Realtime blog statisticsweb statistics
udupibits.in
Breaking News
ಉಡುಪಿ: ಆಮಂತ್ರಣ ಮತ್ತು ಪತ್ರ ವ್ಯವಹಾರಗಳಲ್ಲಿ ‘ಪ್ರಭಾರ ಪ್ರಾಂಶುಪಾಲರು’ ಎಂದು ಬರೆಯಲು ಮೂಡುಬೆಳ್ಳೆ ಸಂತ ಲಾರೆನ್ಸ್ ಪದವಿಪೂರ್ವ ಕಾಲೇಜು ಪ್ರಭಾರ ಪ್ರಾಂಶುಪಾಲರಿಗೆ ಇಲಾಖಾ ಉಪನಿರ್ದೇಶಕರಿಂದ ಆದೇಶ

ಬಳಕೆದಾರರ ವೇದಿಕೆ ಸಂಚಾಲಕ ದಾಮೋದರ ಐತಾಳ್ ಅಕ್ರಮಗಳು ಬಯಲು

ಉಡುಪಿ: ಉಡುಪಿ ಬಳಕೆದಾರರ ವೇದಿಕೆಯ ಸಂಚಾಲಕರೂ, ನಿವೃತ್ತ ಶಿಕ್ಷಕರೂ ಆದ ಕೆ.ದಾಮೋದರ ಐತಾಳ ಅವರು ಕಡಿಯಾಳಿ ಶ್ರೀ ಮಹಿಷಮರ್ದಿನೀ ದೇವಸ್ಥಾನಕ್ಕೆ ಸೇರಿದ ಭೂಮಿಯಲ್ಲಿ ಮನೆ ಕಟ್ಟಿ ವಾಸವಿದ್ದು, ಮನೆಗೆ ತಾಗಿಕೊಂಡೇ ನಿರ್ಮಿಸಿದ್ದ ಕಟ್ಟಡವನ್ನು ದೇವಸ್ಥಾನದಿಂದ ನಿರಪೇಕ್ಷಣಾ ಪತ್ರ ಪಡೆದುಕೊಳ್ಳದೆ ವಾಣೀಜ್ಯ ಉದ್ಧೇಶಕ್ಕೆ ಬಾಡಿಗೆ ನೀಡಿ ಅಕ್ರಮವಾಗಿ ಲಾಭ ಮಾಡಿಕೊಳ್ಳುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಉಡುಪಿ- ಮಣಿಪಾಲ ಹೆದ್ದಾರಿಯ ಕಡಿಯಾಳಿ ಬಸ್ ನಿಲ್ದಾಣದಿಂದ ದೇವಸ್ಥಾನಕ್ಕೆ ಹಾದುಹೋಗುವ ರಸ್ತೆಯಲ್ಲಿ ದೇವಸ್ಥಾನದ ಪಕ್ಕವೇ ರ್ಸತೆಯಿಂದ ಪೂರ್ವ ದಿಕ್ಕಿನಲ್ಲಿ ಕಡಿಯಾಳಿ ದಾಮೋದರ ಐತಾಳರವರ ಮನೆಯಿದೆ. ಈ ಮನೆಗೆ ಹೊಂದಿಕೊಂಡೇ ಇರುವ ಕಟ್ಟಡವನ್ನು ಕಳೆದ ಹಲವು ವರ್ಷಗಳ ಹಿಂದೆಯೇ ಐತಾಳರು ಬಾಡಿಗೆ ನೀಡಿದ್ದು, ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಯವರು ದಾಮೋದರ ಐತಾಳರಿಗೆ ನೋಟೀಸ್ ನೀಡಿದ್ದಾರೆ.

ದೇವಸ್ಥಾನದ ನಿರಪೇಕ್ಷಣಾ ಪತ್ರ ಪಡೆದುಕೊಳ್ಳದೆ ಕಟ್ಟಡವನ್ನು ಅನಧಿಕೃತವಾಗಿ ಬಾಡಿಗೆ ನೀಡಿದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಲಾಗಿದ್ದು, ಸೂಕ್ತ ಕ್ರಮದ ಎಚ್ಚರಿಕೆ ನೀಡಲಾಗಿದೆ. ದೇವಸ್ಥಾನದಿಂದ ನಿರಪೇಕ್ಷಣಾ ಪತ್ರ ಪಡೆದುಕೊಳ್ಳುವುದು ಅಥವಾ ಬಾಡಿಗೆ ತೆರವುಗೊಳಿಸುವಂತೆ ಐತಾಳರಿಗೆ ಸೂಚಿಸಲಾಗಿದೆ ಎಂದು ತಿಳಿದುಬಂದಿದೆ.

ಬಳಕೆದಾರರ ವೇದಿಕೆಯ ಸಂಚಾಲಕರಾಗಿ ಸಾರ್ವಜನಿಕರಿಗೆ ಉಪದೇಶ ನೀಡುವ ದಾಮೋದರ ಐತಾಳರು, ದೇವಸ್ಥಾನ ರಸ್ತೆಯಲ್ಲಿಯೇ ತಮ್ಮ ವಾಹನವನ್ನು ನಿಲ್ಲಿಸಿ ವಾಹನ ತೊಳೆಯುವ ಕೆಲಸ ಮಾಡುವ ಮೂಲಕ ರಸ್ತೆ ಬಳಕೆದಾರರಿಗೆ ತೊಂದರೆಯನ್ನುಂಟುಮಾಡುತ್ತಾರೆ.

ಮಾಹಿತಿ ಹಕ್ಕು ಅಧಿನಿಯಮದ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಕಾಯ್ದೆಯ ಬಗ್ಗೆ ನಾಗರಿಕರಿಗೆ ತಿಳುವಳಿಕೆ ಕೊಡುವ ಕ.ದಾ.ಐತಾಳರು, ಯಾರಾದರೂ ಮಾಹಿತಿ ಕೋರಿ ಬಳಕೆದಾರರ ವೇದಿಕೆಗೆ ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದಲ್ಲಿ ಕನಿಷ್ಟ ಮಾಹಿತಿಯನ್ನೂ ನೀಡದೆ ಕಾಯ್ದೆಯನ್ನು ಸರಾಸಗಟು ಕಾಯ್ದೆಯನ್ನು ಉಲ್ಲಂಘಿಸುತ್ತಾರೆ. ಕಾಯ್ದೆ ಉಲ್ಲಂಘಿಸಿದ ಕಾರಣಕ್ಕೆ ದಂಡ ಪಾವತಿಸಲು ಕರ್ನಾಟಕ ಮಾಹಿತಿ ಆಯೋಗ ಆದೇಶ ಮಾಡಿದ್ದರೂ, ದಂಡ ಪಾವತಿಸದೆ ಉದ್ಧಟತನ ಪ್ರದರ್ಶಿಸುತ್ತಾರೆ.

ಇವರ ಇಂಥ ಬಾನಗಡಿಗಳ ವಿರುದ್ಧ ಈಗಾಗಲೇ ವಿವಿಧ ಇಲಾಖೆಗಳಿಗೆ ದೂರುಗಳು ಸಲ್ಲಿಸಕೆಯಾಗಿವೆ.

 

 

Leave a Reply

Your email address will not be published. Required fields are marked *