Realtime blog statisticsweb statistics
udupibits.in
Breaking News
# ದೂರು ನೀಡಿ ವರ್ಷಗಳೇ ಕಳೆದರೂ, ಆರಂಭವಾಗದ ವಿಚಾರಣೆ: ಕರ್ನಾಟಕ ಮಾಹಿತಿ ಆಯೋಗದ ನಿಧಾನಗತಿ ವಿರುದ್ಧ RTI ಕಾರ್ಯಕರ್ತ ಶ್ರೀರಾಮ ದಿವಾಣರಿಂದ ಮುಖ್ಯ ಮಾಹಿತಿ ಆಯುಕ್ತರಿಗೆ ದೂರು.

ಕಡಿಯಾಳಿ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಶ್ರೀನಿವಾಸ ಹೆಬ್ಬಾರ್

ಉಡುಪಿ: ಕಡಿಯಾಳಿ ಶ್ರೀ ಮಹಿಷಮರ್ಧಿನೀ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತರೂ, ಕಡಿಯಾಳಿ ಯುವಕ ಮಂಡಲದ ಅಧ್ಯಕ್ಷರೂ ಆದ ಶ್ರೀನಿವಾಸ ಹೆಬ್ಬಾರ್ ಆಯ್ಕೆಯಾಗಿದ್ದಾರೆ.

ಫೆಬ್ರವರಿ 27ರಂದು ನಡೆದ ವ್ಯವಸ್ಥಾಪನಾ ಸಮಿತಿ ಸಭೆಯಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು. ದೇವಸ್ಥಾನದ ಆಡಳಿತಾಧಿಕಾರಿ ಅರುಣ್ ಪ್ರಭಾ ಹಾಗೂ ಕಾರ್ಯನಿರ್ವಹಣಾಧಿಕಾರಿ ವೆಂಕಟರಮಣಯ್ಯ ಉಪಸ್ಥಿತರಿದ್ದರು.

ಶ್ರೀ ಕ್ಷೇತ್ರದ ಪ್ರಧಾನ ಅರ್ಚಕರಾದ ಕೆ.ಗೋಪಾಲಕೃಷ್ಣ ಉಪಾಧ್ಯ, ಗಿರೀಶ ನಾಯ್ಕ ದೊಡ್ಡಣಗುಡ್ಡೆ, ಆಶಾ ಶ್ರೀನಿವಾಸ ಕಡಿಯಾಳಿ, ಸಹನಾ ಎಲ್. ಭಟ್ ಕುಂಜಿಬೆಟ್ಟು, ಶ್ರೀನಿವಾಸ ರಾವ್ ಕಡಿಯಾಳಿ, ಕೆ.ಬೋಜ ಸೇರಿಗಾರ್ ಕಟ್ಟೆಆಚಾರ್ಯ ಮಾರ್ಗ, ಶಿವಕುಮಾರ ದೇವಾಡಿಗ ಕಾತ್ಯಾಯಿನಿ ನಗರ ಹಾಗೂ ಸದಾಶಿವ ದೂಮಣ್ಣ ಶೆಟ್ಟಿ ಪುತ್ತೂರು ಇವರು ವ್ಯವಸ್ಥಾಪನಾ ಸಮಿತಿ ಸದಸ್ಯರಾಗಿದ್ದಾರೆ.

Leave a Reply

Your email address will not be published. Required fields are marked *