Realtime blog statisticsweb statistics
udupibits.in
Breaking News
ಉಡುಪಿ: ಮೂಡುಬೆಳ್ಳೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಕಾಪು ತಾಲೂಕಿಗೆ ಸೇರಿಸಿದ್ದು ಖಂಡನೀಯ, ಉಡುಪಿ ತಾಲೂಕಿಗೆ ಸೇರಿಸುವುದು ಮಾತ್ರ ಸರಿಯಾದ ಕ್ರಮ- ರಾಜೇಂದ್ರ ಶೆಟ್ಟಿ, ಸುಧಾಕರ ಪೂಜಾರಿ, ಅಶ್ವಿನ್ ಲಾರೆನ್ಸ್, ಶ್ರೀರಾಮ ದಿವಾಣ ಜಂಟೀ ಹೇಳಿಕೆ.

ಬುದ್ಧಿ ಇದ್ದವನಿಗೆ ಎಲ್ಲವೂ ಅರ್ಥವಾಗುತ್ತದೆ !

# ದಕ್ಷಿಣ ಕನ್ನಡದಲ್ಲಿ ಸೌಹಾರ್ದತೆಯ ಕಾರ್ಯಕ್ರಮ ಮಾಡುತ್ತಿದ್ದಾರೆ, ಸಂತೋಷ. ಪ್ರತಿಭಟನೆಯೂ ಪ್ರಾರಂಭವಾಗಿದೆ. ಆಯಾ ಟ್ರೂಪ್ ಗಳು ತಮ್ಮ ತಮ್ಮ ವಾದಗಳನ್ನು ಮುಂದಿಡುತ್ತಿವೆ. ನನ್ನ ಅನಿಸಿಕೆಗಳು ಇಷ್ಟೆ:

೧. ಕೇವಲ ಒಂದು ರಾಜಕೀಯ ಪಕ್ಷವನ್ನು ಮಾತ್ರ ಕೋಮುವಾದಿ ಎಂದು ಭಾವಿಸಿ ಪ್ರತಿಸ್ಪರ್ಧಿ ಎಂದು ಸೌಹಾರ್ದತೆಯವರು ತೆಗೆದುಕೊಂಡರೆ ಅದನ್ನು ಸಮಂಜಸ ಎಂದು ನಾನು ಭಾವಿಸುವುದಿಲ್ಲ.

೨. ಅಲ್ಪಸಂಖ್ಯಾತರೆಲ್ಲರೂ ಮುಗ್ಧರೆಂದು ಭಾವಿಸಲು ಆಗುವುದಿಲ್ಲ. ಅಲ್ಲಿಯೂ ಫೆನಟಿಸಂ ಇದೆ. ಹೇಗೆ ಬಹುಸಂಖ್ಯಾತ ಫೆನೆಟಿಕ್ ಗಳನ್ನು ಸೌಹಾರ್ದತೆಯವರು ಎಂಬ ವ್ಯಾಪ್ತಿಗೆ ತರಲು ಆಗುವುದಿಲ್ಲವೋ, ಅದೇ ರೀತಿ ಅಲ್ಪಸಂಖ್ಯಾತರಲ್ಲಿರುವ ಫೆನೆಟಿಕ್ ಗಳನ್ನೂ ಸೌಹಾರ್ದತೆಯವರು ಎಂಬ ವ್ಯಾಪ್ತಿಗೆ ತರಲು ಆಗುವುದಿಲ್ಲ.

೩. ಹಿಂದುತ್ವವಾದವನ್ನು ಟೀಕಿಸುವುದು ಎನ್ನುವುದು ಹಿಂದೂಗಳನ್ನು ಟೀಕಿಸುವ ಪ್ರಕ್ರಿಯೆಯಾಗುವುದರ ಪರಿಣಾಮ ಈಗಾಗಲೇ ಗೊತ್ತಿದೆ. ಮತ್ತೆ ಅದೇ ತಪ್ಪು ಆಗದಿರಲಿ.

 

# ಅಹಯ್ಯ ಆ ಒಂದು ಡೈರಿಯನ್ನಿಟ್ಕೊಂಡು ಚಾನೆಲ್ ಗಳು ಜಗಿಯುತ್ತವೆಯೋ ಜಗಿಯುತ್ತವೆ. ನಾನು ಎಲೆ ಅಡಿಕೆಯನ್ನು ಕೂಡ ಅಷ್ಟು ಜಗಿಯುವುದಿಲ್ಲ. ಏನಾಗಿರ್ತದೆ ಎಂದು ಎಲ್ಲರಿಗೂ ಗೊತ್ತಿದೆ. ಏನನ್ನೂ ಮಾಡ್ಲಿಕೆ ಇಲ್ಲದ ಅಷ್ಟು ರಾಶಿ ಕಟ್ಟಡಗಳನ್ನು ಪಾಳು ಬಿಡುವುದಕ್ಕಾಗಿಯೇ ಕಟ್ಟಲು ಉತ್ಸಾಹ ತೋರುವಾಗ, ಜನರೇ ಒಡಾಡದಿರುವಲ್ಲಿ ಬ್ರಿಜ್ ಕಟ್ಟಲು ತಿಪ್ಪರಲಾಗ ಹಾಕುವಾಗಲೇ ಬುದ್ಧಿ ಇದ್ದವನಿಗೆ ಎಲ್ಲವೂ ಅರ್ಥವಾಗುತ್ತದೆ. ಅದಕ್ಕೆ ಇಷ್ಟೆಲ್ಲ ಡಿಬೇಟ್ ಬೇಕಾ ?

ನೆಹರೂ ಕಾರಿಗೆ ಪೆಟ್ರೊಲ್ ಹಾಕಿದ್ದು ಲೆಕ್ಕಕ್ಕಿಂತ ಜಾಸ್ತಿಯಾಗಿದೆ ಎಂದು ಲೋಹಿಯಾ ಗಲಾಟೆ ಮಾಡುತ್ತಿದ್ದ ಕಾಲವೊಂದಿತ್ತು. ಆದರೆ ಇದರ ಬಗ್ಗೆ ಯೋಚಿಸಲು ಸಾಧ್ಯವಾಗುವುದು ನಾವೆಷ್ಟೆ ಬಡವರಾಗಿದ್ದರೂ ನಮ್ಮ ಪಾಡಿಗೆ ನಾವು ಬದುಕಲು ಅವಕಾಶವಿದ್ದಾಗ. ನಾನು ಹೆಚ್ಚು ಕಷ್ಟ ಪಟ್ಟು ದುಡಿದರೆ ನನಗೆ ಸ್ವಲ್ಪ ಸಂಪಾದನೆ ಆಗುತ್ತದೆ ಎಂದು ನಾನು ನಂಬಲು ಸಾಧ್ಯವಿದ್ದಾಗ ಇದೆಲ್ಲ ಮುಖ್ಯವಾಗುತ್ತದೆ.

ನಾನು ಸಂಪಾದಿಸಿದ್ದರಲ್ಲಿ ಯಾವಾಗ ಎಷ್ಟನ್ನು ಯಾವ ರೂಪದಲ್ಲಿ ಕಿತ್ತುಕೊಳ್ಳುತ್ತಾರೋ ಎಂಬ ಆತಂಕದಲ್ಲಿ ನಾನು ಮಾಡಿದ ಕೆಲಸದ ಫಲವೇ ನನಗೆ ಸಿಗುತ್ತದೊ ಇಲ್ಲವೊ ಎಂಬ ಅನುಮಾದಲ್ಲಿ ನಾನೇಕೆ ಕೆಲಸ ಮಾಡಬೇಕು ಎಂಬ ಸ್ಥಿತಿಯಲ್ಲಿರುವಾಗ, ಈ ಯಾವುದರ ಬಗ್ಗೆಯೂ ನನ್ನಂಥ ಸಾಮಾನ್ಯರು ತಲೆಕೆಡಿಸಿಕೊಳ್ಳಲು ಪುರುಸೊತ್ತಿರುವುದಿಲ್ಲ. ನನ್ನಂಥವರಿಗೀಗ ಬೇಕಿರುವುದು ಈ ದೇಶದಲ್ಲಿ ಈ ರೀತಿಯ ವ್ಯವಸ್ಥೆ ಇರುತ್ತದೆ. ಈ ಚೌಕಟ್ಟಿನಲ್ಲಿ ನೀನು ಏನಾದ್ರು ಮಾಡ್ಕೊಳಪ್ಪ ಎಂದು ಭರವಸೆ ಕೊಡುವ ಆಡಳಿತ. ಆಮೇಲೆ ಉಳಿದದ್ದನ್ನು ಯೋಚಿಸೋಣ.

– ARAVINDA CHOKKADI

 

Leave a Reply

Your email address will not be published. Required fields are marked *