Realtime blog statisticsweb statistics
udupibits.in
Breaking News
# ದೂರು ನೀಡಿ ವರ್ಷಗಳೇ ಕಳೆದರೂ, ಆರಂಭವಾಗದ ವಿಚಾರಣೆ: ಕರ್ನಾಟಕ ಮಾಹಿತಿ ಆಯೋಗದ ನಿಧಾನಗತಿ ವಿರುದ್ಧ RTI ಕಾರ್ಯಕರ್ತ ಶ್ರೀರಾಮ ದಿವಾಣರಿಂದ ಮುಖ್ಯ ಮಾಹಿತಿ ಆಯುಕ್ತರಿಗೆ ದೂರು.

ಪರ್ಕಳ ಹೈಸ್ಕೂಲ್ ಪಿ.ಟಿ.ಮಾಸ್ಟರ್ ನಿಂದ ಮಕ್ಕಳ ದೌರ್ಜನ್ಯ

ಉಡುಪಿ: ಉಡುಪಿ ತಾಲೂಕು ಪರ್ಕಳದಲ್ಲಿರುವ ಬಿ.ಎಂ.ಹೈಸ್ಕೂಲಿನ ದೈಹಿಕ ಶಿಕ್ಷಣ ಶಿಕ್ಷಕರಾದ ನಾರಾಯಣ ಎಂಬವರು ವಿದ್ಯಾರ್ಥಿ- ವಿದ್ಯಾರ್ಥಿನಿಯರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುತ್ತಾರೆ ಎಂಬ ಆರೋಪ ಕೇಳಿಬಂದಿದೆ.

ವಾರದ ಹಿಂದೆ ಹತ್ತನೇ ತರಗತಿ ವಿದ್ಯಾರ್ಥಿ ನಿಖಿಲ್ ಎಂಬಾತನ ಮೇಲೆ ಬಾಸುಂಡೆ ಬರುವಂತೆ ಹೊಡೆದು ಗಂಭೀರ ದೌರ್ಜನ್ಯ ನಡೆಸಿದ್ದು, ಹಲ್ಲೆಯಿಂದಾಗಿ ಆದ ಗಾಯದ ಸಹಿತ ವಿದ್ಯಾರ್ಥಿಯ ಚಿತ್ರ ಕೆಲವರ ವಾಟ್ಸಾಪ್ ನಲ್ಲಿ ಹರಿದಾಡಿದ ವಿದ್ಯಾಮಾನ ನಡೆದಿದೆ.

ಈ ಬೆಳವಣಿಗೆಯಿಂದ ವಿಚಲಿತರಾದ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಯವರ ಮನೆಯವರನ್ನು ಶಾಲೆಗೆ ಕರೆಸಿ, ಬೆದರಿಕೆ ಹಾಕಿ ಬಳಿಕ ತಮಗೆ ಬೇಕಾದಂತೆ ಬಿಳಿ ಕಾಗದದಲ್ಲಿ ಬರೆಸಿಕೊಂಡು ಸಹಿ ಹಾಕಿಸಿಕೊಂಡ ಘಟನೆ ನಡೆದಿದೆ. ವಿಷಯವನ್ನು ದೊಡ್ಡದು ಮಾಡಿದ್ದೇ ಆದಲ್ಲಿ ವಿದ್ಯಾರ್ಥಿಯ ವರ್ಗಾವಣೆ ಪತ್ರ (ಟಿ.ಸಿ)ದಲ್ಲಿ ವಿದ್ಯಾರ್ಥಿಯ ಗುಣ ನಡತೆ ಬಗ್ಗೆ ನಕಾರಾತ್ಮಕ ಅಭಿಪ್ರಾಯ ಬರೆಯುವುದಾಗಿಯೂ, ಹೀಗೆ ಬರೆದುದೇ ಆದಲ್ಲಿ ವಿದ್ಯಾರ್ಥಿಗೆ ಮುಂದೆ ಕಲಿಯಲು ಮತ್ತು ಉದ್ಯೋಗಕ್ಕೆ ಭಾರೀ ಸಮಸ್ಯೆಯಾಗಲಿದೆ ಎಂದು ಬೆದರಿಕೆ ಒಡ್ಡಿದ ಮುಖ್ಯೋಪಾಧ್ಯಾಯರು, ಬಳಿಕ ತಮಗೆ ಬೇಕಾದಂತೆ ಹೇಳಿಕೆಯನ್ನು ಬರೆಸಿಕೊಂಡು ನಿಖಿಲ್ ನ ಮನೆಯವರಿಂದ ಆ ಕಾಗದಕ್ಕೆ ಸಹಿ ಹಾಕಿಸಿಕೊಂಡು ಕಳಿಸಿಕೊಟ್ಟರು ಎಂದು ತಿಳಿದುಬಂದಿದೆ.

ಬಾಸೆಲ್ ಮಿಷನ್ ಹೈಸ್ಕೂಲ್ ನ ಪಿ.ಟಿ. ಮಾಸ್ಟರ್ ಬ್ರಹ್ಮಾವರದ ನಾರಾಯಣರಿಗೆ ಮಕ್ಕಳ ಮೇಲೆ ಕೈ ಮಾಡುವುದು ಒಂದು ಹವ್ಯಾಸದಂತಾಗಿದೆ ಎಂದು ಮಕ್ಕಳು ಹಾಗೂ ಪೋಷಕರು ದೂರಿಕೊಂಡಿದ್ದಾರೆ. ನಿಖಿಲ್ ಮೇಲೆ ಕೈ ಮಾಡಿದಂತೆಯೇ ಅದಕ್ಕೂ ಮೊದಲು ಜನವರಿಯಲ್ಲಿ ವಿದ್ಯಾರ್ಥಿನಿಯೊಬ್ಬಳ ಮೇಲೆಯೇ ನಾರಾಯಣ ಅವರು ಹಲ್ಲೆ ನಡೆಸಿದ್ದರು ಎಂದು ಹೇಳಲಾಗಿದೆ.

ನಿಖಿಲ್, ಬಣ್ಣ ಬಳಿದುಕೊಂಡು ಗಾಯವಾದಂತೆ ಮಾಡಿದ್ದಾನೆ. ಅದನ್ನು ವಾಟ್ಸಾಪ್ ಗೆ ಹಾಕಿದ್ದು, ಹೀಗೆ ಮಾಡಿದ್ದಕ್ಕೆ ಕ್ಷಮೆ ಯಾಚಿಸುತ್ತಿರುವುದಾಗಿ ಕಾಗದದಲ್ಲಿ ಬರೆದ ಮುಖ್ಯೋಪಾಧ್ಯಾಯರು, ಇದಕ್ಕೆ ನಿಖಿಲ್ ನ ಮನೆಯವರಿಂದ ಸಹಿ ಹಾಕಿಸಿಕೊಂಡಿರುವುದಾಗಿ ತಿಳಿದುಬಂದಿದೆ.

ಘಟನೆ, ಬಾಸೆಲ್ ಮಿಷನ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಯ ಕಚೇರಿಯ ವರೆಗೂ ತಲುಪಿ, ಅಲ್ಲಿಂದಲೂ ವಿದ್ಯಾರ್ಥಿಯ ಮನೆಯವರನ್ನು ಕರೆಸಿಕೊಂಡು ವಿಚಾರಣೆ ಮಾಡಿದ್ದು, ಪಿ.ಟಿ. ಮಾಸ್ಟರ್ ನಾರಾಯಣರಿಗೆ ಮೌಖಿಕಿವಾಗಿ ಎಚ್ಚರಿಕೆ ನೀಡಿ ಪ್ರಕರಣವನ್ನು ಅಲ್ಲಿಗೆ ಮುಕ್ತಾಯಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಮಕ್ಕಳ ಮೇಲೆ ಹಲ್ಲೆ ನಡೆಸುವುದು ನಾರಾಯಣರಿಗೆ ಒಂದು ಚಟವಾಗಿದೆ, ಶಾಲಾ ಮುಖ್ಯೋಪಾಧ್ಯಾಯರು ಈ ಶಿಕ್ಷಕರಿಗೆ ರಕ್ಷಣೆಯಾಗಿ ನಿಂತಿದ್ದಾರೆ, ಆದುದರಿಂದ, ಇವರುಗಳು ಮುಂದಿನ ದಿನಗಳಲ್ಲಿ ಈ ಮಕ್ಕಳ ಮೇಲೆ ಹಗೆ ಸಾಧಿಸುವ ಸಾಧ್ಯತೆ ಇರುವುದರಿಂದ, ಮಕ್ಕಳ ಭವಿಷ್ಯದ ಹಿತದೃಷ್ಠಿಯಿಂದ ದೈಹಿಕ ಶಿಕ್ಷಣ ಶಿಕ್ಷಕರಾದ ನಾರಾಯಣ ಹಾಗೂ ಮುಖ್ಯೋಪಾಧ್ಯಾಯರನ್ನು ಬಿ.ಎಂ.ಶಾಲೆಯಿಂದ ವರ್ಗಾಯಿಸಬೇಕು ಎಂದು ಪೋಷಕರು ಹಾಗೂ ಪರ್ಕಳ ಸುತ್ತಮುತ್ತಲಿನ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ

Leave a Reply

Your email address will not be published. Required fields are marked *