Realtime blog statisticsweb statistics
udupibits.in
Breaking News
ಉಡುಪಿ: ಬೈಲೂರು ನಿವಾಸಿ, ಮಿಷನ್ ಕಂಪೌಂಡ್ ಸ್ಟಾಂಡ್ ನ ರಿಕ್ಷಾ ಚಾಲಕ, ಮಾಲಕ ರಾಘವೇಂದ್ರ ಭಟ್ (ರಾಘು ಭಟ್) ನಿಧನ.

ಕೃಷಿ ಆಧಾರಿತ ಕಾರ್ಖಾನೆ ಸ್ಥಾಪನೆಗೆ ಒತ್ತಾಯ

ಉಡುಪಿ: ಸಕ್ಕರೆ, ಎಣ್ಣೆ, ಆಯುರ್ವೇದ ಔಷಧ ಮೊದಲಾದ ಕೃಷಿ ಆಧಾರಿತ ಕಾರ್ಖಾನೆಗಳು ರೈತರಿಗೆ ತಾವು ಬೆಳೆದ ಬೆಳೆಗಳಿಗೆ ಲಾಭದಾಯಕ ಬೆಲೆ ದೊರೆಯುವುದಕ್ಕೆ ಸಹಾಯಕವಾಗಿದೆ. ಆದುದರಿಂದ, ಕೃಷಿ ಹೂಡಿಕೆದಾರರನ್ನು ಆಹ್ವಾನಿಸುವ ಮೂಲಕ ಕೃಷಿ ಆಧಾರಿತಾ ಕಾರ್ಖಾನೆಗಳನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸೂಕ್ತ ಕಾರ್ಯಯೋಜನೆಗಳನ್ನು ರೂಪಿಸಬೇಕು ಎಂದು ಫೆಬ್ರವರಿ 26ರಂದು ಕುಂಜಿಬೆಟ್ಟು ಶಾರದಾ ಮಂಟಪದಲ್ಲಿ ನಡೆದ ಉಡುಪಿ ಜಿಲ್ಲಾ ಕೃಷಿಕ ಸಂಘ ಆಯೋಜಿಸಿದ ರೈತ ಸಮೇವೇಶ ಸರಕಾರವನ್ನು ಆಗ್ರಹಿಸಿದೆ.

ಮಂಗ, ಕಾಡುಹಂದಿ, ನವಿಲು, ಕಾಡುಕೋಣವೇ ಮುಂತಾದ ಕಾಡುಪ್ರಾಣಿಗಳ ಹಾವಳಿಯಿಂದ ಯಾವುದೇ ಬೆಳೆ ಬೆಳೆಯಲು ರೈತರಿಗೆ ಸಾಧ್ಯವಾಗದ ಪರಿಸ್ಥಿತಿ ಜಿಲ್ಲೆಯಲ್ಲಿ ಸೃಷ್ಟಿಯಾಗಿದೆ. ಆದುದರಿಂದ, ಇವುಗಳನ್ನು ತಡೆಗಟ್ಟಲು ಬೇಕಾದ ರೀತಿಯಲ್ಲಿ ಸರಕಾರ ಕೂಡಲೇ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಸಮಾವೇಶ ಒತ್ತಾಯಿಸಿದೆ.

ರೈತ ಸಂಪರ್ಕ ಕೇಂದ್ರಗಳಲ್ಲಿ ರೈತರಿಗೆ ಒದಗಿಸುವ ಎಲ್ಲಾ ಕೃಷಿ ಸಲಕರಣೆಗಳ ದರಪಟ್ಟಿ ಹಾಗೂ ಸಹಾಯಧನದ ಮೊತ್ತ ಮತ್ತು ದಾಸ್ತಾನು ಪ್ರಮಾಣವನ್ನು ಸೂಚನಾ ಫಲಕದಲ್ಲಿ ಕಡ್ಡಾಯವಾಗುಇ ನಮೂದಿಸಬೇಕು, ಸಹಾಯಧನದ ರೂಪದಲ್ಲಿ ಸಲಕರಣೆಗಳನ್ನು ಪಡೆದ ರೈತರಿಗೆ ನಗದು ಬಿಲ್ ಕಡ್ಡಾಯವಾಗಿ ನೀಡಬೇಕು, ಮಣ್ಣು ಪರೀಕ್ಷೆಯನ್ನು ಉಚಿತವಾಗಿ ಮಾಡಿಕೊಡಬೇಕು, ರೈತರಿಗೆ ಹೊಸ ಪಂಪ್ ಗಳಿಗೆ ವಿಳಂಬವಿಲ್ಲದೆ ಸಂಪರ್ಕ ನೀಡಬೇಕು, ಹೆಚ್ಚುವರಿ ಶುಲ್ಕವೆಂದು ಹತ್ತು ಸಾವಿರ ರು. ಪಡೆಯುವುದನ್ನು ತಕ್ಷಣವೇ ನಿಲ್ಲಿಸಬೇಕು, ಈಗಾಗಲೇ ಅರ್ಜಿ ಸಲ್ಲಿಸಿರುವ ರೈತಿಗೆ ಎಲ್ಲಾ ಪಂಪ್ ಗಳಿಗೆ ತಕ್ಷಣವೇ ಸಂಪರ್ಕ ನೀಡಬೇಕು, ನಗರ ಮತ್ತು ಗ್ರಾಮೀಣ ಎಂಬ ವರ್ಗೀಕರಣ ಮಾಡದೆ ಇದುವರೆಗೆ ಇದ್ದಂಥ ಬಿಲ್ಲಿನ ವ್ಯತ್ಯಸ ಬಾಕಿಯನ್ನು ಮನ್ನಾ ಮಾಡಬೇಕು, ಪ್ರತಿದಿನ 24 ಗಂಟೆ 3 ಫೇಸ್ ಗುಣಮಟ್ಟದ ವಿದ್ಯುತ್ ನೀಡಬೇಕು, 2001-03ರ ಮನ್ನಾ ಅವಧಿಯಲ್ಲಿ ಪಾವತಿಸಲಾಗಿರುವ ಕೃಷಿ ಪಂಪು ವಿದ್ಯುತ್ ಬಿಲ್ ಹೊಂದಾಣಿಕೆ ಮಾಡುವಂತೆ ಆಯೋಗ ಆದೇಶ ನೀಡಿತ್ತು, ಅದೇ ಪ್ರಕಾರ ಬಿಲ್ ನಲ್ಲಿ ಹೊಂದಾಣಿಕೆ ಮಾಡಲಾಗಿರುವ ಮೊತ್ತವನ್ನು ಅದೇ ಗ್ರಾಹಕರ ಮನೆ ಬಳಕೆಯ ಬಿಲ್ ನಲ್ಲಿ ಹೋಂದಾಣಿಕೆ ಮಾಡುವಂತೆ ಆದೇಶಿಸಬೇಕು, ಯಾವುದೇ ಕಾರಣಕ್ಕೂ ಕೃಷಿ ಪಂಪುಗಳ ಬಾಕಿ ಬಿಲ್ಲನ್ನು ನೀಡಬಾರದು, ಹೆಸರು ಬದಲಾವಣೆಯ ಮತ್ತು ಅಶ್ವಶಕ್ತಿಯ ಹೆಚ್ಚು/ ಕಡಿಮೆ ಮಾಡುವ ಸಂದರ್ಭದಲ್ಲಿ ಹಳೆ ಬಾಕಿಯನ್ನು ವಸೂಲಿ ಮಾಡಬಾರದು, ವಾಣಿಜ್ಯ ಮತ್ತು ಗೃಹ ಬಳಕೆಯ ಹೊಸ ಸಂಪರ್ಕ ಪಡೆಯುವ ಸಂದರ್ಭದಲ್ಲಿ ಪಂಪ್ ಸೆಟ್ ನ ಹಳೆ ಬಿಲ್ ನ್ನು ಯಾವುದೇ ಕಾರಣಕ್ಕೂ ವಸೂಲಿ ಮಾಡಬಾರದು, ಸೋಲಾರ್ ಪಂಪುಗಳನ್ನು ರೈತರಿಗೆ ನೀಡುವ ಯೋಜನೆ ಆರಂಭಿಸಬೇಕು ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘ ಸರಕಾರಕ್ಕೆ ಮನವಿ ಮಾಡಿದೆ.

ಆದಾಯ ಮಿತಿ ಪರಿಗಣಿಸದೆ 60 ವರ್ಷಕ್ಕೆ ಮೇಲ್ಪಟ್ಟ ಕೃಷಿ, ಕೂಲಿಕಾರ್ಮಿಕರು, ಸಣ್ಣ ರೈತರಿಗೆ ಅವರ ಸೇವಾ ಅವಧಿಯಲ್ಲಿ ಕೃಷಿ ಕ್ಷೇತ್ರದಲ್ಲಿ ತಮ್ಮನ್ನು ಅವರು ತೊಡಗಿಸಿಕೊಂಡ ಕಾರಣಕ್ಕೆ ಮುಂದಿನ ನೆಮ್ಮದಿ ಜೀವನ ನಡೆಸುವಂತೆ ಕನಿಷ್ಟ 5000 ರು. ವೃದ್ದಾಪ್ಯ ವೇತನ ಕೊಡಬೇಕು, ಜಿಲ್ಲೆಯ ಗ್ರಾಮಾಂತರ ಪ್ರದೇಶಗಳಿಗೆ ನರ್ಮ್ ಬಸ್ಸುಗಳ ಸೇವೆಯನ್ನು ವಿಸ್ತರಿಸಿ ಗ್ರಾಮಾಂತರ ಭಾಗದ ಕೃಷಿಕರಿಗೆ ಪ್ರಯೋಜನ ಸಿಗುವಂತೆ ಮಾಡಬೇಕು, ಆರ್.ಟಿ.ಸಿ. ಯಲ್ಲಿ ಗೊಂದಲ ಮತ್ತು ಸಮಸ್ಯೆಗಳದ್ದು, ಇವುಗಳನ್ನು ಪರಿಹರಿಸಬೇಕು, ಅಕ್ರಮ ಸಕ್ರಮ ಜಮೀನನ್ನು ಕೂಡಲೇ ಸಕ್ರಮಗೊಳಿಸಬೇಕು, ಭೂ ಪರಿವರ್ತನಾ ನಿಯಮಗಳನ್ನು ಸರಳೀಕರಣಗೊಳಿಸಬೇಕು, ಭೂ ಮಾಪನ ಇಲಾಖೆಯಲ್ಲಿನ ಗೊಂದಲವನ್ನು ಪರಿಹರಿಸಬೇಕು, ಪವರ್ ಸ್ಪ್ರೇಯರ್, ಅಡಿಕೆ ಸುಲಿಯುವ ಯಂತ್ರ, ಹಸಿರುಮನೆ ನಿರ್ಮಾಣ, ಸ್ಪಿಂಕ್ಲರ್, ಪವರ್ ವೀಡರ್, ಅಲ್ಯೂಮಿನಿಯಂ ಏಣಿ, ತಳ್ಳುಗಾಡಿ ಇತ್ಯಾದಿಗಳ ಮೌಲ್ಯವರ್ಧಿತ ತೆರಿಗೆಯನ್ನು ರದ್ದುಪಡಿಸಬೇಕು, ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಪ್ರತೀ ಮಕ್ಕಳಿಗೆ ತರಗತಿಗೊಬ್ಬರಂತೆ ಶಿಕ್ಷಕರನ್ನು ನೇಮಕ ಮಾಡಬೇಕು, ಕುಡಿಯುವ ನೀರಿನ ಕಾರಣಕ್ಕಾಗಿ ಸ್ವರ್ಣಾ ನದಿ ನೀರಿನ ವಿದ್ಯುತ್ ಪಂಪ್ ಬಳಕೆದಾರರ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಬೇರದ ಎಂದು ಉಡುಪಿ ಜಿಲ್ಲಾ ಕೃಷಿಕ ಸಂಘದ ರೈರ ಸಮಾವೇಶ ಸರಕಾರವನ್ನು ಒತ್ತಾಯಿಸಿದೆ.

ರೈತ ಸಮಾವೇಶದಲ್ಲಿ ಸಾಧಕ ಕೃಷಿಕರನ್ನು ಸನ್ಮಾನಿಸಲಾಯಿತು. ಉಡುಪಿ ಜಿಲ್ಲಾ ಕೃಷಿಕ ಸಂಘದ ಬಾಲಕೃಷ್ಣ ಶರ್ಮ ಬಂಟಕಲ್ಲು, ಕುದಿ ಶ್ರೀನಿವಾಸ ಭಟ್, ರವೀಂದ್ರ ಗುಜ್ಜರಬೆಟ್ಟು ಉಪಸ್ಥಿತರಿದ್ದರು. .

 

Leave a Reply

Your email address will not be published. Required fields are marked *