಪದ್ಧತಿಯನ್ನು ಅನುಸರಿಸುತ್ತದೆ. ಈ ಪದ್ಧತಿಯಲ್ಲಿ ರೂಪಾಯಿಗೆ ಬ್ಯಾಕ್ ಅಪ್ ಆಗಿ ಕೆಲಸ ಮಾಡುವುದು ಕಾನೂನು ಮಾತ್ರ. ಆರ್ಥಿಕ ಅರ್ಥದಲ್ಲಿ ದೇಶದಲ್ಲಿ ನಡೆಯುವ ಸರಕು ಮತ್ತು ಸೇವೆಗಳ ವಿನಿಮಯ ಮೌಲ್ಯವೇ ರೂಪಾಯಿಯ ನಿಜವಾದ ಶಕ್ತಿಯಾಗಿರುತ್ತದೆ. ಆದ್ದರಿಂದ ಯಾವುದೆ ಸರಕಾರ ಸರಕು ಮತ್ತು ಸೇವೆಗಳ ಉತ್ತೇಜನಕ್ಕೆ ಆದ್ಯತೆಯನ್ನು ಕೊಡಲೇ ಬೇಕಾಗುತ್ತದೆ. ಚಂದ್ರಶೇಖರ್ ಪ್ರಧಾನಿಯಾಗಿದ್ದಾಗ ಸರಕು ಮತ್ತು ಸೇವೆಗಳ ಮೌಲ್ಯ ದಯನೀಯ ಸ್ಥಿತಿಗೆ ತಲುಪಿದಾಗ ರಿಸರ್ವ್ ಬ್ಯಾಂಕ್ ಬಳಿ ಇದ್ದ ಇನ್ನೂರು ಕೋಟಿ ಭದ್ರತಾ ನಿಧಿಯನ್ನೇ ಇಂಗ್ಲಂಡ್ ನಲ್ಲಿ ಒತ್ತೆ ಇಟ್ಟು ಆರ್ಥಿಕತೆಗೆ ಚಾಲನೆ ಕೊಟ್ಟಿದ್ದರು. ಆಮೇಲೆ ಒತ್ತೆ ಇಟ್ಟ ಠೇವಣಿಯನ್ನು ಬಿಡಿಸಿಕೊಂಡು ಬಂದರು. ಡಿಮಾನಿಟೈಸೇಷನ್ ನ ಪರಿಣಾಮವಾಗಿ ಉತ್ಪಾದನಾ ಘಟಕಗಳು ಕುಸಿದಿವೆ. ಸರಕು ಮತ್ತು ಸೇವೆಗಳ ಮೌಲ್ಯ ಕುಸಿದಿದೆ. ಒಂದು ಟೆನ್ ಪರ್ಸಂಟ್ ನಷ್ಟು ಕುಸಿದರೆ ಅದು ತಾನೇ ತಾನಾಗಿ ರಿ ಬಿಲ್ಡ್ ಆಗುತ್ತದೆ. ಇಲ್ಲಿ ಭಾರತದ ಅತೀ ಮುಖ್ಯ ರಫ್ತು ಉದ್ಯಮವಾದ ಜವಳಿ ಉದ್ಯಮ ಸರಿ ಸುಮಾರು 42 ಶೇಕಡದಷ್ಟು ಕುಸಿದಿದೆ. ಎಲ್ಲವನ್ನೂ ಸರಾಸರಿ ಎಂದುಕೊಂಡರೆ ಇಕಾನಮಿ ಸುಮಾರು 30-35 ಶೇಕಡದಷ್ಟು ಕುಸಿದಿರಬಹುದು.ಇದನ್ನು ಪ್ರಜ್ಞಾ ಪೂರ್ವಕವಾಗಿ ರಿಬಿಲ್ಡ್ ಮಾಡಿಯೇ ಸರಿ ಮಾಡಬೇಕಷ್ಟೆ.ಸ್ನೇಹಿತರ ಬಳಿ ಈ ಮಾತು ಹೇಳಿದಾಗ,ಸರಕಾರಕ್ಕೆ ನಿನಗೆ ಗೊತ್ತಿರುವಷ್ಟೂ ಇಕನಾಮಿಕ್ಸ್ ಗೊತ್ತಿರುವುದಿಲ್ವ ಎಂದು ಉತ್ತರ ಬಂತು. ಇದ್ದರೂ ಇರಬಹುದು. ಸರಕಾರ ಏನಾದರೂ ಮಾಡುತ್ತಿರಬಹುದು ಎಂದುಕೊಂಡೆ. ಆದರೆ ರಿ ಬಿಲ್ಡ್ ಮಾಡುವ ಸ್ಟೆಪ್ ಗಳನ್ನು ಸರಕಾರ ತೆಗೆದುಕೊಂಡಿದ್ದರೆ ಸಾಂವಿಧಾನಿಕವಾಗಿ ಸಾರ್ವಜನಿಕ ಸಂಪತ್ತಿನ ಮಹಾನ್ ಸಂರಕ್ಷಕನಾಗಿರುವ ಲೋಕಸಭೆಗಂತೂ ಹಣಕಾಸು ಸಚಿವರು ಅಥವಾ ಪ್ರಧಾನಿ ವಿವರಣೆ ಕೊಡುತ್ತಾರೆ. ಆದರೆ ಲೋಕಸಭಾ ಅಧಿವೇಷನವನ್ನು ನೋಡಿದ ಮೇಲಂತೂ ಸರಕಾರ ಅಂತಹದೇನೋ ಸ್ಟೆಪ್ ತೆಗೆದುಕೊಂಡಿರುವ ಸಾಧ್ಯತೆಗಳು ಹೊಳೆಯಲಿಲ್ಲ (ನನಗೆ ಹೊಳೆಯಲೇ ಬೇಕಾಗೇನೂ ಇಲ್ಲ). ನಮ್ಮ ಸುಶಿಕ್ಷಿತರೋ, ರೈನ್ ಕೋಟಿನ ಸರಿ-ತಪ್ಪುಗಳ ಲೆಕ್ಕಾಚಾರದಲ್ಲೇ ಸಾರ್ವಜನಿಕ ಚರ್ಚೆಯನ್ನು ಮುನ್ನಡೆಸುತ್ತಿದ್ದಾರೆ…

# ಭಾರತದಲ್ಲಿ ಕೇವಲ ಒಂದು ಪಕ್ಷದಲ್ಲಿ ಮಾತ್ರ ಭ್ರಷ್ಠರಿದ್ದಾರೆ. ಆದರೆ ಈ ಪಕ್ಷದ ಯಾವ ನಾಯಕರ ಮೇಲೂ ಯಾವ ಕ್ರಮವೂ ಜರುಗುವುದಿಲ್ಲ- ಇಲ್ಲಿರುವ ಒಗಟೇನು ?

# ತಮಿಳುನಾಡು ರಾಜಕಾರಣ ತಮಾಷೆಯ ವಸ್ತುವಾಗಿದೆ. ಅಫಕೋರ್ಸ್ ಅಲ್ಲಿ ತಮಾಷೆ, ದುರಂತ, ದುರಾಸೆಗಳ ಅಟ್ಟಹಾಸವಿದೆ. ಆದರೆ ಒಂದು ದ್ರಾವಿಡ ಪಕ್ಷಕ್ಕೆ ಪರ್ಯಾಯವಾಗಿ ಒಂದು ರಾಷ್ಟ್ರೀಯ ಪಕ್ಷಕ್ಕೆ ನೆಲೆ ಸಿಕ್ಕಿದರೆ ಮತ್ತೊಂದು ದ್ರಾವಿಡ ಪಕ್ಷ ತಾನಾಗಿಯೇ ಹೊರಟು ಹೋಗಿತ್ತದೆ. ಆಮೇಲೆ ಹಿಂದಿ ಕಲ್ಚರ್ ನ ಆಕ್ರಮಣಕಾರಿತ್ವದಿಂದ ದಕ್ಷಿಣ ಭಾರತಕ್ಕೆ ರಕ್ಷಣೆ ಇರುವುದಿಲ್ಲ. ಕನ್ನಡದಲ್ಲಿ ವಿಪರೀತ ಬಳಕೆಗೆ ಬಂದಿರುವ ಪದವನ್ನು ಗಮನಿಸಿ. ಗೌರವಪೂರ್ವಕವಾಗಿ ಕನ್ನಡದಲ್ಲಿ ‘ಅವರು’ ಎನ್ನುತ್ತೇವೆ ಹೊರತು ‘ಜೀ’ ಅಲ್ಲ. ಹದಿನೈದು ವರ್ಷಕ್ಕೆ ಹಿಂದೆ ಗಾಂಧಿ ಮಾತ್ರ ಕನ್ನಡಕ್ಕೆ ‘ಜೀ’ ಆಗಿದ್ದರು. ಈಗ ಗ್ರಾಮ ಪಂಚಾಯತ್ ಮೆಂಬರ್ ಕೂಡ ‘ಜೀ’ ಆಗಿದ್ದಾನೆ. ಹಿಂದಿಯ
…ಜೀ.. ಗಳನ್ನು ಕನ್ನಡಕ್ಕೆ ತಂದವರಾರು ?

# ಅಲ್ಲಾವುದ್ದೀನ್ ಖಿಲ್ಜಿ ಹಿಂದೂ ಆಗಿ ಹುಟ್ಟಿದ್ದಕ್ಕಾಗಿ ಟ್ಯಾಕ್ಸ್ ಹಾಕಿದ್ದ. ಅಕ್ಬರ್ ಅದನ್ನು ತೆಗೆದ. ಔರಂಗಜೇಬ್ ಪುನಃ ಹಾಕಿದ. ನಂತರ ಎರಡನೆ ಅಕ್ಬರನ ಕಾಲದಲ್ಲಿ ಮರಾಠರು ಮೊಘಲರನ್ನು ನಿಯಂತ್ರಿಸಿದ ಮೇಲೆ ಅದು ಶಾಶ್ವತವಾಗಿ ರದ್ದಾಯಿತು. ಈಗ ನಾವು ಸ್ವಲ್ಪ ಬದಲಾವಣೆ ಮಾಡಿಕೊಂಡು, ಭಾರತೀಯನಾಗಿ ಹುಟ್ಟಿದ್ದಕ್ಕಾಗಿ ಒಂದು ಟ್ಯಾಕ್ಸ್ ಎಂದು ಮಾಡಿದರೆ ಹೇಗೆ ?

  • ಅರವಿಂದ ಚೊಕ್ಕಾಡಿ

Leave a Reply

Your email address will not be published. Required fields are marked *